ಮದುವೆ ವಾರ್ಷಿಕೋತ್ಸವದ ಸಂತಸಲ್ಲಿ ಯಶ್ ಮತ್ತು ರಾಧಿಕಾ. ಕನ್ನಡದ ಸದ್ಯದ ನಂಬರ್ ಒನ್ ಸ್ಟಾರ್ ಅಂದರೆ ಅದು ಯಶ್. ಕೆಜಿಎಫ್ ಮುಖಾಂತರ ಇಡೀ ದೇಶಕ್ಕೇ ಅಭಿಮಾನದ ಕಿಚ್ಚು ಹಚ್ಚಿಸಿದವರು ಯಶ್. ಈಗ ಯಶ್ ಮತ್ತು ಅವರ ಪತ್ನಿ ರಾಧಿಕಾ ಪಂಡಿತ್ ಡಬ್ಬಲ್ ಖುಷಿಯಲ್ಲಿದ್ದಾರೆ. ಕಾರಣ ಮೊನ್ನೆ ಮೊನ್ನೆ ಅವರ ಮಗಳು ಐರಾಳ ಮೊದಲ ವರ್ಷದ ಹುಟ್ಟಿದ ಹಬ್ಬದ ಸಂಭ್ರಮವಾದರೆ ಇವತ್ತು ಡಿಸೆಂಬರ್ 9 ಯಶ್ ಮತ್ತು ರಾಧಿಕಾ ಪಂಡಿತ್ ಮದುವೆಯಾಗಿ ಮೂರು ವರ್ಷ ತುಂಬಿದೆ.
ಡಿಸೆಂಬರ್ 9 2016 ರಂದು ಅದ್ದೂರಿಯಾಗಿ ಮದುವೆಯಾದ ಈ ತಾರಾ ಜೋಡಿಯ ಸ್ನೇಹ ,ಪ್ರೀತಿ ಕೇವಲ ಮೂರು ವರ್ಷದ್ದಲ್ಲ. ಬಣ್ಣದ ಲೋಕಕ್ಕೆ ಇಬ್ಬರೂ ಒಟ್ಟಿಗೆ ಬಂದರು. ಆಗಲೆ ಇಬ್ಬರೂ ಸ್ನೇಹಿತರಾಗಿದ್ದರು. ಈ ಟಿವಿಯಲ್ಲಿ ಅಶೊಕ್ ಕಶ್ಯಪ್ ನಿರ್ದೇಶನದಲ್ಲಿ ಮೂಡಿ ಬಂದ ಧಾರಾವಾಹಿ ಮುಖಾಂತರ ಇಬ್ಬರೂ ಕಿರುತೆರೆಗೆ ಪರಿಚಯವಾದರು.
ನಂತರ ಬೆಳ್ಳಿತೆರೆಗೆ ಬಂದು ಇಬ್ಬರೂ ತಮ್ಮ ಕಲೆಯಿಂದ ಬೆಳೆದು ನಂಬರ್ ಒನ್ ಆದರು. ಮೊಗ್ಗಿನ ಮನಸ್ಸು ಚಿತ್ರದಿಂದ ಇಬ್ಬರೂ ಒಟ್ಟಿಗೆ ನಟಿಸಿದರು. ಆನಂತರ ರಾಮಾಚಾರಿ ಹೊಸ ಇತಿಹಾಸವನ್ನೇ ಸೃಷ್ಟಿಸಿತು. ಆ ಚಿತ್ರದಿಂದ ಇಬ್ಬರ ನಡುವೆ ಪ್ರೀತಿ ಗಾಢವಾಯಿತು. ಇಬ್ಬರ ಮನೆಯವರು ಒಪ್ಪಿಗೆ ಸೂಚಿಸಿ ಇವರ ಮದುವೆಗೆ ಅಂಕಿತ ಬಿತ್ತು.
ಈ ಖುಷಿಯ ಸಂದರ್ಭದಲ್ಲಿ ರಾಧಿಕಾ ಪಂಡಿತ್ ಇಬ್ಬರ ಹಳೆಯ ಫೋಟೋ ಹಾಕಿ ನಮ್ಮದು ಮೂರು ವರ್ಷದ ಪ್ರೀತಿಯಲ್ಲ, ಬಹು ವರ್ಷದಿಂದ ಕಟ್ಟಿದ ಸಂಬಂಧ ಹ್ಯಾಪಿ ಆನಿವರ್ಸರಿ ಎಂದು ಬರೆದುಕೊಂಡಿದ್ದಾರೆ. ಯಶ್ ಮತ್ತು ರಾಧಿಕಾಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ರಾಧಿಕಾ ಈಗ ಸಿನಿಮಾದಿಂದ ಸ್ವಲ್ಪ ಬಿಡುವು ಪಡೆದಿದ್ದು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ.
ಕೆಜಿಎಫ್ ಚಿತ್ರದಿಂದ ಗ್ಲೊಬಲ್ ಸ್ಟಾರ್ ಆಗಿರುವ ಯಶ್ ಈಗ ಅದರ ಭಾಗ 2 ರ ಶೂಟಿಂಗ್ ನಲ್ಲಿ ಇದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಮುಖ ಖಳ ಪಾತ್ರ ಅಧೀರನಾಗಿ ಬಾಲಿವುಡ್ ಸೂಪರ್ ಸ್ಟಾರ್ ಸಂಜತ್ ದತ್ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಕನ್ನಡಕ್ಕೆ ಅವರು ಪಾದಾರ್ಪಣೆ ಮಾಡುತ್ತಿದ್ದಾರೆ. ಎನಿವೇ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು ಯಶ್ ಮತ್ತು ರಾಧಿಕಾ ಪಂಡಿತ್ ರವರಿಗೆ.