ಭಾರತದಲ್ಲಿ ಚೀನಾದ ಟಿಕ್ ಟಾಕ್ ಬ್ಯಾನ್ ಮಾಡಿದ್ದರಿಂದ ಆದೇಶಕ್ಕೆ ಎಷ್ಟು ನಷ್ಟವಾಗಿದೆ ನೋಡಿ!

0
2724

ಪ್ರಪಂಚದ ಉಳಿದ ಯಾವುದೇ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಟಿಕ್ ಟಾಕ್ ಅತಿಹೆಚ್ಚು ಜನಪ್ರಿಯತೆಯನ್ನು ಪಡೆದಿತ್ತು ಎಂದರೆ ಸುಳ್ಳಲ್ಲ, ಹಾಗಾಗಿ ಕೇವಲ ಭಾರತದಿಂದಲೇ ಚೀನಿ ಮೂಲದ ಟಿಕ್ ಟಾಕ್, ಶೇರ್ ಇಟ್, ವಿಚ್ ಚಾಟ್ ಸೇರಿದಂತೆ ಬರೋಬ್ಬರಿ 59 ಚೀನಾದ ಅಪ್ಲಿಕೇಶನ್ಗಳನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿದೆ, ಇದು ಚೀನಾ ದೇಶಕ್ಕೆ ನುಂಗಲಾರದ ಬಿಸಿ ತುಪ್ಪದ ತುತ್ತಾಗಿ ಪರಿಣಮಿಸಿದೆ, ಇಷ್ಟೇ ಅಲ್ಲದೆ ಭಾರತ ದೇಶದ ಈ ನಿರ್ಧಾರವನ್ನು ಮೆಚ್ಚಿಕೊಂಡಿರುವ ಅಮೆರಿಕ ಕೂಡ ಅವರ ದೇಶದಲ್ಲಿ ಚೀನೀ ಅಪ್ಗಳನ್ನು ಬ್ಯಾನ್ ಮಾಡುವ ಯೋಚನೆ ಮಾಡುತ್ತಿದೆ, ಈ ರೀತಿ ಅಮೇರಿಕ ಚೀನಾ ಆಪ್ ಬ್ಯಾನ್ ಮಾಡಿದರೆ ಅದರ ಬೆನ್ನಲ್ಲೇ ಹಲವು ದೇಶಗಳು ಇದೆ ಕೆಲಸ ಮಾಡಬಹುದು ಎನ್ನಲಾಗಿದ್ದು, ಇದು ಚೀನಾಗೆ ಬಹಳಷ್ಟು ನಷ್ಟ ಉಂಟು ಮಾಡುವುದರಲ್ಲಿ ಅನುಮಾನವಿಲ್ಲ.

ಇನ್ನು ಭಾರತದಲ್ಲಿ ಚೀನಾ ಅಪ್ ಗಳನ್ನು ಬ್ಯಾನ್ ಮಾಡಿದ ಪರಿಣಾಮ ಚೀನಾ ದೇಶಕ್ಕೆ ಬರೋಬ್ಬರಿ 4.5 ಲಕ್ಷ ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ ಎಂದು ಗ್ಲೋಬಲ್ ಟೈಂಸ್ ವರದಿ ಮಾಡಿದೆ, ಚೀನಾ ಆಪ್ ಗಳು ಭಾರತದಲ್ಲಿ ಬಳಕೆದಾರರ ಮಾಹಿತಿಯನ್ನು ಕದಿಯುತ್ತಿದ್ದಾರೆ, ಹಾಗೂ ತಮಗೆ ಉಪಯುಕ್ತವೆನಿಸುವ ಕಂಟೆಂಟ್ ಗಳನ್ನು ಹೆಚ್ಚಾಗಿ ಪ್ರಮೋ ಟ್ ಮಾಡುತ್ತಿದ್ದಾರೆ ಎಂಬುವ ಗುಪ್ತಚರ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ.

ಅಷ್ಟೇ ಅಲ್ಲದೆ ಈ ಬಗ್ಗೆ ಆಪಲ್ ಸಂಸ್ಥೆ ಕೂಡ ರಿಸರ್ಚ್ ನಡೆಸಿ ಚೀನಾದ tik.tok.app ಬಳಕೆದಾರರ ಮಾಹಿತಿಯನ್ನು ಕಲಿಯುತ್ತದೆ ಎಂಬುವ ವರದಿಯನ್ನು ನೀಡಿದೆ, ಇದೆಲ್ಲದರ ನಡುವೆ ಭಾರತ ಗಡಿಯಲ್ಲಿ ಚೀನಾ ತನ್ನ ಕ್ಯಾತೆಯನ್ನು ಶುರುಮಾಡಿದಾಗ ಭಾರತದ ನಾಗರಿಕರಿಗೂ ಚೀನಾದ ವಿರುದ್ಧ ದ್ವೇಷದ ಮನೋಭಾವನೆ ಹುಟ್ಟಿಕೊಂಡಿತು, ಇದೇ ಸಂದರ್ಭದಲ್ಲಿ ಭಾರತ ಈ ದಿಟ್ಟ ನಿರ್ಧಾರವನ್ನು ಕೈಗೊಂಡ ಕಾರಣ ಭಾರತೀಯ ಆ್ಯಪ್ ಗಳಿಗೆ ಉತ್ತಮ ಅವಕಾಶ ನೀಡಿದಂತಾಗಿದೆ, ಭಾರತದ ಆದಾಯ ಹೆಚ್ಚಲಿದೆ.

LEAVE A REPLY

Please enter your comment!
Please enter your name here