ಬೆಳಗ್ಗೆ ಬೇಗ ಏಳಿ : ಸೂರ್ಯೋದಯಕ್ಕೂ ಮೊದಲು ಏಳಬೇಕಂತ ನಮ್ಮ ಹಿರಿಯರು ಹೇಳುತ್ತಾರೆ, ಬೆಳಗ್ಗಿನ ವಾತಾವರಣ ಮನಸ್ಸಿಗೆ ತುಂಬಾ ಆಹ್ಲಾದವನ್ನು ಕೊಡುತ್ತದೆ ಬೆಳಗ್ಗಿನ ನಡಿಗೆ ಎಲ್ಲ ರೋಗಕ್ಕೂ ಮದ್ದು ಎಂದು ವೈದ್ಯರು ಹೇಳುತ್ತಾರೆ.
ವ್ಯಾಯಾಮ ಮಾಡಿ : ಪ್ರತಿದಿನ ನಾವು ವ್ಯಾಯಾಮ ಮಾಡುವುದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು, ಪ್ರತಿದಿನ ಕನಿಷ್ಟ ಪಕ್ಷ 30 ನಿಮಿಷವಾದರೂ ದೈಹಿಕ ಚಟುವಟಿಕೆ ಅತಿ ಅವಶ್ಯಕ, ಬೆಳಗ್ಗಿನ ವೇಗದ ನಡಿಗೆ ಎಲ್ಲ ರೋಗಗಳನ್ನು ಹೊಡೆದೋಡಿಸುತ್ತದೆ.
10 ನಿಮಿಷ ಧ್ಯಾನ ಮಾಡಿ : ಧ್ಯಾನವು ನಮ್ಮ ಮಾನಸಿಕ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು, ಇದು ಮಾನಸಿಕ ಆತಂಕ, ಖಿನ್ನತೆ, ಕೋಪ ಮತ್ತು ಗೊಂದಲವನ್ನು ಹೊಡೆದಟ್ಟಿ ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತದೆ.
ನೀರನ್ನು ಕುಡಿಯಿರಿ : ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರನ್ನು ಕುಡಿಯುವುದರಿಂದ ದೇಹದ ಒಳಗೆ ಸಂಗ್ರಹವಾಗಿರುವ ಟಾಕ್ಸಿನ್ಸ್ ಹೊರಹಾಕಲ್ಪಡುತ್ತದೆ, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ 2 ರಿಂದ 3 ಲೀಟರ್ ನೀರನ್ನು ಕುಡಿಯಿರಿ.
ನಿಮ್ಮ ಗುರಿಗಳ ಬಗ್ಗೆ ವಿಮರ್ಶೆ : ನಿಮ್ಮ ಈ ದಿನದ ಗುರಿಗಳೇನು? ಅವುಗಳನ್ನು ತಲುಪಲು ಏನೇನು ಸಿದ್ಧತೆಗಳು ಬೇಕು? ಎಂದು ಸ್ವಲ್ಪ ವಿಮರ್ಶೆ ಮಾಡಿ ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳಿ, ಇದರಿಂದ ನೀವು ಸುಲಭವಾಗಿ ನಿಮ್ಮ ಗುರಿಯನ್ನು ತಲುಪಲು ಸಾಧ್ಯ.
ನಗು : ನೀವು ನಗುವಿನ ಪ್ರಾಮುಖ್ಯತೆ ಬಗ್ಗೆ ಕೇಳಿರಬಹುದು ಅಲ್ವಾ ನಗುವಿನೊಂದಿಗೆ ನಿಮ್ಮ ದಿನವನ್ನು ಆರಂಭಿಸಿ ನಗು ನಮ್ಮನ್ನು ಖುಷಿಯಾಗಿ ಇಡುವುದಲ್ಲದೆ ನಮ್ಮನ್ನು ನೋಡುವವರನ್ನು ನಮ್ಮಡೆಗೆ ಆಕರ್ಷಿಸುತ್ತದೆ ಇದು ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ.
ಒಳ್ಳೆಯ ಆಹಾರವನ್ನು ಸೇವಿಸಿ : ನಮ್ಮ ಬಾಯಿಗೆ ಹೆಚ್ಚು ರುಚಿಯಾಗಿರುವುದು ದೇಹಕ್ಕೆ ಹೆಚ್ಚು ಕಹಿ ಆದರಿಂದ ನೀವು ಆಹಾರ ಪದಾರ್ಥಗಳನ್ನು ಸೇವಿಸುವ ಮುನ್ನ ಅದರ ಪೌಷ್ಠಿಕಾಂಶಗಳ ಬಗ್ಗೆ ಮತ್ತು ಅದರಿಂದ ನಿಮಗೆ ಉಪಯುಕ್ತವಾಗುವ ಅಂಶಗಳ ಬಗ್ಗೆ ಮೊದಲು ಗಮನಹರಿಸಿ ನಿಮಗೆ ಆರೋಗ್ಯವಾದ ಮತ್ತು ಸದೃಢವಾದ ದೇಹ ಇದ್ದಲ್ಲಿ, ನೀವು ಸೇವಿಸುವ ಪ್ರತಿಯೊಂದು ತುತ್ತಿನ ಆಹಾರವೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ನಿಮ್ಮ ಆಹಾರದಲ್ಲಿ ಹಣ್ಣು ತರಕಾರಿಗಳು, ಹಸಿರು ಸೊಪ್ಪುಗಳು ಹೇರಳವಾಗಿರಲಿ.
ಒಳ್ಳೆಯ ನಿದ್ರೆ : ಒಳ್ಳೆಯ ಆರೋಗ್ಯವನ್ನು ಪಡೆಯಲು ನಮ್ಮ ದೇಹಕ್ಕೆ ಸರಿಯಾದ ವಿಶ್ರಾಂತಿಯನ್ನು ಕೊಡುವ ನಿದ್ರೆ ತುಂಬಾ ಅಗತ್ಯ ಆರೋಗ್ಯವಂತ ವ್ಯಕ್ತಿಗೆ ಸರಾಸರಿ 8 ಗಂಟೆಗಳ ನಿದ್ರೆ ಅತಿ ಅಗತ್ಯ ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವುದು ಒಳ್ಳೆಯ ಆರೋಗ್ಯಕರ ಅಭ್ಯಾಸವಾಗಿದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.