ನಿಮ್ಮ ಮನೆಯಲ್ಲಿ ಕೂತು ಮೊಬೈಲ್ ನಲ್ಲಿ ವೋಟರ್ ಐಡಿ ಪಡೆಯುವ ಸುಲಭ ವಿಧಾನ..!!

0
6461

ಚುನಾವಣೆ ಹತ್ತಿರ ಬರುತ್ತಿದೆ, ಸಾರ್ವಜನಿಕರ ನಾವು ನಮ್ಮ ನೆಚ್ಚಿನ ಪಕ್ಷವನ್ನು ಅಥವಾ ಚುನಾವಣಾ ಅಭ್ಯರ್ಥಿಯನ್ನು ಗುರುತಿಸಿ ವೋಟ್ ಮಾಡುವುದು ನಾಗರಿಕರಾದ ಪ್ರತಿಯೊಬ್ಬರ ಜವಾಬ್ದಾರಿ, ಹಾಗೂ ಮತ ಚಲಾವಣೆಗೆ ಬೇಕಾದ ಅತಿ ಮುಖ್ಯವಾದ ದಾಖಲೆ ವೋಟರ್ ಐಡಿ, ವೋಟರ್ ಐಡಿ ನಿಮ್ಮ ಬಳಿ ಇಲ್ಲ ಎಂದರೆ ಅಥವಾ ವೋಟರ್ ಐಡಿಯಲ್ಲಿ ನಿಮ್ಮ ವಿಳಾಸವನ್ನು ಬದಲಿಸಬೇಕಾದ ರೆ ಚುನಾವಣೆ ಕಚೇರಿಯ ಮುಂಭಾಗದ ಮುಂದೆ ಉದ್ದನೆಯ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ ಆನ್ ಲೈನ್ ಮುಖಾಂತರವೇ ವೋಟರ್ ಐಡಿ ಅಡ್ರೆಸ್ ಬದಲಾವಣೆ ಹಾಗೂ ಇನ್ನಿತರ ಅರ್ಜಿಗಳನ್ನು ಸಲ್ಲಿಸಬಹುದು.

ಆನ್ಲೈನ್ ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಬಳಿ ಇರಬೇಕಾದ ದಾಖಲೆಗಳು ಇಂತಿವೆ.

ಪಾಸ್ಪೋರ್ಟ್ ಸೈಜ್ ಫೋಟೋ, ಹುಟ್ಟಿದ ದಿನಾಂಕ, ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ಐದನೇ, ಎಂಟನೇ ಅಥವಾ ಹತ್ತನೇ ತರಗತಿಯ ಮಾರ್ಕ್ಸ್ ಕಾರ್ಡ್ ಹಾಗೂ ಇನ್ನಿತರ ಗುರುತಿನ ಆಧಾರ.

ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಸುಲಭ ವಿಧಾನ.

ಆನ್‌ಲೈನಿನಲ್ಲಿ ‘ವೋಟರ್ ಐಡಿ’ ವಿಳಾಸವನ್ನು ಬದಲಾಯಿಸಲುರಾಷ್ಟ್ರೀಯ ಮತದಾರರ ಸೇವೆ ಅಧಿಕೃತ ವೆಬ್‌ಸೈಟ್ ತೆರೆಯಿರಿ.ಈ ಲಿಂಕ್ http://www.nvsp.in ಅನ್ನು ಕ್ಲಿಕ್ ಮಾಡಿ, ರಾಷ್ಟ್ರೀಯ ಮತದಾರರ ಸೇವೆ ಅಧಿಕೃತ ವೆಬ್‌ಸೈಟ್ ತೆರೆದ ನಂತರ ‘Apply online for registration of new voter/due to shifting from AC’ ಆಯ್ಕೆಯನ್ನು ಕ್ಲಿಕ್ ಮಾಡಿ.

ಇದಾದ ನಂತರ ಒದಗಿಸಿದ ಲಭ್ಯವಿರುವ ಆಯ್ಕೆಗಳಿಂದ ಫಾರ್ಮ್ 6A/8A ಅನ್ನು ಆಯ್ಕೆ ಮಾಡಿ, ನಂತರ ಆನ್ಲೈನ್ ಫಾರ್ಮ್ ಹೊಸ ಟ್ಯಾಬ್‌ನಲ್ಲಿ ನಿಮಗೆ ಗೋಚರಿಸುತ್ತದೆ, ನಿಮ್ಮ ಹೆಸರು ಮತ್ತು ವಿಳಾಸ, ರಾಜ್ಯ, ಕ್ಷೇತ್ರ ಮತ್ತು ನಿಮ್ಮ ಹೊಸ ವಿಳಾಸವನ್ನೂ ಒಳಗೊಂಡಂತೆ ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.

ನಿಮ್ಮ ಪ್ರಸ್ತುತ ವಿಳಾಸವನ್ನು (ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ಅಥವಾ ಯಾವುದೇ ಅಧಿಕೃತ ಡಾಕ್ಯುಮೆಂಟ್) ತಿಳಿಸುವ ಡಾಕ್ಯುಮೆಂಟ್ ಅನ್ನು ಅಪ್ಲೋಡ್ ಮಾಡಿ, ಒಮ್ಮೆ ನೀವು ದಾಖಲೆಗಳನ್ನು ಭರ್ತಿ ಮಾಡಿ ಮತ್ತು ಅಪ್ಲೋಡ್ ಮಾಡಿಕೊಂಡು ಫಾರ್ಮ್ ಅನ್ನು ಆನ್‌ಲೈನಿನಲ್ಲೇ ಸಲ್ಲಿಸಿ. ಇದಕ್ಕಾಗಿ ಸಬ್‌ಮಿಟ್ ಬಟನ್ ಅನ್ನು ಒತ್ತಿರಿ.

ನೀವು ಆನ್ಲೈನ್ನಲ್ಲಿ ನಿಮ್ಮ ಅಪ್ಲಿಕೇಶನ್ ಅನ್ನು ಟ್ರ್ಯಾಕ್ ಮಾಡಲು ಬಳಸಬಹುದಾದ ಉಲ್ಲೇಖ ಸಂಖ್ಯೆಯನ್ನು ನೀವು ಸ್ವೀಕರಿಸುತ್ತೀರಿ. ಇದರಿಂದ ನೀವು ಅರ್ಜಿಯನ್ನು ಟ್ರ್ಯಾಕ್ ಮಾಡಬಹುದು, ನಿಮ್ಮ ವೋಟರ್ ಐಡಿ ಸಿಗಲು ಒಂದು ತಿಂಗಳ ಸಮಯ ಬೇಕಾಗ ಬಹುದು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here