ಹುಳುಕಡ್ಡಿ ಕೆಲವರಿಗೆ ಕೈಯಲ್ಲಿ ಬಂದರೆ ಮತ್ತೆ ಕೆಲವರಿಗೆ ಕುತ್ತಿಗೆಯಲ್ಲಿ ಬರುತ್ತದೆ ಹಾಗೆ ದೇಹದ ಹಲವು ಕಡೆಯು ಇದು ಕಾಣಿಸಿಕೊಳ್ಳುತ್ತದೆ, ಪ್ರಾರಂಭದಲ್ಲಿ ಇದನ್ನು ವಾಸಿ ಮಾಡಿಕೊಳ್ಳಬೇಕು ಇಲ್ಲವಾದರೆ ಇದು ಒಂದು ಕಡೆಯಿಂದ ಇನ್ನೊಂದು ಕಡೆಗೆ ಬೇಗ ಹರಡುತ್ತದೆ, ಇದನ್ನು ಕಡಿಮೆ ಮಾಡಿಕೊಳ್ಳಲು ಮನೆಮದ್ದುಗಳು ಇಲ್ಲಿವೆ ಓದಿ.
ಹುಳುಕಡ್ಡಿ ಸ್ವಲ್ಪವಾಗಿ ಇದ್ದಾಗಲೇ ಅದಕ್ಕೆ ಬೆಳ್ಳುಳ್ಳಿ ರಸವನ್ನು ಹತ್ತಿ ಇಂದ ಅದರ ಮೇಲೆ ಹಚ್ಚ ಬೇಕು, ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು, ಹೀಗೆ ಮಾಡಿದರೆ ಹುಳುಕಡ್ಡಿ ವಾಸಿಯಾಗುತ್ತದೆ.
ಈ ರೀತಿಯಲ್ಲಿ ದಿನಕ್ಕೆ ನಾಲ್ಕರಿಂದ ಐದು ಬಾರಿ ಮಾಡಿದರೆ ಬೇಗ ಹುಳು ಕಡ್ಡಿ ವಾಸಿಯಾಗುತ್ತದೆ, ಅದೇ ರೀತಿ ಅದಕ್ಕೆ ಅರಿಶಿನವನ್ನು ಕೂಡ ಹಚ್ಚಬಹುದು.
ಹುಳುಕಡ್ಡಿ ಸಮಸ್ಯೆ ತುಂಬಾ ಜಾಸ್ತಿಯಾಗಿದ್ದರೆ ಅದಕ್ಕೆ ಬೇವಿನ ಸೊಪ್ಪಿನ ಪೇಸ್ಟ್ 1 ಚಮಚ, ಅರಿಶಿಣ ಒಂದು ಚಮಚ, ತುಳಸಿ ಪೇಸ್ಟ್ 1 ಚಮಚ ತೆಗೆದುಕೊಂಡು ಮಿಕ್ಸ್ ಮಾಡಿ ಹುಳುಕಡ್ಡಿಗೆ ಹಚ್ಚಬೇಕು, ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು.
ಇದನ್ನು ಸಹ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಮಾಡಿದರೆ ಬೇಗ ಹುಳು ಕಡ್ಡಿ ವಾಸಿಯಾಗುತ್ತದೆ ಹಾಗೂ ಅದರ ಕಲೆಯು ಸಹ ಉಳಿಯುವುದಿಲ್ಲ.
ಒಂದು ವೇಳೆ ಹುಳುಕಡ್ಡಿ ಸಮಸ್ಯೆ ವಾಸಿಯಾಗಿ ಅದರ ಕಲೆಗಳು ಮಾತ್ರ ಹಾಗೆಯೇ ಉಳಿದು ಬಿಟ್ಟರೆ ಅದಕ್ಕೆ ಒಂದು ಸ್ಪೂನ್ ಕೊಬ್ಬರಿ ಎಣ್ಣೆ ಹಾಗೂ 1 ಸ್ಪೂನ್ ಕರ್ಪೂರ ಎರಡನ್ನು ಚೆನ್ನಾಗಿ ಮಿಕ್ಸ್ ಮಾಡಿ ಹುಳುಕಡ್ಡಿ ಕಲೆಯಾದ ಜಾಗದಲ್ಲಿ ಹಚ್ಚಬೇಕು ಹಾಗೂ ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು, ಇದನ್ನು ಸಹ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಮಾಡಿದರೆ ಕಲೆ ಮಾಯವಾಗುತ್ತದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.
Super excited