ಅತಿಯಾದ ಸೀನು, ಅರ್ಧ ತಲೆನೋವು ಹಾಗು ಅಜೀರ್ಣಕ್ಕೆ ಮನೆಮದ್ದು..!!

0
12935

ಅತಿಯಾದ ಸೀನಿಗೆ : ಅತಿಯಾದ ಸೀನಿಗೆ  ಜೇನುಮೇಣ ತುಪ್ಪ ಮತ್ತು  ಗುಗ್ಗುಲಗಳನ್ನು ಸಮಭಾಗ ಸೇರಿಸಿ ಅರೆದು ಕೆಂಡದ ಮೇಲೆ ಹಾಕಿ ಹೋಗೆ ತೆಗೆದುಕೊಳ್ಳುವುದರಿಂದ ಅತಿಯಾದ ಸೀನು ಪರಿಹಾರವಾಗುತ್ತದೆ.

ಅರ್ಧ ತಲೆನೋವು ನಿವಾರಣೆಗೆ : ಕೆಂಪು ಮೂಲಂಗಿ ಒಳಗೆ ಸ್ವಲ್ಪ ತುಪ್ಪ ಸವರಿ ಕೆಂಡದ ಮೇಲೆ ಕಾಯಿಸಿ ಅದರ ರಸವನ್ನು ಮೂಗು ಕಿವಿಗೆ ಹಿಂಡುವುದರಿಂದ ಅರ್ಧ ತಲೆನೋವು ಪರಿಹಾರ ಈ ಚಿಕಿತ್ಸೆಯನ್ನು ಒಂದೆರಡು ದಿನ ಮುಂದುವರಿಸಲು ಅಡ್ಡಿಯಿಲ್ಲ.

ನೆಗಡಿ ಜೊತೆಗೆ ಅರ್ಧ ತಲೆನೋವು ಬರುತ್ತಿದ್ದರೆ ಕೆಂಪು ಮೂಲಂಗಿ ಎಲೆಗೆ ಸ್ವಲ್ಪ ತುಪ್ಪ ಸವರಿ ಕೆಂಡದ ಮೇಲೆ ಕಾಯಿಸಿ ಅದರ ರಸವನ್ನು ಮೂಗು ಮತ್ತು ಕಿವಿಯಲ್ಲಿ ಇರುವುದರಿಂದ ಅರ್ಧ ತಲೆಶೂಳೆಯು ನಿವಾರಣೆಯಾಗುತ್ತದೆ.

ಅಜೀರ್ಣ ಪರಿಹಾರಕ್ಕೆ : 30 ಮಿಲಿ ನಿಂಬೆರಸ 15 ಮಿಲಿ ಶುಂಠಿರಸ 0.25  ಗ್ರಾಮ್ ಸೈಂದವ ಲವಣ 15 ಮಿಲಿ ಜೇನು ಸೇರಿಸಿ ಬೆಳಿಗ್ಗೆ ಒಂದು ವಾರ ಸೇವಿಸಿದರೆ ಅಜೀರ್ಣ ಪರಿಹಾರ ಔಷಧಿ ತೆಗೆದುಕೊಂಡ ನಂತರ ಒಂದು ಗಂಟೆ ಏನನ್ನೂ ತಿನ್ನಬಾರದು.

ಅಳಲೇ ಕಾಯಿ ಸಿಪ್ಪೆ ಲವಂಗ ಸೈಂದವಲವಣಗಳ ತೂಕದಲ್ಲಿ ಸಮಭಾಗ ಕೂಡಿಸಿದ ಚೂರ್ಣದ 1.25 ಗ್ರಾಮ್ ಅನ್ನು ಬಿಸಿ ನೀರಿನಲ್ಲಿ ಕದಡಿ ಕುಡಿದರೆ ಅಜೀರ್ಣ ಪರಿಹಾರ ಅಗತ್ಯ ಕಂಡರೆ ದಿನಕ್ಕೆ  ಎರಡಾವರ್ತಿ ನಾಲ್ಕಾರು ದಿನ ಮಾಡಬೇಕು.

ಎಳೆ ಬದನೆಕಾಯಿಯನ್ನು  ಸುಟ್ಟು ಮೇಲಿನ ಕರಕನ್ನು ತೆಗೆದು ಹಾಕಿ ಅದಕ್ಕೆ ಸ್ವಲ್ಪ ಸೈಂಧವ ಲವಣ ಸೇರಿಸಿ ಹಿಚುಕಿ ತಿನ್ನುವುದರಿಂದ ಅಜೀರ್ಣ ರೋಗ ನಿವಾರಣೆಯಾಗುತ್ತದೆ ಈ ಪ್ರಯೋಗಕ್ಕೆ ಉದ್ದನೆ ಕರಿ ಬದನೆಕಾಯಿ ತುಂಬಾ ಒಳ್ಳೆಯದು.

60 ರಿಂದ 90 ಮಿಲಿ ಎಷ್ಟು ಅಗಸೆ ಎಲೆ ರಸವನ್ನು ಬಿಸಿ ನೀರಿನೊಡನೆ ಪ್ರತಿನಿತ್ಯ ಎರಡು ವೇಳೆಯಂತೆ ಕನಿಷ್ಠ ಒಂದು ವಾರವಾದರೂ ಸೇವಿಸಬೇಕು ಇದರಿಂದ ಅಜೀರ್ಣ ಪರಿಹಾರವಾಗುತ್ತದೆ ಇದು ದೇಹಾರೋಗ್ಯಕ್ಕೊ ಒಳ್ಳೆಯದು.

ಪ್ರತಿದಿನ ಊಟಕ್ಕೆ ಮೊದಲು ಸ್ವಲ್ಪ ಹಸಿ  ಶುಂಠಿಯನ್ನು 2 ಚಿಟಕಿಯಷ್ಟು ಸೈಂದವ ಲವಣ ಅಥವಾ ಅಡುಗೆ ಉಪ್ಪಿನೊಂದಿಗೆ ಸೇರಿಸಿ ಚೆನ್ನಾಗಿ ಜಗಿದು ತಿನ್ನುವುದರಿಂದ ಅಜೀರ್ಣ ರೋಗವು ನಿವಾರಣೆಯಾಗುತ್ತದೆ ಹೀಗೆ ಕನಿಷ್ಠ ನಾಲ್ಕೈದು ದಿನ.

ಅಜೀರ್ಣವಾಗಿದ್ದರೆ ನುಣ್ಣಗಿನ ವಸ್ತ್ರಗಾಳಿತ ಸ್ವಲ್ಪವೇ ಸ್ವಲ್ಪ ಅಜವನ ಚೂರ್ಣವನ್ನು ಬಿಸಿ ನೀರಿನಲ್ಲಿ ಕದಡಿ ಕುಡಿಯುವುದರಿಂದ ಪರಿಹಾರವಾಗುತ್ತದೆ ದಿನಕ್ಕೆ ಎರಡು ವೇಳೆ ಒಂದು ವಾರ ಮಾಡಬೇಕು.

ಕರಿಬೇವಿನ ಸೊಪ್ಪು ಅಳಲೇಕಾಯಿ ಸಿಪ್ಪೆ ಶುಂಠಿಯನ್ನು ಸಮಪ್ರಮಾಣದಲ್ಲಿ ಸೇರಿಸಿ ಕುಟ್ಟಿ ಅಷ್ಟಾವಶೇಷ ಕಷಾಯ ಮಾಡಿ ನಿತ್ಯ ಎರಡು ವೇಳೆ ಅರ್ಧ ಬೆಳಗ್ಗೆ ಅರ್ಧ ರಾತ್ರಿ ಕುಡಿಯುವುದರಿಂದ ಅಜೀರ್ಣ ರೋಗ ಮಾಯವಾಗುತ್ತದೆ.

ಕವಿಜೀರಿಗೆಯನ್ನು  ನುಣ್ಣಗೆ ಮಾಡಿ ಸ್ವಲ್ಪ ನೀರಿನಲ್ಲಿ ಕಷಾಯ ಮಾಡಿ ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಪ್ರತಿದಿನ ಎರಡು ಹೊತ್ತು ಮೂರು ದಿನ ಕುಡಿಯಬೇಕು ಇದರಿಂದ ಎಲ್ಲಾ ಬಗೆಯ ಅಜೀರ್ಣವು ಮಾಯವಾಗುತ್ತದೆ.

ಕಾಲು ಚಮಚ ಸಾಸಿವೆಯನ್ನುೂ ಅಷ್ಟೇ ಉಪ್ಪನ್ನು ಸೇರಿಸಿ ಬಿಸಿ ನೀರಿನಲ್ಲಿ ನುಣ್ಣಗೆ ಅರೆದು ಸೇವಿಸುವುದರಿಂದ ಅಜೀರ್ಣ ರೋಗ ನಿವಾರಣೆಯಾಗುತ್ತದೆ ಹೀಗೆ ಮೂರ್ನಾಲ್ಕು ದಿನ.

ಅಜೀರ್ಣವಾಗಿದ್ದರೆ ನಿತ್ಯ ಬೆಳಗ್ಗೆ ಒಳ್ಳೆಯ ಪಪ್ಪಾಯಿಹಣ್ಣನ್ನು ಮಾತ್ರ ತಿಂದು ಮೇಲೆ ಬಿಸಿ ನೀರು ಕುಡಿಯಬೇಕು ಇದರಿಂದ ಆ ರುಚಿ ಅಜೀರ್ಣ ನಿವಾರಣೆಯಾಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here