ಬಹಳ ದಿನಗಳಿಂದ ಸರ್ಕಾರಕ್ಕೆ ಕುಡುಕರ ಮದ್ಯ ಬೇಡಿಕೆ ಅತಿ ಹೆಚ್ಚಾಗಿದೆ, ಆದರೆ ಈ ಬಗ್ಗೆ ಸರ್ಕಾರ ಯಾವುದೇ ಪ್ರತಿಕ್ರಿಯೆಗಳನ್ನು ನೀಡುತ್ತಿಲ್ಲ, ಇದರಿಂದ ಬೇಸತ್ತ ಕುಡುಕರು ಅಬಕಾರಿ ಇಲಾಖೆ ಕಚೇರಿಯಲ್ಲಿದ್ದ ಎಣ್ಣೆಯನ್ನೇ ಕದ್ದು ಪರಾರಿಯಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ನಗರದಲ್ಲಿ ನಡೆದಿದೆ, ಇನ್ನು ಈ ಮಧ್ಯವನ್ನು ಸಿರುಗುಪ್ಪ ನಗರದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು ಎಂದು ವಶಕ್ಕೆ ಪಡೆದು ತಂದು ಕಚೇರಿಯಲ್ಲಿ ಇಟ್ಟಿದ್ದರು ಎನ್ನಲಾಗಿದೆ.
ಒಂದು ಕಡೆ ದೇಶ ಲಾಕ್ಡೌನ್ ಆಗಿದೆ ಆದಕಾರಣ ಕುಡುಕರಿಗೆ ಬಹಳ ದಿನಗಳಿಂದ ಎಲ್ಲಿಯೂ ಒಂದು ಹನಿ ಮದ್ಯವೂ ಸಿಗುತ್ತಿಲ್ಲ, ಇದರಿಂದ ರಾಜ್ಯದಲ್ಲಿ ಕುಡುಕರು ಮಾಡಿಕೊಳ್ಳುತ್ತಿರುವ ಅನಾವುತ ಪ್ರಕರಣಗಳನ್ನು ನಾವು ನೋಡಿದ್ದೇವೆ, ಆದರೆ ಈಗ ಕಳ್ಳರು ಒಂದು ಹೆಜ್ಜೆ ಮುಂದೆ ಹೋದಂತಿದೆ, ಅಬಕಾರಿ ಇಲಾಖೆ ಕಚೇರಿ ಹಿಂಭಾಗದಿಂದ ಮೇಲೆತ್ತಿ ಅಂಚುಗಳನ್ನು ತೆಗೆದು ಒಳಗೆ ಇಳಿದು ಸರಿಸುಮಾರು 25 ಸಾವಿರ ಮೌಲ್ಯದ ಮಧ್ಯವನ್ನು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.
ಎಂದಿನಂತೆ ವಿಷಯ ತಿಳಿದ ಕೂಡಲೇ ಅಬಕಾರಿಯ ಹಿರಿಯ ಅಧಿಕಾರಿಗಳ ಭೇಟಿ ಮತ್ತು ಪರಿಶೀಲನೆ ನಡೆದಿದ್ದು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ, ಹಾಗೂ ಸರ್ಕಾರ ಮದ್ಯ ಮಾರಾಟಕ್ಕೆ ಯಾವ ಕಾನೂನನ್ನು ತರಬೇಕು ಎಂಬುವ ಉಪಾಯ ನಿಮ್ಮ ಬಳಿ ಇದ್ದರೆ ಅಭಿಪ್ರಾಯ ತಿಳಿಸಿ.