ರುದ್ರನ ‘ಅಕ್ಷಿ’ಯೇ ರುದ್ರಾಕ್ಷಿ, ಅರ್ಥಾತ್ ಹಿಂದೂ ಧರ್ಮದ ಪ್ರಕಾರ ರುದ್ರಾಕ್ಷಿಯನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತದೆ ಹೀಗಾಗಿ ರುದ್ರಾಕ್ಷಿಗೆ ಪೂಜೆ-ಪುನಸ್ಕಾರಗಳಲ್ಲಿ ವಿಶೇಷವಾದ ಸ್ಥಾನವಿದೆ, ಹಿಮಾಲಯ ಮತ್ತು ನೇಪಾಳದ ಪ್ರದೇಶಗಳಲ್ಲಿ ರುದ್ರಾಕ್ಷಿ ಮರಗಳನ್ನು ಹೆಚ್ಚಾಗಿ ಕಾಣಬಹುದಾಗಿದೆ, ಈ ವೃಕ್ಷಗಳು ಶೀಘ್ರಗತಿಯಲ್ಲಿ ಫಲ ಬಿಡುವ ಜಾತಿಗೆ ಸೇರಿದ್ದು, ಮೂರ್ನಾಲ್ಕು ವರ್ಷಗಳಲ್ಲೇ ರುದ್ರಾಕ್ಷಿ ಬೀಜಗಳನ್ನು ಬಿಡತೊಡಗುತ್ತವೆ, ಇಂಥ ರುದ್ರಾಕ್ಷಿಗಳಲ್ಲಿ ಏಕಮುಖದಿಂದ ಹಿಡಿದು ಇಪ್ಪತ್ತೊಂದು ಮುಖದ ರುದ್ರಾಕ್ಷಿವರೆಗೂ ಒಳಜಾತಿಗಳಿವೆ, ಪ್ರತಿಯೊಂದಕ್ಕೂ ಅದರದೇ ಆದ ಸ್ಥಾನಮಾನವಿದೆ, ಇದೇ ಕಾರಣಕ್ಕೆ ಭಕ್ತಾದಿಗಳು ರುದ್ರಾಕ್ಷಿಮಾಲೆಯನ್ನು ಧರಿಸುವದುಂಟು.
ರುದ್ರಾಕ್ಷಿ ಹರಳನ್ನು ಮಾಲೆಯ ರೂಪದಲ್ಲಿ ಮತ್ತು ಪ್ರಾರ್ಥನೆಯ ಸಮಯದಲ್ಲಿ ಜಪ ತಪಗಳನ್ನು ಮಾಡಲು ಬಳಸುತ್ತಾರೆ, ರುದ್ರಾಕ್ಷಿಯ ಹರಳಿಗೆ 21 ಮುಖಗಳಿವೆ, 1 ರಿಂದ 4 ಮುಖಗಳುಳ್ಳ ರುದ್ರಾಕ್ಷಿಯನ್ನು ಮನುಷ್ಯರು ಧರಿಸಬಹುದು, ಪ್ರತಿಯೊಂದು ಮುಖದ ಹರಳೂ ಕೂಡ ಒಂದೊಂದು ಮಹತ್ವವನ್ನು ಹೊಂದಿದ್ದು ತೇಜಸ್ವಿ ಶಕ್ತಿಯನ್ನು ಒಳಗೊಂಡಿದೆ, ರುದ್ರಾಕ್ಷಿಯನ್ನು ಧರಿಸಿದ ಮನುಷ್ಯನಲ್ಲಿ ಧನಾತ್ಮಕ ಶಕ್ತಿಗಳು ಹುಟ್ಟಿಕೊಳ್ಳುತ್ತವೆ ಹಾಗೂ ದುಷ್ಟ ಶಕ್ತಿಯ ವಿರುದ್ಧ ಹೋರಾಡುವ ಚೈತನ್ಯವುಂಟಾಗುತ್ತದೆ ಎಂಬ ನಂಬಿಕೆಯೂ ಪ್ರಬಲವಾಗಿದೆ.
ರುದ್ರಾಕ್ಷಿಯನ್ನು ಧರಿಸಿಕೊಳ್ಳುವ ಮೊದಲು ಅದನ್ನು ಪೂಜಿಸಬೇಕು ಹಾಗೂ ಅದನ್ನು ಧರಿಸಿಕೊಳ್ಳುವಾಗ ಹಾಗೂ ಧರಿಸಿಕೊ೦ಡಿರುವಾಗ ಶಿವಮ೦ತ್ರಗಳ ಪಠಣವನ್ನು ಮಾಡಬೇಕು, ಅಷ್ಟೇ ಅಲ್ಲದೆ ರುದ್ರಾಕ್ಷಿಯ ಪ್ರತಿಯೊಂದು ಮುಖದ ಹರಳೂ ಕೂಡ ಒಂದೊಂದು ಮಹತ್ವವನ್ನು ಹೊಂದಿದ್ದು ತೇಜಸ್ವಿ ಶಕ್ತಿಯನ್ನು ಒಳಗೊಂಡಿದೆ, ರುದ್ರಾಕ್ಷಿಯನ್ನು ಧರಿಸಿದ ಮನುಷ್ಯನಲ್ಲಿ ಧನಾತ್ಮಕ ಶಕ್ತಿಗಳು ಹುಟ್ಟಿಕೊಳ್ಳುತ್ತವೆ ಹಾಗೂ ದುಷ್ಟ ಶಕ್ತಿಯ ವಿರುದ್ಧ ಹೋರಾಡುವ ಚೈತನ್ಯವುಂಟಾಗುತ್ತದೆ ಎಂಬ ನಂಬಿಕೆಯೂ ಪ್ರಬಲವಾಗಿದೆ.
ರುದ್ರಾಕ್ಷಿಯ 14 ಪ್ರಕಾರಗಳು ಇವೆ ಅವು ಇಲ್ಲಿವೆ ನೋಡಿ,
ಏಕ ಮುಖಿ ರುದ್ರಾಕ್ಷ : ಈ ಏಕ ಮುಖದ ರುದ್ರಾಕ್ಷಿಯನ್ನು ಶಿವನಿಗೆ ಅತಿ ಸಮೀಪದ್ದೆಂದು ಪರಿಗಣಿಸಲಾಗುತ್ತದೆ, ಈ ರುದ್ರಾಕ್ಷಿಗಿರುವ ಮಂತ್ರ “ಓಂ ಹ್ರೀಂ ನಮಃ” ಎಂದಾಗಿದೆ, ಈ ರುದ್ರಾಕ್ಷಿಯನ್ನು ಧರಿಸಿದ ಸಮಯದಲ್ಲಿ ಈ ಮಂತ್ರವನ್ನು ಪಠಿಸಬೇಕು, ಇದನ್ನು ಧರಿಸಿದ ವ್ಯಕ್ತಿಗೆ ಎಲ್ಲಾ ತರಹದ ವಸ್ತು ಸಂತೋಷ ಮತ್ತು ಸಂಪತ್ತನ್ನು ಈ ರುದ್ರಾಕ್ಷಿ ಒದಗಿಸುತ್ತದೆ.
ಮುಖಿ ರುದ್ರಕ್ಷಿ : ಈ ರುದ್ರಾಕ್ಷಿಯಲ್ಲಿ ಪ್ರಾಕೃತಿಕವಾಗಿ ಎರಡು ಶಿರಗಳಿರುತ್ತವೆ, ಅಂದರೆ ಅರ್ಧ ನಾರೀಶ್ವರ ಸ್ವರೂಪ ಇರುತ್ತೆ, ಇದರಲ್ಲಿ ಶಿವ ಮತ್ತು ಶಕ್ತಿಯ ರೂಪ ಇರುತ್ತದೆ, ಇದರ ಧಾರಣೆಯಿಂದ ಶಿವ ಮತ್ತು ಪಾರ್ವತಿ ಪ್ರಸನ್ನರಾಗುತ್ತಾರೆ ಗೋಹತ್ಯಾ ಪಾಪದಿಂದ ಮುಕ್ತಿ ಸಿಗುತ್ತದೆ, ಮನಸ್ಸು ಸ್ಥಿರವಾಗುತ್ತದೆ, ಈ ರುದ್ರಾಕ್ಷಿಯು ಹಿಮಾಲಯ ಪರ್ವತದಲ್ಲಿ ಸಿಗುತ್ತದೆ.
ತ್ರಿಮುಖ ರುದ್ರಾಕ್ಷಿ : ಮೂರುಮುಖದ ರುದ್ರಾಕ್ಷಿ ಅಗ್ನಿ ದೇವನ ಸ್ವರೂಪ ಎಂದು ಹೇಳುತ್ತಾರೆ ಇದೂ ಬಹಳ ಕಡಿಮೆ ಪ್ರಮಾಣದಲ್ಲಿ ದೊರೆಯುತ್ತದೆ ಇದರ ಧಾರಣೆಯಿಂದ ಸಕಲ ಪಾಪಗಳೂ ನಿವಾರಣೆ ಆಗುವುದು ಇದರ ಬೆಲೆಯೂ ಸ್ವಲ್ಪ ಹೆಚ್ಚಾಗಿಯೇ ಇದೆ.
ಚತುರ್ಮುಖ ಹೊಂದಿರುವ ರುದ್ರಾಕ್ಷ : ಚತುರ್ಮುಖ ಹೊಂದಿರುವ ಈ ರುದ್ರಾಕ್ಷವನ್ನು ಬ್ರಹ್ಮನಿಗೆ ಹೋಲಿಸಲಾಗುತ್ತದೆ ಇದನ್ನು ಧರಿಸಿದಾಗ ಪಠಿಸಬೇಕಾದ ಮಂತ್ರ “ಓಂ ಕ್ಲೀನ್ ನಮಃ”.
ಪಂಚಮುಖಿ ರುದ್ರಾಕ್ಷಿ : ಈ ರುದ್ರಾಕ್ಷಿಯಲ್ಲಿ ಪ್ರಾಕೃತಿಕವಾಗಿ ಐದು ಧಾರಿಗಳಿರುತ್ತವೆ ಅದಕ್ಕೆ ಇದನ್ನು ಪಂಚಮುಖಿ ಎಂದು ಕರೆಯುತ್ತಾರೆ ಈ ರುದ್ರಾಕ್ಷಿಯನ್ನು ಲಿಂಗವಂತರು ಹೆಚ್ಚು ಬಳಸುತ್ತಾರೆ ಮತ್ತು ವಿಶೇಷವಾಗಿ ಕರ್ನಾಟಕದಲ್ಲಿ ಹೆಚ್ಚಾಗಿ ನೋಡಲು ಸಿಗುತ್ತದೆ ಕಾರಣ ಪಂಚಾಚಾರ್ಯರ ಪಂಚಮುಖಗಳು ಇರುವುದರಿಂದ ಸದ್ದ್ಯೋಜ್ಯಾತ ವಾಮದೇವ ಅಘೋರ ತತ್ಪುರುಷ ಈಶಾನ, ಶಿವನ ಈ ಐದು ರೂಪಗಳು ಪಂಚಮುಖಿಯಲ್ಲಿ ವಾಸವಾಗಿವೆ ಈ ರುದ್ರಾಕ್ಷಿಯನ್ನು ಧರಿಸಿದರೆ ಮನಸ್ಸು ಶುದ್ಧ ಮತ್ತು ಶಾಂತವಾಗಿರುತ್ತದೆ, ಸರ್ವ ದುಃಖ ದೋಷ ಪರಿಹಾರವಾಗುತ್ತವೆ ಮತ್ತು ಕಾಲಾಗ್ನಿಯ ಪ್ರತೀಕವಾಗಿರುತ್ತದೆ ಇದನ್ನು ಕನಿಷ್ಠವಾಗಿ 3-5 ಸಂಖ್ಯೆಗಳಲ್ಲಿ ಧರಿಸಬೇಕು.
ಷಷ್ಠ ಮುಖಿ ರುದ್ರಾಕ್ಷಿ : ಆರು ಮುಖದ ರುದ್ರಾಕ್ಷಿ ಶಿವ ಪುತ್ರ ಕುಮಾರ ಕಾರ್ತಿಕೇಯನ ರೂಪವೆಂದು ತಿಳಿಯಲಾಗುತ್ತದೆ ಈ ರುದ್ರಾಕ್ಷಿಯೂ ಹೆಚ್ಚಿ ಪ್ರಮಾಣದಲ್ಲಿ ದೊರೆಯುವುದು ಈರುದ್ರಾಕ್ಷಿ ಧರಿಸುವುದರಿಂದ ಅಧರ್ಮiಚರಣೆ ಮಾಡಿದ್ದಲ್ಲಿ ಅದರಿಂದ ಉಂಟದ ಪಾಪಗಳು ನಿವರಣೆ ಆಗುವುದು ಹಾಗೂ ಸ್ಮರಣ ಶಕ್ತಿ ಹೆಚ್ಚುವುದು ಎಂಬ ನಂಬುಗೆ ಇದೆ.
ಸಪ್ತ ಮುಖಿ ರುದ್ರಾಕ್ಷಿ : ಏಳು ಮುಖದ ರುದ್ರಾಕ್ಷಿ ಅನಂತ ನಾಗನ (ಅಥವಾ ಆದಿ ಶೇಷನ) ಸ್ವರೂಪ ಎಂದು ಹೇಳುವರು ಇದೂ ಸಹ ವಿರಳವಾಗಿ ದೊರೆಯುವುದು ಆದ್ದರಿಂದ ಬೆಲೆ ಹೆಚ್ಚು ಈ ರುದ್ರಾಕ್ಷಿ ಧಾರಣೆಯಿಂದ ಹಾವಿನ ಭಯ ಇರುವುದಿಲ್ಲ ಶರೀರ ಧೃಢವಾಗಿ ಬುದ್ಧಿ ಚುರುಕಾಗುವುದು ಎಂದು ನಂಬಲಾಗಿದೆ.
ಅಷ್ಟ ಮುಖಿ ರುದ್ರಾಕ್ಷಿ : ಎಂಟು ಮುಖದ ರುದ್ರಾಕ್ಷಿಯು ಗಣಪತಿಯ ರೂಪವಾಗಿದೆ ಈ ರುದ್ರಾಕ್ಷಿ ಬಹಳ ಕಡಿಮೆ ಪ್ರಮಾಣದಲ್ಲಿ ದೊರಕುತ್ತದೆ ಬೇಡಿಕೆ ಜಾಸ್ತಿ ಇರುವುದರಿಂದ, ಬೆಲೆ ಜಾಸ್ತಿ ಈ ರುದಾಕ್ಷಿಯನ್ನು ಧರಿಸುವುದಿಂದ ಕಾರ್ಯಗಳು ನಿರ್ವಿಗ್ನವಾಗಿ ನಡೆಯುತ್ತದೆ ಮತ್ತು ಸರ್ವ ಸಿದ್ಧಿಯುಂಟಾಗುವುದೆಂಬುದು ಭಕ್ತರ ನಂಬುಗೆ.
ನವಮುಖಿ ರುದ್ರಾಕ್ಷಿ : ಪ್ರಾಕೃತಿಕವಾಗಿ ಇದರಲ್ಲಿ 9 ಧಾರಿಗಳು ಬರುತ್ತವೆ ದುರ್ಗೆಯ 9 ಶಕ್ತಿಗಳು ಇದರಲ್ಲಿ ಪೂರ್ಣವಾಗಿ ವಿರಾಜಮಾನವಾಗಿವೆ ದೇವಿಮಾತೆಯ ಉಪಾಸನೆಯನ್ನು ಮಾಡುವವರು ಇದನ್ನು ಬಳಸಬಹುದು ವಿಶೇಷವಾಗಿ ಗಂಡ-ಹೆಂಡತಿ ಅಥವಾ ತಂದೆ-ಮಗನ ನಡುವೆ ಭಿನ್ನಾಭಿಪ್ರಾಯ ಇದ್ದರೆ ದೂರವಾಗುತ್ತವೆ ಮನೆಯಲ್ಲಿನ ಸರ್ವ ಪಾಪ ಕರ್ಮದೋಷವನ್ನು ದೂರ ಮಾಡುತ್ತದೆ.
ದಶಮುಖಿ ರುದ್ರಾಕ್ಷಿ : ಪ್ರಾಕೃತಿಕವಾಗಿ ಇದರಲ್ಲಿ 10 ಧಾರಿಗಳಿವೆ ಈ ರುದ್ರಾಕ್ಷಿಯು ಶ್ರೀ ಮಹಾ ವಿಷ್ಣುವಿನ ಸ್ವರೂಪ ಎಂದು ಹೇಳುತ್ತಾರೆ ಕಾರಣ ಇದು ದಶಾವತಾರದ ಪ್ರತೀಕವಾಗಿದೆ ಇದನ್ನು ಧರಿಸಿದರೆ ದಿವ್ಯ ಶಕ್ತಿ ಪ್ರಾಪ್ತವಾಗುತ್ತದೆ ಮತ್ತು ರಾಜಕೀಯ ವ್ಯಕ್ತಿಗಳ ಇದನ್ನು ಉಪಯೋಗಿಸಿದರೆ ಸರ್ವ ಶತ್ರುಗಳ ಮೇಲೆ ವಿಜಯ ಪ್ರಾಪ್ತ ಮಾಡಬಹುದು.
ಏಕದಶ ಮುಖಿ ರುದ್ರಾಕ್ಷಿ : ಪ್ರಾಕೃತಿಕವಾಗಿ ಇದರಲ್ಲಿ 11 ಧಾರಿಗಳಿರುತ್ತವೆ ಶಿವನ 11ನೇ ರೂಪವಾದ ಸಾಕ್ಷಾತ್ ಶ್ರೀ ಹನುಮಂತನ ಸ್ವರೂಪವಿರುತ್ತದೆ ದಾನ, ಧರ್ಮ ಮಾಡುವ ಪ್ರತೀಕ ಗುಣ ಇದರಲ್ಲಿರುತ್ತದೆ ಈ ರುದ್ರಾಕ್ಷಿಯನ್ನು ಧರಿಸಿದರೆ ಸಹಸ್ರ ಅಶ್ವಮೇಧ ಯಾಗ ಮಾಡಿದಂತಿರುತ್ತದೆ ದೀರ್ಘಾಯುಷಿಗಳಾಗುತ್ತಾರೆ.
ದ್ವಾದಶ ಮುಖಿ ರುದ್ರಾಕ್ಷಿ : ಈ ಹನ್ನೆರಡು ಮುಖದ ರುದ್ರಾಕ್ಷಿಯನ್ನು ಸಂತೋಷ ಮತ್ತು ಒಳ್ಳೆಯ ಆರೋಗ್ಯಕ್ಕಾಗಿ ಧರಿಸಲಾಗುತ್ತದೆ ಇದನ್ನು ಕೂದಲಲ್ಲಿ ಧರಿಸಬೇಕು ಈ ರುದ್ರಾಕ್ಷಿಗಿರುವ ಮಂತ್ರ “ಓಂ ಕ್ರೋಂ ಶ್ರೋಂ ರೂಮ್ ನಮಃ” ಎಂದಾಗಿದೆ.
ತ್ರಯೋದಶಿ ಮುಖಿ ರುದ್ರಾಕ್ಷಿ : ಈ ಹದಿಮೂರು ಮೂಖದ ರುದ್ರಾಕ್ಷಿಯನ್ನು ವಿಶ್ವದೇವನ ಪ್ರತಿರೂಪವೆಂದು ನಂಬಲಾಗುತ್ತದೆ, ಅದೃಷ್ಟಕ್ಕಾಗಿ ಇದನ್ನು ಧರಿಸಲಾಗುತ್ತದೆ ಈ ರುದ್ರಾಕ್ಷಿರುವ ಮಂತ್ರ “ಓಂ ಹ್ರೀಂ ನಮಃ” ಎಂದಾಗಿದೆ.
ಚತುರ್ದಶ ಮುಖಿ ರುದ್ರಾಕ್ಷಿ : ಈ ಹದಿನಾಲ್ಕು ಮುಖದ ರುದ್ರಾಕ್ಷಿಯನ್ನು ಶಿವ ದೇವರ ಪ್ರತಿರೂಪವೆಂದು ಪರಿಗಣಿಸಲಾಗುತ್ತದೆ ಹಣೆಗೆ ಇದನ್ನು ಸ್ಪರ್ಶಿಸಬೇಕು ಎಲ್ಲಾ ಪಾಪಗಳಿಂದ ಹೊರಬರಲು ಈ ರುದ್ರಾಕ್ಷವನ್ನು ಧರಿಸಿದರೆ ಒಳ್ಳೆಯದು ಈ ರುದ್ರಾಕ್ಷವನ್ನು ಧರಿಸಿದಾಗ ಪಠಿಸಬೇಕಾದ ಮಂತ್ರ “ಓಂ ನಮಃ” ಎಂದಾಗಿದೆ.