ಕಿಡ್ನಿ ಸ್ಟೋನ್’ಗೆ ಇಲ್ಲಿದೆ ನೋಡಿ ಶೀಘ್ರ ಪರಿಹಾರ!

0
3113

ನಮ್ಮ ದೈನಂದಿನ ಚಟುವಟಿಕೆಗಳನ್ನು ನಿಲ್ಲಿಸಿ ಬಿಡುವಷ್ಟು ನೋವು ಕೊಡುವ ಮೂತ್ರಪಿಂಡ ಕಲ್ಲುಗಳಿಂದ ಬಿಡುಗಡೆ ಪಡೆಯುವುದು ಅಷ್ಟೊಂದು ಸುಲಭವಲ್ಲ. ದೇಹದ ನೀರನ್ನು ಶೋಧಿಸಿ ಲವಣಗಳನ್ನು ಮತ್ತು ಕಲ್ಮಶಗಳನ್ನು ಮೂತ್ರದ ಮೂಲಕ ಹೊರ ಹಾಕುವ ಮೂತ್ರಪಿಂಡಗಳಲ್ಲಿ ಕೆಲವೊಮ್ಮೆ ಕೆಲವು ಲವಣಗಳು ಘನ ರೂಪ ಪಡೆದು ನಿಂತುಬಿಡುತ್ತದೆ. ಸತತವಾಗಿ ಶೋಧಿಸುತ್ತಾ ಹೋಗುವಾಗ ಇನ್ನಷ್ಟು ಲವಣದ ಕಣಗಳು ಆ ಕಲ್ಲಿಗೆ ಅಂಟಿಕೊಳ್ಳುತ್ತಾ ಹೋಗುತ್ತದೆ. ಸಾಮಾನ್ಯವಾಗಿ ನಮ್ಮೆಲ್ಲರ ಮೂತ್ರಪಿಂಡದಲ್ಲಿ ಕಲ್ಲುಗಳು ಚಿಕ್ಕದಾಗಿರುತ್ತದೆ. ನೀರು ಹೆಚ್ಚು ಕುಡಿದರೆ ಕಲ್ಲುಗಳು ಕರಗುತ್ತವೆ ಆದರೆ ಕೆಲವೊಂದು ಲವಣಗಳು ಗಟ್ಟಿಯಾಗಿ ಇರುತ್ತದೆ. ಇದರಿಂದ ನೋವು ಕೂಡ ಕಾಣಿಸಿಕೊಳುತ್ತೆ.

ಕೆಲವೊಂದು ಆಹಾರಗಳು ಕೆಲವೊಂದು ಕಾಯಿಲೆಗಳನ್ನು ಹೋಗಲಾಡಿಸುತ್ತವೆ. ಹಾಗೆಯೆ ನಿಮ್ಮ ಹಲವು ರೋಗಗಳಿಗೆ ಹಲವು ಮನೆಮದ್ದುಗಳು ನಿಮ ಮನೆಯಲ್ಲಿವೆ ಇರುತ್ತವೆ ಹಾಗೆ ನಿಮ್ಮ ಕಿಡ್ನಿಯಲ್ಲಿ ಹಾಗುವಂತಹ ಕಲ್ಲನ್ನು ಕರಗಿಸಲು ಈ ಬಾಳೆದಿಂಡಿನ ಪಲ್ಯ ನಿಮಗೆ ಸಹಕಾರ ಮಾಡುತ್ತದೆ.ಇದಕ್ಕೆ ಬೇಕಾಗುವ ಸಾಮಗ್ರಿಗಳು: ಬಾಳೆದಿಂಡು,ಕಡಲೇಬೇಳೆ,ತುರಿದ ತೆಂಗಿನಕಾಯಿ,ಹಸಿಮೆಣಸಿನ ಕಾಯಿ,ಒಣಮೆಣಸಿನ ಕಾಯಿ,ಬೆಲ್ಲ ಸ್ವಲ್ಪ ಹುಣಸೆಹಣ್ಣಿನ ರಸ ಉಪ್ಪು ರುಚಿಗೆ ಒಗ್ಗರಣೆಗೆಎಣ್ಣೆ, ಸಾಸಿವೆ, ಅರಿಶಿನ, ಕೊತ್ತಂಬರಿ ಸೊಪ್ಪು.

ಇನ್ನು ಈ ಪಲ್ಯವನ್ನು ಮಾಡುವ ವಿಧಾನ : ಮೊದಲಿಗೆ ಒಂದು ಕುಕ್ಕಾರ್ ಅಥವಾ ಒಂದು ಪಾತ್ರೆಯಲ್ಲಿ ಎಣ್ಣೆ ಮತ್ತು ಬಾಳೆದಿಂಡು ಹಾಗು ಒಣಮೆಣಸಿನಕಾಯಿ,ಕಡಲೆಬೇಳೆ ಹಾಕಿ ಬೇಯಿಸಿಕೊಳ್ಳಿ. ನಂತರ ಒಂದು ಮಿಕ್ಸಿಯಲ್ಲಿ ಸಾಸಿವೆ, ತೆಂಗಿನತುರಿ, ಹಸಿಮೆಣಸಿನಕಾಯಿ ಹಾಕಿ ರುಬ್ಬಿಕೊಳ್ಳಿ.ನಂತರ ಎಣ್ಣೆ, ಸಾಸಿವೆ, ಕರಿಬೇವು, ಅರಿಶಿನ ಹಾಕಿ ಒಗ್ಗರಣೆ ಹಾಕಿಕೊಳ್ಳಬೇಕು. ಇದಕ್ಕೆ ಬೇಯಿಸಿಟ್ಟುಕೊಂಡ ಬಾಳೆದಿಂಡನ್ನು ಹಾಕಿ ಉಪ್ಪು ಸ್ವಲ್ಪ ಬೆಲ್ಲ ಹುಣಸೆಹಣ್ಣಿನ ರಸ ಹಾಕಿ. ಬಳಿಕ ರುಬ್ಬಿಟ್ಟುಕೊಂಡ ಮಸಾಲಾ ಹಾಕಿ ಹುರಿಯಬೇಕು, ಆಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಬಡಿಸಿ ಒಂದು ತಟ್ಟೆಯಲ್ಲಿ ಹಾಕಿಕೊಂಡು ಸೇವಿಸಿ. ಹೀಗೆ ಸೇವಿಸುದರಿಂದ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಹೊರಬರಬಹುದು.

ಕಿಡ್ನಿ ಸ್ಟೋನ್ ಸಮಸ್ಯೆಯನ್ನು ನಿವಾರಣೆ ಮಾಡಲಿಕ್ಕೆ ಬಾಳೆದಿಂಡು ಕೂಡ ತುಂಬಾ ಉಪಯೋಗಕಾರಿ. ಅದನ್ನು ಯಾವತರ ಉಪಯೋಗಿಸಬೇಕೆಂದರೆ ಬಾಳೆದಿಂಡಿನ ಮೇಲುಗಡೆ ಇರುವಂತಹ ಪದರನ್ನು ಚೆನ್ನಾಗಿ ತೆಗೆದುಕೊಳ್ಳಿ ನಂತರ ಅದರ ಒಳಗಡೆ ಇರುವಂತಹ ದಿಂಡು ತುಂಬಾನೇ ಮೃದುವಾಗಿರುತ್ತದೆ ಅದನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ಅದರ ನೀರನ್ನು ಕುಡಿದರೆ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಸಂಪೂರ್ಣವಾಗಿ ಹೊರಬರಬಹುದು

LEAVE A REPLY

Please enter your comment!
Please enter your name here