ಸುಧಾಮೂರ್ತಿಯವರು 21 ವರ್ಷಗಳಿಂದ ಒಂದೇ ಒಂದು ಸೀರೆಯನ್ನು ಖರೀದಿಸಿಲ್ಲ ಯಾಕೆ ಗೊತ್ತೇ !

0
3943

ಸುಧಾಮೂರ್ತಿಯವರು ಈ ನಾಡು ಕಂಡ ಹೆಮ್ಮೆಯ ಕನ್ನಡತಿ. ದೇಶದ ಪ್ರತಿಷ್ಠಿತ ಕಂಪನಿಯಾದ ಇನ್ಫೋಸಿಸ್ ಸಂಸ್ಥೆಯ ಒಡೆಯ ನಾರಾಯಣ ಮೂರ್ತಿಯ ಹೆಂಡತಿ. ಅವರು ಸರಳತೆ ಮೂರ್ತಿ. ಅಷ್ಟು ಕೋಟಿ ಹಣ ಇದ್ದರೂ ಎಲ್ಲರಂತೆ ಸಾಮಾನ್ಯ ಜೀವನ ಸಾಗಿಸುತ್ತಿದ್ದಾರೆ.ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಎಲ್ಲರೊಟ್ಟಿಗೆ ಬೆರೆಯುತ್ತಾರೆ.

ಸಾವಿರಾರು ಶಾಲೆಗಳನ್ನು, ಗ್ರಂಥಾಲಯಗಳನ್ನು, ಹಾಗೂ ಶೌಚಾಲಯಗಳನ್ನು ಕಟ್ಟಿಸಿದ್ದಾರೆ. ತಮ್ಮ ಕೈಲಾದಷ್ಟು ಸಹಾಯವನ್ನು ಬಡಬಗ್ಗರಿಗೆ ಮಾಡುತ್ತಾ ಬಂದಿದ್ದಾರೆ. ಯಾವುದೇ ಪ್ರಕೃತಿ ವಿಕೋಪ ನಡೆದರೆ ಅಲ್ಲಿ ತಕ್ಷಣ ಪರಿಹಾರ ಕೊಡುತ್ತಾರೆ. ಯಾವುದೇ ಸಹಾಯವನ್ನು ಸರ್ಕಾರದಿಂದ ನಿರೀಕ್ಷಿಸದೆ ಸಹಾಯ ಮಾಡುತ್ತಾರೆ. ಅದಕ್ಕೆ ಅವರನ್ನು ಜನರು ಪ್ರೀತಿಯಿಂದ ಅಮ್ಮಾ ಎನ್ನುತ್ತಾರೆ.

ಸುಧಾಮೂರ್ತಿಯವರು ಅದ್ಬುತ ಬರಹಗಾರರು ಲೇಖಕಿಯೂ ಆಗಿದ್ದಾರೆ. ಅನೇಕ ಅತ್ಯುತ್ತಮ ಪುಸ್ತಕಗಳನ್ನು ಬರೆದಿದ್ದಾರೆ. ನಾಡಿನ ಪ್ರಮುಖ ದಿನಪತ್ರಿಕೆಗಳಲ್ಲಿ ಅವರ ಅಂಕಣ ಬರಹ ಪ್ರಕಟವಾಗಿವೆ.

ಇನ್ನೂ ಸುಧಾಮೂರ್ತಿಯವರು ಕೋಟ್ಯಾಧೀಶರಾಗಿದ್ದು ಅವರು ಮನಸ್ಸು ಮಾಡಿದರೆ ದಿನಕ್ಕೆ ಒಂದು ರೇಷ್ಮೆ ಸೀರೆಗಳನ್ನು ಕೊಳ್ಳಬಹುದು. ಆದರೆ ಒಂದು ಆಶ್ಚರ್ಯಕರ ವಿಷಯವನ್ನು ಹೇಳ್ತೀವಿ ಬನ್ನಿ..

ಸುಧಾಮೂರ್ತಿಯವರು ಕಳೆದ 21 ವರ್ಷಗಳಿಂದ ಒಂದೇ ಒಂದು ಸೀರೆಯನ್ನು ಕೊಂಡಿಲ್ಲವಂತೆ. ಕಾರಣ ಕೇಳಿದ್ರೆ ಅವರ ಬಗ್ಗೆ ಹೆಮ್ಮೆ ಅನ್ನಿಸುತ್ತೆ. ಸುಧಾಮೂರ್ತಿಯವರು 21 ವರ್ಷಗಳ ಹಿಂದೆ ಕಾಶಿಗೆ ಹೋಗಿದ್ದರು. ಸಾಮಾನ್ಯವಾಗಿ ಕಾಶಿಗೆ ಹೋದವರು ಯಾವುದಾದರೊಂದು ಅಭ್ಯಾಸವನ್ನು ಬಿಡಬೇಕು. ಅದಕ್ಕೆ ಸುಧಾಮೂರ್ತಿಯವರು ಸೀರೆಯನ್ನು ಕೊಳ್ಳುವುದನ್ನ ಬಿಡುತ್ತೇನೆ ಎಂದು ನಿರ್ಧಾರ ಮಾಡುತ್ತಾರೆ. ಕಾರಣ ಈ ದೇಶದ ಜನರು ಒಪ್ಪೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದಾರೆ.ನಾವು ಇರುವವರು ಆಡಂಬರದ ಜೀವನ ನಡೆಸಬಾರದು. ಅದಕ್ಕೆ ಸೀರೆಯನ್ನು ಕೊಳ್ಳುವುದು , ಆಡಂಬರದ ಜೀವನ ನಡೆಸುವುದು ಬಿಡಬೇಕು ಎಂದು ತೀರ್ಮಾನಿಸಿದರು. ಅಂದಿನಿಂದ ಸುಮಾರು 21 ವರ್ಷಗಳಿಂದ ಅವರು ಸೀರೆಯನ್ನು ಕೊಂಡಿಲ್ಲ.

ಅದಕ್ಕೆ ಅಲ್ಲವೇ ಅವರನ್ನು ತ್ಯಾಗಮೂರ್ತಿ ,ಸಹನಾಮೂರ್ತಿ ಎನ್ನುವುದು. ನಮ್ಮ ಹಿಂದಿನ ಲೇಖನದಲ್ಲಿ ಸುಧಾಮೂರ್ತಿಯವರು ತಮ್ಮ ಇಷ್ಟದ ಹಾಲು ಕುಡಿಯುವುದನ್ನು ಬಿಟ್ಟಿದ ಕಾರಣ ಹೇಳಿದ್ದೇವೆ. ಬಡವರು ಅರ್ಧ ಲೋಟ ಹಾಲಿಗೂ ಕಷ್ಟ ಪಡೋ ಈ ದೇಶದಲ್ಲಿ ನಮ್ಮಂತಹವರು ಕೈಲಾದ ಸಹಾಯ ಮಾಡಬೇಕು ಎಂದು ಹಾಲು ಕುಡಿಯುವುದನ್ನೇ ಬಿಟ್ಟಿದ್ದಾರೆ. ನಿಮ್ಮ ಅಭಿಪ್ರಾಯ ಏನು ಎಂದು ಕಾಮೆಂಟ್ ಮಾಡಿ ತಿಳಿಸುವಿರಾ ?!

LEAVE A REPLY

Please enter your comment!
Please enter your name here