ಜೀವನ ಎಂದರೆ ಏನು, ಜೀವನದ ಮಹತ್ವ ಎಂಥದ್ದು ಎಂದು ಮೊದಲು ನಾವು ಕೊಂಚ ತಿಳಿದುಕೊಳ್ಳಬೇಕಾಗುತ್ತದೆ. ಮದುವೆ ಆಗುವುದು, ಮಕ್ಕಳನ್ನು ಪಡೆಯುವುದು ಇಷ್ಟೆ ಜೀವನ ಅಲ್ಲ. ಜೀವನದ ಉದ್ದೇಶವೇ ಬೇರೆ. ಏನಾದರೂ ಸಾಧನೆ ಮಾಡಬೇಕು. ಸಾಧನೆ ಮಾಡಲು ಸಂಸಾರ ಅಡ್ಡ ಬರುತ್ತದೆ ಎಂಬುವುದು ಎಲ್ಲರ ಕಲ್ಪನೆ. ಸಂಸಾರದಲ್ಲಿ ಇದ್ದುಕೊಂಡೆ ಪಾರಾಮಾರ್ಥಗೆಲ್ಲಬೇಕು. ಧರ್ಮದಿಂದ ಬಾಳುವುದೇ ಉಜ್ಜೀವನವಾಗುತ್ತದೆ.
ಸಾಕಷ್ಟು ಹಣಗಳಿಸಿ ನಾನು ಸುಖವಾಗಿ ಜೀವನ ಸಾಗಿಸುತ್ತಿದ್ದೇನೆ ಎಂದು ತಿಳಿದುಕೊಂಡರೆ ಅದು ಮೂರ್ಖತನ. ನಿಜವಾದ ಸುಖ ಯಾವುದರಲ್ಲಿದೆ ಎಂದು ಯಾರೂ ತಿಳಿಯಲೂ ಪ್ರಯತ್ನಿಸುತ್ತಿಲ್ಲ. ಪ್ರತಿಯೊಬ್ಬ ಮಾನವ ನೆಮ್ಮದಿಗಾಗಿ ಹುಡುಕಾಡುತ್ತಿದ್ದಾನೆ. ಅದೇನು ಹಣಕೊಟ್ಟರೆ ಸಿಗುಬ ವಸ್ತುವೇ? ಸಾಕಷ್ಟು ಸಂಪತ್ತಿ ಇದ್ದರೆನಂತೆ ಶಾಂತಿ, ನೆಮ್ಮದಿ ಇರದಿದ್ದರೆ ಏನು ಪ್ರಯೋಜನ. ಒಳ್ಳೆ ಕಾರ್ಯ ಮಾಡಿದಾಗ, ಮನಸ್ಸು ಶುದ್ಧವಾಗಿಟ್ಟುಕೊಂಡಾಗ ಸಿಗುವ ಆನಂದವೇ ನೆಮ್ಮದಿ ಎನಿಸುತ್ತದೆ.
ಎಲ್ಲಡೆ ಅಶಾಂತಿ ತಾಂಡವವಾಡುತ್ತಿರುವ ಇಂದಿನ ದಿನಗಳಲ್ಲಿ ಶಾಂತಿ ಸಿಗುವುದಾದರೂ ಹೇಗೆ. ಉತ್ತಮ ಜೀವನ ಸಾಗಿಸಬೇಕೆಂಬ ಬಯಕೆ ಇದ್ದರೆ ಕೆಲ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಕೋ’ಪ, ಅ’ಸೂಯೆ, ಪ್ರ’ತಿಕಾರ, ದ್ವೇ’ಷ, ಅಹಂ’ಕಾರಗಳನ್ನು ಸ್ವಲ್ಪ ದೂರವಿಡಬೇಕು. ಅದು ಹೇಗೆ ಸಾಧ್ಯ. ಸಂಪೂರ್ಣವಾಗದಿದ್ದರೂ ಸ್ವಲ್ಪವನ್ನಾದರೂ ಅನುಸರಿಸಿಕೊಂಡರೆ ಸಾಕು. ಮಾತೃದೇವೋಭವ: ಪಿತೃದೇವೋಭವ ಎಂದು ನಂಬಿರುವ ನಮ್ಮ ದೇಶದಲ್ಲಿ ವೃದ್ಧಾಶ್ರಮ ಬೇಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.
ಮಕ್ಕಳ ಉಜ್ವಲ ಭವಿಷ್ಯಕ್ಕೆ ತಮ್ಮ ಜೀವನವನ್ನೆ ಮುಡಿಪಾಗಿಟ್ಟ ತಂದೆ ತಾಯಿಯರನ್ನು ಸಲುಹುವುದು ನಮ್ಮಿಂದಾಗುತ್ತಿಲ್ಲವೆ. ಏಕೆ ಹೀಗಾಗುತ್ತಿದೆ ಎಂದು ಒಮ್ಮೆಯಾದರೂ ಆಲೋಚಿಲ್ಲ. ಮುಪ್ಪಾವಸ್ಥೆಯಲ್ಲಿ ಮೊಮ್ಮಕ್ಕಳೊಂದಿಗೆ ನೆಮ್ಮದಿಯ ಜೀವನ ಸಾಗಿಸಬೇಕಿರುವ ಮಾತಾ ಪಿತೃಗಳು ಯಾರೂ ಇಲ್ಲದಂತೆ ವೃದ್ದಾಶ್ರಮದಲ್ಲಿ ಕಾಲ ಕಳೆಯುವ ಸ್ಥಿತಿ ಬಂದಿತಲ್ಲ ಎಂಬ ಕೊರಗು ನಮ್ಮನ್ನು ಕಾಡುತ್ತಿದೆ. ಭವ್ಯ ಸಂಸ್ಕೃತಿ ಹೊಂದಿರುವ ನಮ್ಮ ದೇಶದಲ್ಲಿ ವೃದ್ದಾಶ್ರಮವೇ ಜನ್ಮ ತಾಳಬಾರದಿತ್ತು.
ಇಡೀ ಪ್ರಪಂಚಕ್ಕೆ ನೀತಿ ಕಲಿಸುವ ನಮ್ಮ ದೇಶ ಇಂದು ಅಧಪತನದತ್ತ ಸಾಗುತ್ತಿದೆ. ಯುವಕರಲ್ಲಿ ಸ್ವಾರ್ಥ ಭಾವನೆಯೇ ವೃದ್ದಾಶ್ರಮ ಹುಟ್ಟಲು ಕಾರಣವಾಗಿದೆ. ಎಷ್ಟು ಜನ್ಮ ತಾಳಿದರೂ ತಾಯಿಯ ಋಣ ತೀರಿಸಲಾಗು ಎನ್ನುವುದು ಕೇವಲ ಗಾದೆ ಮಾತಾಗಿ ಉಳಿದಿದೆ. ಮಾತಾ ಪಿತೃಗಳನ್ನು ವೃದ್ದಾಶ್ರಮದಲ್ಲಿ ಬಿಟ್ಟು ಅವರ ಋಣ ತೀರಿಸುವ ಮಕ್ಕಳು ಇದ್ದರೇನು, ಬಿಟ್ಟರೇನು. ಮಕ್ಕಳನ್ನು ಬೆಳೆಸಿ ಬದುಕು ಕೊಟ್ಟ ತಂದೆ ತಾಯಿಯರನ್ನು ಮಕ್ಕಳು ನೋಡಿಕೊಳ್ಳುವ ಪರಿ ಇದು.
ಇಂಥ ಸಂಸ್ಕೃತಿ ನಾಶವಾಗಬೇಕಾದರೆ ಎಲ್ಲರೂ ಆಧ್ಯಾತ್ಮದ ಬಗ್ಗೆ ಚಿಂತನೆ ಮಾಡಬೇಕು. ಅಲ್ಪ ಸುಖದ ಹಿಂದೆ ಬೆನ್ನು ಬಿದ್ದಿರುವ ನಾವು ಪ್ರೀತಿ, ವಾತ್ಸಲ್ಯದಿಂದ ವಂಚಿತರಾಗುತ್ತಿದ್ದೇವೆ. ಹೆತ್ತ ತಂದೆ ತಾಯಿಯರನ್ನು ಮನೆಯಲ್ಲಿಟ್ಟುಕೊಳ್ಳಲಾಗದ ನಾವು ಸುಖ ಪಡೆಯುವುದಾದರೂ ಹೇಗೆ. ಕೇವಲ ಹೆಂತಿ, ಮಕ್ಕಳು ಮಾತ್ರ ಸಂಸಾರ ಎಂದು ಭಾವಿಸಿದ್ದಕ್ಕೆ ಈ ಸ್ಥಿತಿ ಬಮದೊದಗಿದೆ ಎಂಬ ಅರಿವು ನಮಗಾಗಬೇಕು. ನಮಗೂ ಒಂದು ದಿನ ವೃದ್ದಾಶ್ರಮವೇ ಗತಿ ಎಂಬ ನಿಜ ಸಂಗತಿ ನಮಗೆ ತಿಳಿದಂತಿಲ್ಲ.
ಅದು ತಿಳಿದುಕೊಂಡಿದ್ದೇ ಆದರೆ ನಾವು ಮಾತಾ ಪಿತರನ್ನು ವೃದ್ದಾಶ್ರಮಕ್ಕೆ ಸೇರಿಸುವ ಪ್ರಸಂಗವೇ ಬರುತ್ತಿರಲಿಲ್ಲ. ಗಂಡ ಹೆಂಡತಿ ಇಬ್ಬರೂ ನೌಕರಿ ಮಾಡುವ ಬರದಲ್ಲಿ ಮಕ್ಕಳನ್ನು ಹಾಸ್ಟೇಲ್ನಲ್ಲಿ ಇಟ್ಟು ಓದಿಸುತ್ತೇವೆ. ತಂದೆ, ತಾಯಿ ಪ್ರೀತಿ ಕಾಣದ ಮಕ್ಕಳು ಮುಂದೆ ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ, ಪ್ರೀತಿ ಕೊಟ್ಟು ಪಡೆದುಕೊಳ್ಳುವ ವಸ್ತು ಎಂಬುದನ್ನು ಅರಿಯಬೇಕು. ಪ್ರೀತಿ ನಾವು ಕೊಟ್ಟಷ್ಟು ಮಾತ್ರವಲ್ಲ ಅದಕ್ಕೂ ಹೆಚ್ಚಿಗೆ ಪಡೆಯಬಹುದು. ಪ್ರೀತಿ ಮಾಡಿ ಇಡೀ ವಿಶ್ವವನ್ನೇ ಗೆದ್ದವರು ಇದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರೀತಿ, ವಿಶ್ವಾಸ ಕಡಿಮೆಯಾಗುತ್ತಿದೆ. ಅದೇ ಗುರುಕುಲ ಇರಬೇಕಾದ ಸ್ಥಳಗಳಲ್ಲಿ ವೃದ್ಧಾಶ್ರಮಗಳು ತಲೆ ಎತ್ತುತ್ತಿವೆ. ಹೆತ್ತ ಮಕ್ಕಳನ್ನು ತೊರೆದು ವೃದ್ಧಾಶ್ರಮದಲ್ಲಿ ಕಾಲ ಕಳೆಯಬೇಕಾದರೆ ಆ ತಂದೆ, ತಾಯಿಯರ ಪಾಡು ಹೇಗಾಗಬಾರದು. ಅಷ್ಟಾದರೂ ಅವರು ತಮ್ಮ ಮಕ್ಕಳ ಒಳಿತನ್ನೆ ಬಯಸುತ್ತಾರೆ. ಅದುವೆ ಕರುಣೆ, ಪ್ರೀತಿ ಅನ್ನೋದು. ಒಂದು ದಿನವಾದರೂ ನಮ್ಮ ಮಕ್ಕಳು ನಮ್ಮನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ ಎಂದು ಬಾಯಿ ಬಿಡುವುದಿಲ್ಲ.
ಮುಗ್ದರನ್ನು ನೋಡಿಕೊಳ್ಳಲಾರದಷ್ಟು ಪಾಪಿಗಳಾಗುತ್ತಿದ್ದೇವೆ. ಹೆತ್ತ ತಂದೆ ತಾಯಿಯರನ್ನು ಪ್ರೀತಿಸದ ನಾವು ಜಗತ್ತನ್ನು ಪ್ರೀತಿಸುವುದಾದರೂ ಹೇಗೆ. ಅದಕ್ಕಾಗಿಯೇ ಪ್ರಪಂಚ ವಿನಾಷದತ್ತ ಸಾಗುತ್ತಿದೆ. ಜೀವನ ಎಂದರೇನು ಎಂಬುದನ್ನೆ ತಿಳಿಯದ ನಾವು ಉತ್ತಮ ಜೀವನ ಸಾಗಿಸುವ ಬಯಕೆ ಹೊಂದಿರುತ್ತೇವೆ. ಅದು ಹೇಗೆ ಸಾಧ್ಯ. ಮೊದಲು ಜೀವನ ಎಂದರೇನು ಎನ್ನುವದನ್ನು ಅರಿಯಬೇಕಿದೆ. ಬದುಕು ದುಸ್ತರವಾಗಬಾರದು, ಇಷ್ಟು ವರ್ಷ ಬದುಕಿದ್ದೇವೆ ಎನ್ನುವುದು ಮುಖ್ಯವಲ್ಲ.
ಬದುಕಿನ ದಿನಗಳಲ್ಲಿ ನಾವು ಸಾದಿಸಿದ್ದಾದರೂ ಏನು ಎಂದು ಆಲೋಚಿಸಬೇಕು. ನಮ್ಮಿಂದ ಸಮಾಜಕ್ಕೆ ಏನು ಪ್ರಯೋಜನವಾಗಿದೆ ಎನ್ನುವುದು ನಮ್ಮ ಗಮನಕ್ಕೆ ಬಂದಾಗ ಜೀವನದ ಮಹತ್ವ ತಿಳಿಯುತ್ತದೆ. ಪ್ರತಿಯೊಬ್ಬರೂ ಜೀವನ ನಡೆಸಬೇಕಾದರೆ ಏನು ಮಾಡಬೇಕು ಎನ್ನುವುದು ತಿಳಿದುಕೊಳ್ಳಲಿ ಎಂಬ ಉದ್ದೇಶದಿಂದ ಇಲ್ಲಿ ಕೆಲ ಮಾಹಿತಿಗಳನ್ನು ನೀಡಲಾಗುತ್ತಿದೆ.
ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸುಖ ಜೀವನ ನಡೆಸಲು ಸಾಧ್ಯ ಎಂಬುದು ನನ್ನ ಅಭಿಪ್ರಾಯ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.