20 ದಿನದಲ್ಲಿ‌ ಶಬರಿಮಲೆ ದೇವಸ್ಥಾನ ಗಳಿಸಿದ‌ ಒಟ್ಟು ಆದಾಯ ಎಷ್ಟು ಕೋಟಿ‌ ?

0
2391

ಕಳೆದ ತಿಂಗಳಿನಿಂದ ಅಯ್ಯಪ್ಪ ಸ್ವಾಮಿ ವ್ರತ ಆರಂಭವಾಗಿದೆ.45 ದಿನ ಕಠಿಣವಾದ ವ್ರತವನ್ನು ಅಯ್ಯಪ್ಪ ಸ್ವಾಮಿ ಮಾಲಾ ದಾರಿಗಳು ಮಾಡುತ್ತಾರೆ. ಈಗಾಗಲೇ ಹಲವು ಕಡೆ ಮಂದಿರಗಳನ್ನು ಕಟ್ಟಿಕೊಂಡು, ಅಯ್ಯಪ್ಪ ಮಾಲಾ ವೃತ್ತ ದಾರಿಗಳು ವೃತವನ್ನು ಆಚರಿಸುತ್ತಿದ್ದಾರೆ.ಪುರಷರು 45 ದಿನದ ಕಠಿಣ ವ್ರತವನ್ನು ಮಾಡುತ್ತಾರೆ.ಬೆಳಿಗ್ಗೆ ಚಳಿಯಲ್ಲಿ ತಣ್ಣೀರ ಸ್ನಾನದಿಂದ ರಾತ್ರಿಯ ತನಕ ಅಯ್ಯಪ್ಪ ಸ್ವಾಮಿಯ ಭಕ್ತಿಯಲ್ಲಿ‌ ದಿನ ಕಳೆಯುತ್ತಾರೆ.

ಅಯಪ್ಪ ಸ್ವಾಮಿ ದರ್ಶನ ಪಡೆಯಲು ದೇಶದಾದ್ಯಂತ ಜನರು ಕಠಿಣವಾದ ವೃತವನ್ನು ಮಾಡಿ,ಶಬರಿ ಮಲೆ ಯಾತ್ರೆಯನ್ನು ಕೈ ಗೊಳ್ಳುತ್ತಾರೆ.ಈ ಯಾತ್ರೆಯ ಮೂಲಕ ತಮ್ಮ ಮನದಲ್ಲಿರುವ ಅಭಿಲಾಷೆಯನ್ನು ಪೂರ್ಣ ಗೊಳಿಸುತ್ತಾರೆ.ಕೆಲವರಿಗೆ ಪ್ರತಿ ವರ್ಷ ಮಾಲೆ ಹಾಕಿಕೊಂಡು ವೃತ ಕೈಗೊಂಡು ವೃತ‌ ಮಾಡುವುದು ಇಷ್ಟದ ಕೆಲಸ ಅಷ್ಟೇ ಅಲ್ಲ 18 ವರ್ಷ‌ ಮಾಲೆ ಹಾಕಿ ಗುರು ಸ್ವಾಮಿ ಅಗುವುದು ದೊಡ್ಡ ಸಾಧನೆಯೇ‌ ಸರಿ.

ಈಗ ವಿಷಯ ಏನೆಂದರೆ ಅಯ್ಯಪ್ಪ ಸ್ವಾಮಿ ದೇವಾಲಯ ಸಮಿತಿ‌ ಅಂದರೆ ಆಡಳಿತ ಮಂಡಳಿ ವಾರಕ್ಕೊಮ್ಮೆ ಹಾಗೂ ಪ್ರತಿದಿನದ ಕಾಣಿಕೆಯನ್ನು ಎಣಿಸಿ ಪತ್ರಿಕೆಗೆ ಬಿಡುಗಡೆ‌ ಮಾಡುವ ಕೆಲಸ ಮಾಡುತ್ತಿದೆ. ಯಾಕೆಂದರೆ ಅಯ್ಯಪ್ಪ ಸ್ವಾಮಿ ದೇವರ ದರ್ಶನ 20 ದಿನದ ಹಿಂದೆ ಪ್ರಾರಂಭವಾಗಿದ್ದು ಲಕ್ಷಾಂತರ ಜನ ದೇವಸ್ಥಾನಕ್ಕೆ ಆಗಮಿಸಿದ್ದಾರೆ. ಅಯ್ಯಪ್ಪ ಸ್ವಾಮಿ ದೇವಾಲಯವು ಯಾತ್ರೆ ಆರಂಭವಾದ ಕೇವಲ 20 ದಿನಗಳಲ್ಲಿ ಬರೋಬ್ಬರಿ 69.39 ಕೋಟಿ ರೂಪಾಯಿ ಆದಾಯ ಗಳಿಸಿದೆ.

ಕೇವಲ ದೇವಸ್ಥಾನ ಆಡಳಿತ ಮಂಡಳಿಗೆ ಅಷ್ಟೇ ಅಲ್ಲ ಈ ಯಾತ್ರೆಯ ಮೂಲಕ ಕೇರಳ ಸರಕಾರಕ್ಕೆ ಲಕ್ಷಾಂತರ ಆದಾಯ ಹರಿದು ಬರಲಿದೆ.ಟೀ ಅಂಗಡಿ ಇಂದ ಹಿಡಿದು ದೊಡ್ಡ ರೆಸ್ಟೋರೆಂಟ್ ತನಕ‌ ಈ ಯಾತ್ರೆಯ ಸಮಯದಲ್ಲಿ ಆದಾಯ ಗಳಿಸಲಿದೆ.ಅದೇನೆ‌ ಇರಲಿ ಧಾರ್ಮಿಕ ನಂಬಿಕೆಯನ್ನು ಹೊಡೆದಾಕುವ ಹುನ್ನಾರ ಈ‌ ನಡುವೆ ನಡೆಯುತಿರುವುದು ದುರಂತವೇ ಸರಿ.ಸದ್ಯ ಅಯ್ಯಪ್ಪ ಸ್ವಾಮಿಯ ದೇವಸ್ಥಾನದ ಕೇಸ್ ಸುಪ್ರಿಂ ಕೋರ್ಟಿನಲ್ಲಿದೆ.

ಸದ್ಯ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ಬಗ್ಗೆ ಕೂಗು ಕೇಳಿಸಿದ್ದು,ಸುಪ್ರೀ ಕೋರ್ಟ್ ಈ ಕೇಸ್ ಕೈಗೆ ಎತ್ತಿಕೊಂಡಿದೆ.ಸುಪ್ರಿಂಕೋರ್ಟೊನ ತೀರ್ಪು ಆದಷ್ಟು ಹೊರ ಬರಲಿದೆ ಎಂದು ಮುಖ್ಯ ನ್ಯಾಯಧೀಶರು ಹೇಳಿದ್ದಾರೆ.ಆದರೆ ವಿಚಾರಣಾ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಿಲ್ಲ.ಈ ನಡುವೆ ಅನೇಕ ಸಾಮಾಜಿಕ ಹೋರಾಟಗಾರ್ತಿಯರು ದೇವಸ್ಥಾನ ಪ್ರವೇಶ ಮಾಡಲು ಪ್ರಯತ್ನಿಸಿದ್ದರು,ಕೇರಳ ಸರಕಾರ ಇವರ್ಯಾರಿಗೂ ರಕ್ಷಣೆ ಕೊಡುವುದಿಲ್ಲ ಎಂದು ಹೇಳಿದೆ.

LEAVE A REPLY

Please enter your comment!
Please enter your name here