ಈ 8 ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು ಮುಖ ಬೆಳ್ಳಗೆ ಆಗುತ್ತದೆ

0
5484

ಬೆಳ್ಳಗೆ ಕಾಣಲು ಯಾರಿಗೆ ಇಷ್ಟವಿಲ್ಲ ಹೇಳಿ ? ಅಂದವಾಗಿ ಚೆಂದವಾಗಿ ಕಾಣಲು ಎಲ್ಲರೂ ಆಸೆಪಡುತ್ತಾರೆ. ಈಗಿನ ಬಿಸಿಲಿನ ವಾತಾವರಣ, ಚಳಿಗಾಲದಲ್ಲಿ ಮುಖ ಕಳೆಗುಂದಿ ಕಪ್ಪಾಗಿರುತ್ತದೆ. ಅದಕ್ಕೆ ಈ 8 ಸಿಂಪಲ್ ಟಿಪ್ಸ್ ಬಳಸಿ ನೋಡಿ.

ಮೊದಲನೆಯದು ಮುಖದ ತುಂಬಾ ಮೊಡವೆಯಾಗಿ ಅದರ ಕಲೆ ಹಾಗೇ ಉಳಿದಿದ್ದರೆ ಅದನ್ನು ಹೋಗಲಾಡಿಸಲು ಮೊಟ್ಟೆಯ ಬಿಳಿ ಉಪಯೋಗಕಾರಿ. ಹಸಿ ಮೊಟ್ಟೆಯನ್ನು ಒಡೆದು ಅದರಲ್ಲಿ ಬಿಳಿಯ ಭಾಗವನ್ನು ಮುಖದ ಮಚ್ಚೆ ಮತ್ತು ಕಪ್ಪು ಕಲೆಯ ಮೇಲೆ ಹಚ್ಚಿಕೊಳ್ಳಬೇಕು. ಹತ್ತು ನಿಮಿಷಗಳ ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಬೇಕು. ಮೊಟ್ಟೆಯ ಬಿಳಿಭಾಗದಲ್ಲುರುವ ವಿಟಮಿನ್ ಮತ್ತು ಪ್ರೋಟೀನ್ ಗಳು ಚರ್ಮವನ್ನು ಪುನರುಜ್ಜೀವನಗೊಳಿಸುತ್ತದೆ.

ಎರಡನೆಯದು ಟಮೋಟ ರಸವನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷಗಳ ನಂತರ ಮುಖ ತೊಳೆದುಕೊಳ್ಳಬೇಕು. ಟಮೊಟದಲ್ಲಿರುವ ವಿಟಮಿನ್ ಎ ಚರ್ಮವನ್ನು ಕಾಂತಿಯುತಗೊಳಿಸುತ್ತದೆ.

ಮೂರನೆಯದು ಲೋಳೆರಸ ಮತ್ತು ಒಂದು ಚಮಚ ಅರಿಸಿನವನ್ನು ಮಿಶ್ರಣ ಮಾಡಿ ಮೊಡವೆ ಭಾಗಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆಯಬೇಕು. ಲೋಳೆರಸ ದೇಹದ ವಿಷಕಾರಿ ಅಂಶಗಳನ್ನು ಹೊರಹಾಕುವುದರ ಜೊತೆಗೆ ಚರ್ಮವನ್ನು ಕಾಂತಿಗೊಳಿಸುತ್ತೆ.

ಮೊಡವೆಗಳ ನಿವಾರಣೆಗೆ ಅವರಿಕೆ ಮರದ ಎಣ್ಣೆ ಬಹಳ ಉಪಯೋಗಕಾರಿ. ಎರಡು ಮೂರು ಹನಿ ಅವರಿಕೆ ಎಣ್ಣೆಯನ್ನು ಸೂರ್ಯಕಾಂತಿ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಮೊಡವೆಗಳ ಜಾಗಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯದ ನಂತರ ತೊಳೆದುಕೊಳ್ಳಬೇಕು. ಅವರಿಕೆ ಎಣ್ಣೆ ಮುಖಕ್ಕೆ ಮೊಡವೆ ಕಲೆ ಹೋಗಲಾಡಿಸುತ್ತೆ ಮತ್ತು ಮತ್ತೆ ಬರದಂತೆ ತಡೆಗಟ್ಟುತ್ತೆ.

ನಿಂಬೆಹಣ್ಣು ಮೊಡವೆ ನಿವಾರಣೆಗೆ ರಾಮಬಾಣ. ನಿಂಬೆ ಹಣ್ಣಿನಲ್ಲಿರುವ ವಿಟಮಿನ್ ಸಿ ಚರ್ಮವನ್ನು ಆರೋಗ್ಯಕರವಾಗಿಡುತ್ತೆ. ಅರ್ಧ ಹೋಳು ನಿಂಬೆಹಣ್ಣಿಗೆ ಎರಡರಷ್ಟು ಗ್ಲಿಸರಿನ್ ಬೆರೆಸಿ ಮುಖಕ್ಕೆ ಹಚ್ಚಿ ನಂತರ ಸ್ವಲ್ಪ ಸಮಯದ ನಂತರ ತೊಳೆಯಬೇಕು.

ಮೆಂತೆಯಲ್ಲಿ ಮೊಡವೆ ನಿವಾರಣೆಗೆ ಬೆಕಾಗುವ ಕಿಣ್ವಗಳು ಇರುತ್ತವೆ. ಒಂದು ಚಮಚ ಮೆಂತೆಯನ್ನು ಹಾಲಿನೊಂದಿಗೆ ರಾತ್ರಿ ಬೆರಸಿ ನೆನೆಸಿಡಬೇಕು. ಬೆಳಿಗ್ಗೆ ಅದನ್ನು ರುಬ್ಬಿ ಲೇಪನವನ್ನು ಮಾಡಿ ಮುಖಕ್ಕೆ ಹಚ್ಚಿಕೊಳ್ಳಬೇಕು. ನಂತರ ಇಪ್ಪತ್ತು ನಿಮಿಷಗಳ ನಂತರ ಮುಖ ತೊಳೆದುಕೊಳ್ಳಬೇಕು.

ಚರ್ಮದ ತೇವಾಂಶವನ್ನು ಕಾಪಾಡಲು ಕೊಬ್ಬರಿ ಎಣ್ಣೆ ಮುಖ್ಯ ಪಾತ್ರ ವಹಿಸುತ್ತದೆ. ರಾತ್ರಿ ಒಂದು ಚಮಚ ಶುದ್ದವಾದ ಕೊಬ್ಬರಿ ಎಣ್ಣೆಯನ್ನು ಮುಖಕ್ಕೆ ಹಚ್ಚಿ ಬೆಳಿಗ್ಗೆ ಹತ್ತಿಯಿಂದ ಎಣ್ಣೆ ಅಂಶವನ್ನು ತೆಗೆದು ಮುಖವನ್ನು ತೊಳೆಯಬೇಕು.

ಆಲೂಗಡ್ಡೆ ರಸ ಮುಖದ ಬಣ್ಣ ಕೆಡದಂತೆ ಕಾಪಾಡುತ್ತೆ. ಆಲೂಗಡ್ಡೆಯನ್ನು ಜಜ್ಜಿ ರಸ ಮಾಡಿಕೊಂಡು ಅದನ್ನು ಮೊಡವೆಗಳ ಜಾಗಕ್ಕೆ ಹಚ್ಚಿ ಸ್ವಲ್ಪ ಸಮಯದ ನಂತರ ತೊಳೆದುಕೊಳ್ಳಬೇಕು.

ಇವೆಲ್ಲ ಟಿಪ್ಸ್ ನಿಮ್ಮ ಆರೋಗ್ಯಕರ ಚರ್ಮ ಕಾಪಾಡಲು ಸಹಕಾರಿಯಾಗುತ್ತೆ. ನೀವು ಅಂದವಾಗಿ ಕಲೆ ರಹಿತವಾಗಿ ಕಾಣಬಹುದು.

LEAVE A REPLY

Please enter your comment!
Please enter your name here