ಹಾಲಿನಿಂದ ಹೀಗೆ ಮಾಡಿದರೆ 24 ಗಂಟೆಗಳಲ್ಲಿ ಶ್ರೀಮಂತರಾಗ್ತೀರ!

0
3379

ಹಾಲು ಪವಿತ್ರವಾದುದು. ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಾಲಿಗೆ ಬಹಳ ಮಹತ್ವ. ಹಾಲು ಅಂದರೆ ಪರಿಶುದ್ದತೆ , ಮತ್ತು ನಿರ್ಮಲತೆಗೆ ಉದಾಹರಣೆ. ಹಾಲು ಕುಡಿಯುವುದರಿಂದ ನಮಗೆ ಆರೋಗ್ಯವು ಉತ್ತಮವಾಗುತ್ತದೆ. ನಮ್ಮ ದೇಹಕ್ಕೂ ಒಳ್ಳೆಯದು. ನಮಗೆ ಶಕ್ತಿಯನ್ನು ನೀಡಲು ಇದು ಬಹಳ ಉಪಯುಕ್ತವಾಗಿದೆ.

ಹಾಲಿನಿಂದ ಆರೋಗ್ಯಕ್ಕಷ್ಟೇ ಅಲ್ಲ ನಾವು ಐಶ್ವರ್ಯವಂತರೂ ಆಗಬಹುದು. ಅದು ಹೇಗೆ ಅಂತೀರಾ ?! ಹಾಲಿನಿಂದ ಹೀಗೆ ಮಾಡಿದರೆ ಧನಲಕ್ಷ್ಮಿ ಒಲಿದು ಬರುವಳು.

ಚಂದ್ರನನ್ನು ಹಾಲಿಗೆ ಹೋಲಿಸುತ್ತಾರೆ. ಹಾಲಿನಂತಹ ಬೆಳದಿಂಗಳು ,ಹಾಲಿನಿಂದ ಬಿಳುಪು ಚಂದಿರ ಎಂದು. ಚಂದ್ರನಿಗೆ ಹಾಲು ಪ್ರಿಯವಾದುದು. ಒಂದು ಲೋಟ ಹಾಲನ್ನು ಚಂದ್ರದೇವನಿಗೆ ನೈವೇದ್ಯ ಮಾಡಿದರೆ ಆತ ಸಂತುಷ್ಟನಾಗಿ ಅನುಗ್ರಹಿಸುತ್ತಾನೆ ಎನ್ನುತ್ತದೆ ಶಾಸ್ತ್ರ. ಇನ್ನು ಹಾಲಿಗೆ ಸ್ವಲ್ಪ ಸಕ್ಕರೆ ಹಾಕಿ ಗುರು ಗ್ರಹಕ್ಕೆ ನೈವೇದ್ಯ ಮಾಡಿದರೆ ಅವನ ಅನುಗ್ರಹವನ್ನು ಪಡೆದುಕೊಳ್ಳಬಹುದು.

ನಾವು ಹಿಂದಿನಿಂದಲೂ ನಾಗದೇವತೆಗೆ ಹಾಲನ್ನು ಅಭಿಷೇಕ ಮಾಡುತ್ತಾ ಬಂದಿದ್ದೇವೆ. ನಾಗದೇವತೆಗೆ ಹಾಲು ಅಭಿಷೇಕ ಮಾಡಿದರೆ ಸರ್ಪ ದೋಷಗಳು ಇಲ್ಲವಾಗುತ್ತವೆ. ಪರಮೇಶ್ವರನಿಗೆ ಹಾಲಿನ ಅಭಿಷೇಕ ಮಾಡಿದರೆ ಸರ್ವ ದೋಷಗಳು ಪರಿಹಾರವಾಗುತ್ತವೆ.

ನಮಗೆ ದೃಷ್ಟಿ ಆಗುವುದು ಸಾಮಾನ್ಯ. ನಮ್ಮ ಬೆಳವಣಿಗೆ ಕಂಡು ಜನಗಳು ದೃಷ್ಟಿ ಹಾಕುವುದು ಸಾಮಾನ್ಯ. ದೃಷ್ಟಿ ಆದರೆ ನಮ್ಮ ಏಳಿಗೆಯಲ್ಲಿ ಕುಂಠಿತವಾಗುತ್ತದೆ. ಇದಕ್ಕೆ ಭಾನುವಾರದಂದು ಒಂದು ಲೋಟ ಹಾಲನ್ನು ನಾವು ಮಲಗುವ ಜಾಗದಲ್ಲಿ ರಾತ್ರಿ ಇಟ್ಟುಕೊಂಡು ಬೆಳಿಗ್ಗೆ ಅದನ್ನು ತುಂಬೆಯ ಗಿಡದ ಬುಡಕ್ಕೆ ಹಾಕಿ ನಮಸ್ಕರಿಸಬೇಕು. ಇದನ್ನು ಕೆಲವು ಭಾನುವಾರ ಮಾಡಬೇಕು. ಇದರಿಂದ ದೃಷ್ಟಿ ದೋಷಗಳು ನಿವಾರಣೆ ಆಗಿ ಐಶ್ವರ್ಯವಂತರಾಗುತ್ತೇವೆ.

ಯಾವಾಗಲೂ ಅಪಘಾತಗಳು ಸಂಭವಿಸುತ್ತಿದ್ದರೆ ಅಮಾವಾಸ್ಯೆಯ ನಂತರ ಬರುವ ಮಂಗಳವಾರದಂದು ಒಂದು ಲೋಟ ಹಾಲು ಮತ್ತು ಸ್ವಲ್ಪ ಅಕ್ಕಿಯನ್ನು ತೊಳೆದು ಅದನ್ನು ಹರಿಯುವ ನೀರಿನಲ್ಲಿ ಹಾಕಬೇಕು‌ . ಇದರಿಂದ ಅಪಘಾತಗಳು ಸಂಭವಿಸುವುದಿಲ್ಲ.

ನಿಮಗೆ ಗ್ರಹದೋಷಗಳು ಇದ್ದರೆ ಸೋಮವಾರ ಈಶ್ವರನಿಗೆ ಒಂದು ಲೋಟ ಹಾಲು ಮತ್ತು ಕರಿಯ ಎಳ್ಳನ್ನು ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರ ಪಠಿಸುತ್ತಾ ಅಭಿಷೇಕ ಮಾಡಬೇಕು. ಇದರಿಂದ ಗ್ರಹ ದೋಷಗಳು ನಿವಾರಣೆಯಾಗುತ್ತದೆ. ಸಕಲ ಐಶ್ವರ್ಯಗಳು ಸಿಗುತ್ತವೆ.

ನೋಡಿದಿರಾ! ಹಾಲಿನಿಂದ ಎಷ್ಟೊಂದು ಪ್ರಯೋಜನವಿದೆ ಎಂದು . ಹಾಲು ಬರೀ ಆಹಾರಕ್ಕಷ್ಟೇ ಅಲ್ಲದೆ ಐಶ್ವರ್ಯ ಸಂಪಾದನೆಗೂ ,ನೆಮ್ಮದಿ , ಸಂಕಲ್ಪ ಸಿದ್ದಿಗೆ ಸಹಕಾರಿ ಆಗುತ್ತದೆ.

LEAVE A REPLY

Please enter your comment!
Please enter your name here