ನಾನು‌ ಶಿವ ನೀನು ಪಾರ್ವತಿ ಎಂದು ಹೇಳಿ‌ ಶಿಷ್ಯೆಗೆ‌ ನಿತ್ಯಾನಂದ ‌ಮಾಡಿದ್ದೇನು ?

0
2898

ನಾನು ಜೀತೇಂದ್ರ ನೀನು ಸಿರಿ ದೇವಿ ದಿಲ್ ಡಾನ್ಸು ಮಾಡೋಣ ಬಾ… ಉಪೇಂದ್ರ ಅಭಿನಯದ ಹಾಡು ಕೇಳಿರಬಹುದು.ಸಿನಿಮಾ ರಿಲೀಸ್ ಆದಾಗ ಈ ಹಾಡು ಬಾರೀ ಜನಪ್ರಿಯವಾಗಿತ್ತು.ಪ್ರೇಮಿಗಳು ತಮ್ಮನ್ನು ಸಿನಿಮಾ ತಾರೆಯರಾಗಿ ಕಲ್ಪಿಸಿಕೊಂಡು ಹಾಡುವ ಹಾಡು ಇದಾಗಿತ್ತು.ಇದೇ ತರಹದ ಮ್ಯಾಜಿಕ್ ಮಾಡಲು ಹೋಗಿ ಬಿಡದಿಯ ವಿವಾದಾತ್ಮಕ ಗುರು ನಿತ್ಯಾನಂದನ ಪರಿಪಾಟಲು ಪಡುವಂತಾಗಿದೆ.

ನಿತ್ಯಾನಂದ ಸ್ವಾಮಿ ಕಳೆದ ಕೆಲವು ವರ್ಷಗಳಿಂದ ಟಿವಿ ಮಾಧ್ಯಮದ ಸುದ್ದಿಯ ಕೇಂದ್ರ ಬಿಂದುವಾಗಿದ್ದಾನೆ.ನಟಿ ರಂಜಿತಾ ಜೊತೆಗಿನ ವೀಡಿಯೋ ವೈರಲ್ ಆದ ಮೇಲೆ ಅವನ ಆಶ್ರಮದ ಹೆಸರಿಗೆ ಕಳಂಕ ಬಂದಿದೆ.ಅವನ ಆಶ್ರಮದಲ್ಲಿ ನೂರಾರು ಹೆಣ್ಣು ಮಕ್ಕಳನ್ನು ಸೇವೆಯ ಹೆಸರಲ್ಲಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿರುವ ವಿಷಯ ಹಬ್ಬಿತ್ತು.ಆದರೆ ಅದಕ್ಕೆ ಯಾವುದೇ ಸಾಕ್ಷಿ ಇರಲಿಲ್ಲ.ಆದರೆ ಈಗ ಅದಕ್ಕೆ ಮಹತ್ವದ ಸಾಕ್ಷಿ ದೊರಕಿದೆ.

ಕೆನಡಾ ಮೂಲದ ಫ್ಲಾರಾ( ಹೆಸರು ಬದಲಿಸಲಾಗಿದೆ) ಎಂಬ ಯುವತಿ ನಿತ್ಯಾನಂದನ ಪ್ರಭಾವಕ್ಕೆ ಒಳಗಾಗಿ ಅವನ ಆಶ್ರಮದಲ್ಲಿ ಇದ್ದಳು.ಅಲ್ಲಿ ಅವಳಿಗೆ ಆಶ್ರಮದ ಪ್ರಚಾರ ಮಾಡಲು ಸಾಮಾಜಿಕ ಮಾಧ್ಯಮದ ಮುಖ್ಯಸ್ಥೆಯ ಜವಾಬ್ದಾರಿ ವಹಿಸಲಾಗಿತ್ತು.ಹೀಗೆ ಕೆಲಸ ಮಾಡುತ್ತಾ ಅವನ ಪೂಜೆ ಮಾಡುತ್ತಿದ್ದ ಪ್ಲಾರಾಳನ್ನು ತನ್ನ ಹತ್ತಿರ ಕರೆಸಿಕೊಂಡ ನಿತ್ಯಾನಂದ ನಾನು ಶಿವನ ಅವತಾರಿ.ನೀನು ಪಾರ್ವತಿ ಆಗಿದ್ದೀ.ನಾವು ಮಿ ಲನ ಹೊಂದಬೇಕು ಎಂದು ಅವಳನ್ನು ಮರಳು ಮಾಡಿ ಸುಮಾರು 35 ತಿಂಗಳುಗಳ ಕಾಲ ಶೋ ಷಣೆ ಮಾಡುತ್ತಾನೆ.ನಂತರ ಅದೇಗೋ ಅವನಿಂದ ತಪ್ಪಿಸಿಕೊಂಡು ಬಂದ ಪ್ಲಾರಾ ತನ್ನ ದೇಶಕ್ಕೆ ಹೋಗುತ್ತಾಳೆ.

ಈಗ ಕೆಲವು ದಿನಗಳ ಹಿಂದೆ ನಿತ್ಯಾನಂದನ ಆಶ್ರಮದಲ್ಲಿ ನಮ್ಮ ಮಕ್ಕಳನ್ನು ಅಪಹರಣ ಮಾಡಲಾಗಿದೆ , ನಮ್ಮ ಮಕ್ಕಳನ್ನು ಹುಡುಕಿ ಕೊಡಿ ಎಂದು ಹೆಬಿ ಎಸ್ ಕಾರ್ಪಸ್ ಹಾಕಿದ ವೃದ್ದ ದಂಪತಿಗಳ ಹೋರಾಟ ಮಾಧ್ಯಮದಲ್ಲಿ ಸುದ್ದಿ ಆಗುತ್ತಿದ್ದಂತೆಯೇ ಕೆನಡದಲ್ಲಿ ತನ್ನೊಳಗೇ ನೋವನ್ನು ಅದುಮಿಕೊಂಡಿದ್ದ ಪ್ಲಾರಾಳಿಗೆ ಧೈರ್ಯ ಬಂದಿದೆ.ತನಗೆ ಆಶ್ರಮದಿಂದ ಆದ ಕಿರುಕುಳವನ್ನು ಇಂಚಿಂಚಾಗಿ ಬರೆದು ರಾಮನಗರದ ಪೊಲಿಸರಿಗೆ ಇ ಮೇಲ್ ಮಾಡಿದ್ದಾಳೆ.ಸದ್ಯ ದೂರು ಸ್ವೀಕರಿಸಿರುವ ಪೋಲಿಸರು ಬಿಡದಿ ಠಾಣೆಯಲ್ಲಿ ನಿತ್ಯಾನಂದನ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.

2018 ರಲ್ಲೇ ದೇಶ ಬಿಟ್ಟಿರುವ ನಿತ್ಯಾನಂದನಿಗೆ ಈಗ ಸಂಕಟ ಶುರುವಾಗಿದೆ.ದೈವ ಧರ್ಮದ ಹೆಸರಿನಲ್ಲಿ ಜನರಿಗೆ ಮಂಕುಬೂದಿ ಎರಚುತ್ತಿದ್ದ ನಿತ್ಯಾನಂದನನ್ನು ವಿದೇಶದಿಂದ ಕರೆ ತರಲು ಪೋಲಿಸ್ ಇಲಾಖೆ ಪ್ರಯತ್ನ ಪಡುತ್ತಿದೆ

LEAVE A REPLY

Please enter your comment!
Please enter your name here