ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಶ್ರೀಮುರಳಿ ಕಾಂಬಿನೇಷನ್ ನಲ್ಲಿ ಬರುತ್ತಿದೆ ಮತ್ತೊಂದು ಚಿತ್ರ..

0
2503

ಸದ್ಯ ಕೆಜಿಎಫ್ ಸಿನಿಮಾ ಮುಖಾಂತರ ಇಡೀ ಭಾರತದಲ್ಲೇ ಹೆಸರು ಮಾಡಿರುವ ನಿರ್ದೇಶಕ ಪ್ರಶಾಂತ್ ನೀಲ್, ತಾವು ನಿರ್ದೇಶಕರಾಗಿ ಗುರುತಿಸಿಕೊಂಡ ಚಿತ್ರ ಉಗ್ರಂ ಈ ಚಿತ್ರದ ನಂತರ ಶ್ರೀ ಮುರಳಿ ಅವರ ಜೊತೆ ಪ್ರಶಾಂತ್ ನೀಲ್ ಅವರು ಮತ್ತೊಂದು ಸಿನಿಮಾ ಮಾಡಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿತ್ತು, ಹಲವು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಅಭಿಮಾನಿಗಳು ಕೋರಿಕೆಯನ್ನು ಸಲ್ಲಿಸಿದ್ದರು, ಆದರೆ ಈ ಬಗ್ಗೆ ಪ್ರಶಾಂತ್ ನೀಲ್ ಆಗಲಿ ಅಥವಾ ಶ್ರೀ ಮುರಳಿಯವರ ಆಗಲಿ ಯಾವುದೇ ರೀತಿ ಪ್ರತಿಕ್ರಿಯೆ ನೀಡಿರಲಿಲ್ಲ.

ನಾಳೆ ಅಂದರೆ ಡಿಸೆಂಬರ್ 17ರಂದು ಶ್ರೀ ಮುರಳಿ ಅವರ ಹುಟ್ಟುಹಬ್ಬ, ಅಂದು ಪ್ರಶಾಂತ್ ನೀಲ್ ಅವರು ಶ್ರೀಮುರುಳಿ ಅವರೊಂದಿಗೆ ತಮ್ಮ ಹೊಸ ಚಿತ್ರದ ಮಾಹಿತಿ ನೀಡಲಿದ್ದಾರೆ, ನಿರ್ದೇಶಕರಾಗಿರುವ ಪ್ರಶಾಂತ್ ನಲ್ಲಿ ಕೆಜಿಎಫ್ 2 ಸಿನಿಮಾದಲ್ಲಿ ಸದ್ಯ ಬಿಜಿಯಾಗಿದ್ದಾರೆ, ಈ ನಡುವೆ ಶ್ರೀಮುರಳಿಗೆ ಅವರಿಗೆ ಅವರೇ ಕಥೆಯೊಂದನ್ನು ರೆಡಿ ಮಾಡಿದ್ದು ಆ ಕತೆಗೆ ನಿರ್ಮಾಣದ ಹೊಣೆಯನ್ನು ಹೊರಲಿದ್ದಾರೆ, ಹಾಗೂ ಈ ಚಿತ್ರದ ನಿರ್ದೇಶನವನ್ನು ಡಾಕ್ಟರ್ ಸೂರಿಯವರು ಮಾಡಲಿದ್ದಾರೆ, ಹಿಂದೆ ಡಾಕ್ಟರ್ ಸೂರಿಯವರು ಯಶ್ ಅವರ ಲಕ್ಕಿ ಸಿನಿಮಾವನ್ನು ನಿರ್ದೇಶನ ಮಾಡಿದ್ದರು ಹಾಗೂ ಈ ಚಿತ್ರದ ಮುಖಾಂತರ ಗೆಲುವನ್ನು ಕಂಡಿದ್ದರು.

ಮುರುಳಿ ಅವರ ಹುಟ್ಟುಹಬ್ಬಕ್ಕೆ ಈ ಚಿತ್ರದ ವಿವರ ಪ್ರಶಾಂತ್ ನೀಲ್ ಅವರ ಕಡೆಯಿಂದಲೇ ಅಫಿಶಿಯಲ್ ಆಗಿ ಪಡೆಯಬಹುದು, ಸದ್ಯ ಶ್ರೀಮುರಳಿ ಅವರು ಭರಾಟೆ ಸಿನಿಮಾ ಮುಗಿಸಿ ಯಶಸ್ಸನ್ನು ಕಂಡಿದ್ದಾರೆ, ಪ್ರೇಕ್ಷಕ ಮಹಾಪ್ರಭು ಗಳಿಂದ ಭರಾಟೆ ಸಿನಿಮಾ ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿದ್ದರು, 25 ಕೋಟಿಗೂ ಅಧಿಕ ಗಳಿಕೆ ಮಾಡಿದೆ ಎಂಬುದನ್ನು ಸ್ವತಃ ಚಿತ್ರತಂಡವೇ ಹಂಚಿಕೊಂಡಿದೆ, ಅದೇನೇ ಇರಲಿ ಇದಾದನಂತರ ಮುರಳಿ ಅವರು ಅಯೋಗ್ಯ ಚಿತ್ರದ ನಿರ್ದೇಶಕರ ಮದಗಜ ಎಂಬುವ ಚಿತ್ರದಲ್ಲಿ ನಟನೆ ಮಾಡಬೇಕಿತ್ತು, ಆದರೆ ಅದೇಕೋ ಇನ್ನು ಸಿನಿಮಾದ ಬಗ್ಗೆ ಅಷ್ಟಾಗಿ ಮಾಹಿತಿ ಹೊರ ಬಿಡುತ್ತಿಲ್ಲ, ಈ ನಡುವೆ ಪ್ರಶಾಂತ್ ನೀಲ್ ಅವರ ನಿರ್ಮಾಣದಲ್ಲಿ ಶ್ರೀಮುರಳಿ ಅವರು ನಟಿಸುವುದು ಪಕ್ಕಾ ಆಗಿದೆ.

ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here