ಟಿಕ್-ಟಾಕ್ ಮೂಲಕ ಇನ್ನು ಸುಲಭವಾಗಿ ಹಣ ಮಾಡಿಕೊಳ್ಳಬಹುದು ಹೇಗೆ ಗೊತ್ತಾ !

0
3188

ಟಿಕ್ ಟಾಕ್ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ.ಭಾರತಾದ್ಯಂತ ಟಿಕ್-ಟಾಕ್ ಬಾರಿ ಫೇಮಸ್ಸ್.ಚೀನಾದ ಈ ಕಂಪನಿ ಹೈಕೋರ್ಟ್’ಗಳ ಕೆಂಗಣ್ಣಿಗೆ ಗುರಿ ಆದರೂ ನಂತರ ಹೈಕೋರ್ಟ್’ನಿಂದ ಬಿಗ್ ರಿಲೀಫ್ ಪಡೆದುಕೊಂಡಿತು.ಟಿಕ್-ಟಾಕ್ ಮೂಲಕ ನಟನೆಗೆ ಕಾಲಿಟ್ಟ ಕೆಲವರು ಇಂದು ಸ್ಟಾರ್ ಆಗಿ ನೆಟ್ ಲೋಕದಲ್ಲಿ ಮೀನುಗುತ್ತಿದೆ.ಟಿಕ್-ಟಾಕ್ ಯಾವುದೆ ಜಾಹೀರಾತು ಹೊಂದಿರಲಿಲ್ಲ ಸದ್ಯ ಟಿಕ್-ಟಾಕ್ ಈಗ ತನ್ನ ಆ್ಯಪ್ ಒಳಗೆ ಜಾಹೀರಾತು ತೋರಿಸುವ ಕೆಲಸ ಮಾಡುವ ಪ್ರಯತ್ನದಲ್ಲಿದೆ.

ಹೌದು ಯೂಟ್ಯೂಬ್ ತರಹ ತಾನು ವಿಡಿಯೊ ಜಾಹೀರಾತು ಹಾಗೂ ಬ್ಯಾನರ್ ಜಾಹೀರಾತು ತೋರಿಸುವ ಹಂಬಲದಲ್ಲಿ ಟಿಕ್-ಟಾಕ್ ಇದೆ.ಅದಕ್ಕಾಗಿ ಟಿಕ್-ಟಾಕ್ ಸಂಸ್ಥೆ ಜಾಹೀರಾತು ನೀಡಲು ಬೇರೆ ಕಂಪನಿಗೆ ಆಹ್ವಾನಿಸುವ ಪ್ರಕ್ರಿಯೆ ಪ್ರಾರಂಭ ಮಾಡಿದೆ.ಈ ಮೂಲಕ ಇನ್ನೂ ಕೆಲವೆ ದಿನಗಳಲ್ಲಿ ಟಿಕ್-ಟಾಕ್ ಸಂಸ್ಥೆಯ ಸ್ವಂತ ಜಾಹೀರಾತು ಪ್ರದರ್ಶನವಾಗಲಿದೆ.

ಟಿಕ್-ಟಾಕ್ ಮೂಲಕ ಹಣ ಗಳಿಸುವುದು ಹೇಗೆ ? : ಇನ್ನೂ ಕೆಲವೆ ದಿನಗಳಲ್ಲಿ ಟಿಕ್-ಟಾಕ್ ಜಾಹೀರಾತು ಪ್ರದರ್ಶನ ಆಗುವುದರಿಂದ,ಟಿಕ್-ಟಾಕ್ ವಿಡಿಯೊ ಮಾಡುವ ಕ್ರಿಯೆಟರ್ಸ್ ಅಂದರೆ ಟಿಕ್-ಟಾಕ್ ಮಾಡುವ ಕಲಾವಿದರಿಗೆ ಕಂಪನಿಯೂ ಜಾಹೀರಾತಿನಿಂದ ಬಂದ ಹಣವನ್ನು ಹಂಚಿಕೊಳ್ಳುತ್ತಾರೆ.ಅಂದರೆ ರೆವೆನ್ಯೂ ಶೆರ್ ಮಾಡಿಕೊಳ್ಳುತ್ತಾರೆ.ಅಂದರೆ ಒಬ್ಬ ಟಿಕ್-ಟಾಕ್ ಖಾತೆಯಲ್ಲಿ ಇಪ್ಪತ್ತರಿಂದ ಮುವತ್ತು ಸಾವಿರ ಫಾಲೋವರ್ ಹೊಂದಿದ್ದರೆ.ಪ್ರತಿಸಲ ಅವನು ಹೊಸ ವಿಡಿಯೊ ಹಾಕಿದಾಗ ಅವನ ವಿಡಿಯೊದ ಮೇಲೆ ಪುಟ್ಟ ಜಾಹೀರಾತು ತೋರಿಸುತ್ತಾರೆ.ಆ ಮೂಲಕ ಅವನಿಂದ ಬೇರೆಯವರು ಜಾಹೀರತು ವಿಕ್ಷೀಸಲ್ಪಟ್ಟರೆ ಅವನಿಗೆ ಸಂಭಾವನೆ ಅಂದರೆ ಹಣ ಸಿಗುವುದು.

ಇದು ಯಾವ ತರಹ ಕೆಲಸ ಮಾಡುತ್ತೆ ಅಂದರೆ ಮೊದಲಿಗೆ ಟಿಕ್-ಟಾಕ್ ಮೊನಿಟೈಸೇಷನ್ ಖಾತೆಯನ್ನು ತೆರೆಯಬೇಕು.ಅಂದರೆ ಈ ಖಾತೆಯಲ್ಲಿ ನಿಮ್ಮ ಯಾವುದಾದರೂ ಬ್ಯಾಂಕ್ ಖಾತೆಯ ಸಂಖ್ಯೆ,ಐಎಫ್-ಸಿ, ಬ್ರಾಂಚ್ ಮಾಹಿತಿ ನೀಡಬೇಕು. ಪಾನ್ ಕಾರ್ಡ್ ಮಾಡಿಸಿಕೊಳ್ಳದವರು ಈಗಲೇ ಪಾನ್ ಕಾರ್ಡ್ ಮಾಡಿಸಿ ಏಕೆಂದರೆ ನಿಮಗೆ ಹಣ ಬ್ಯಾಂಕ್’ಗೆ ಬರಬೇಕೆಂದಿದ್ದರೆ ಪಾನ್ ಕಾರ್ಡ್ ಮಾಹಿತಿ ಕಡ್ಡಾಯ. ಆದುದರಿಂದ ಯಾವುದಾದರು ಸೈಬರ್ ಸೆಂಟರ್’ಗೆ ಹೋಗಿ ಇವತ್ತೆ ಪಾನ್ ಕಾರ್ಡ್ ಮಾಡಿಸಿಕೊಳ್ಳಿ. ಪಾನ್ ಕಾರ್ಡ್ ಮಾಹಿತಿ ಹಾಗೂ ನಿಮ್ಮಾ ಬ್ಯಾಂಕ್ ಖಾತೆಯಲ್ಲಿರುವ ಹೆಸರು ಎರಡು ಒಂದೇ ತರಹ ಇರಲಿ.ಬ್ಯಾಂಕ್ ಪಾಸ್ ಬುಕ್ ಸಂಖ್ಯೆ ಸರಿಯಾಗಿ ನಮೋದಿಸಿ, ಇಲ್ಲವಾದರೆ ಪೇಮೆಂಟ್ ಬರುವುದು ತಡವಾಗಬಹುದು. ನೀವು ಈ ತಿಂಗಳು ಹಣ ಗಳಿಸಿದರೆ ಅದು ಮುಂದಿನ ತಿಂಗಳು ಇಪ್ಪತ್ತನೆಯ ತಾರೀಕಿನ ನಂತರ ನಿಮ್ಮ ಖಾತೆಗೆ ಜಮಾ ಆಗಲಿದೆ.

ಇನ್ನೇಕೆ ತಡ ನೀವು ಪಾರ್ಟ್ ಟೈಮ್ ಟಿಕ್-ಟಾಕ್ ವಿಡಿಯೊ ಮಾಡಿಕೊಂಡು ತಿಂಗಳಿಗೆ ಸಾವಿರ ಹಣ ಗಳಿಸಬಹುದು. ಆದರೆ ಟಿಕ್-ಟಾಕ್’ನ ಈ ಫಿಚರ್ ಇನ್ನೂ ಬಂದಿಲ್ಲ ಆದಷ್ಟು ಬೇಗ ಬರಲಿದೆ. ಈ ಸುದ್ದಿ ಟಿಕ್-ಟಾಕ್ ಮಾಡುವ ಹೈಕಳಿಗೆ ಖಂಡಿತ ಸಿಹಿ ಸುದ್ದಿಯಾಗಲಿದೆ.

LEAVE A REPLY

Please enter your comment!
Please enter your name here