ಹಾಸನ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಾಜಿ ಸಚಿವ ರೇವಣ್ಣನವರು ನಾನು ಮಾಸ್ಕ್ ಹಾಕದೆ ಹೊರಗೆ ಹೋಗುತ್ತೇನೆ, ಬೇಕಾದರೆ ನನ್ನನ್ನು ಪೊಲೀಸರು ಬಂಧಿಸಲಿ, ಆಗ ಜೈಲಿನಲ್ಲಿ ಊಟವಾದರೂ ಸಿಗುತ್ತದೆ ಎಂದು ಪ್ರಸ್ತುತ ಸ್ಥಿತಿಯ ಬಗ್ಗೆ ವ್ಯಂಗ್ಯಮಾಡಿದ್ದಾರೆ.
ರಾಜ್ಯದಲ್ಲಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಆಕ್ರೋಶ ಹೊರಹಾಕಿದರು, ದೇಶದ ಪ್ರಧಾನಿಗಳ ಹಾಗೂ ಮುಖ್ಯಮಂತ್ರಿಗಳ ಮಾತನ್ನು ಜನ ಪಾಲಿಸುತ್ತಿದ್ದಾರೆ, ರಾಷ್ಟ್ರದ ದೊರೆ ಮೋದಿಯವರು ಹೇಳಿದ್ದನ್ನು ಕೇಳಿದ್ದೇವೆ, ದೀಪ ಹಚ್ಚು ಎಂದಾಗಲೂ ಹಚ್ಚಿದ್ದೇವೆ, ಬ್ಲಾಕ್ ಮಾಡು ಎಂದಾಗಲೂ ಮಾಡಿದ್ದೇವೆ, ಈಗ ನಮ್ಮ ರಾಷ್ಟ್ರದ ದೊರೆ ಹಸಿದ ಹೊಟ್ಟೆಗೆ ಊಟ ಕೊಡಲಿ ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಾಸಕರ ಮತ್ತು ವಿಧಾನಪರಿಷತ್ ಸದಸ್ಯರು ನಿಧಿ ಸ್ಥಗಿತಗೊಳಿಸಿದ್ದಾರೆ, ಈ ರೀತಿ ಸಿಎಂ ವಿಧಾನಪರಿಷತ್ ಸದಸ್ಯರ ನಿಧಿಯನ್ನು ಸ್ಥಗಿತಗೊಳಿಸ ಬಾರದು ಎಂದು ಮನವಿ ಮಾಡಿ ರಾಜ್ಯ ಸರ್ಕಾರದ ಮೇಲೆ ಗರಂ ಆದರು, ಅಷ್ಟೇ ಅಲ್ಲದೆ ರಾಜ್ಯದ ಜನರು ಮುಖ್ಯಮಂತ್ರಿಗಳ ಪರಿಹಾರ ಎಷ್ಟು ಹಣ ನೀಡಿದ್ದಾರೆ ಎಂದು ಶ್ವೇತಪತ್ರ ಹೊರಡಿಸಲಿ, ಹಣವಿಲ್ಲ ವಾದರೆ ಹಣ ಹೇಗೆ ಬರುತ್ತದೆ ಅಂತ ತೋರಿಸುತ್ತೇವೆ, ಪಕ್ಷಾತೀತವಾಗಿ ಜನರ ಸಮಸ್ಯೆಗಳಿಗೆ ಕೈಜೋಡಿಸೋಣ ಎಂದರು.