ಮಗುವಿನ ಬೆನ್ನಿನಲ್ಲಿ ಹುಟ್ಟಿದ ಬೆರಳು – ವಿಚಿತ್ರ ಸುದ್ದಿ ಓದಿ

0
5200

ಈ ವಿಶೇಷ ಜಗದಲ್ಲಿ ವಿಚಿತ್ರ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ನಾಲ್ಕು ಕಾಲು, ನಾಲ್ಕು ಕೈಗಳು, ಎರಡು ತಲೆ ಇರುವ ಮಕ್ಕಳು ಜನಿಸುವುದು ಸಾಮಾನ್ಯ. ಪ್ರಾಣಿಗಳಲ್ಲಿಯೂ ಅಷ್ಟೇ ಎರಡೆರಡು ತಲೆ, ಆರು ಕಾಲು ಬೆಳೆದ ಪ್ರಾಣಿಗಳು ಹುಟ್ಟುತ್ತವೆ. ಅದು ವಿಚಿತ್ರವೋ ಅಥವಾ ಕಾಯಿಲೆಯೋ ಏನೋ ಆಗಾಗ್ಗೆ ಈ ವೈಚಿತ್ರ ನಡೆಯುತ್ತಿರುತ್ತವೆ.

ಮಧ್ಯಪ್ರದೇಶದ ಕಾರ್ಗೋನ್ ಸಮೀಪ ಬಾರ್ವಾ ಎಂಬ ಹಳ್ಳಿಯಲ್ಲಿ ಒಂದು ಹೆಣ್ಣು ಮಗುವಿನ ಬೆನ್ನಿನ ಮೇಲೆ ಬೆರಳಿನ ಆಕಾರದ ಮಾಂಸ ಬೆಳೆದಿದ್ದು ಎಂವೈ ಆಸ್ಪತ್ರೆಯ ವೈದ್ಯರು ಬಲು ಅಪರೂಪದ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿ ಅದನ್ನು ತೆಗೆದಿದ್ದಾರೆ. ಬಾರ್ವಾದ ಬಡ ಕುಟುಂಬದಲ್ಲಿನ ಮಗುವಿಗೆ ಹುಟ್ಟಿದಾಗಲೇ ಬೆನ್ನಿನ ಮೇಲೆ ಬೆರಳಿನಾಕಾರದ ಮಾಂಸ ಬೆಳೆದಿದೆ. ಇದನ್ನು ಕಂಡು ಗಾಭರಿಗೊಂಡ ಆ ದಂಪತಿಗಳು ಡಾಕ್ಟರ್’ಗೆ ತೋರಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಇದು ಈಗಲೇ ಶಸ್ತ್ರಚಿಕಿತ್ಸೆ ಮಾಡಿ ತೆಗೆಯಬೇಕು ಎಂದು ಹೇಳಿದ್ದಾರೆ. ಆದರೆ ಪಾಪ! ಕೂಲಿ ಮಾಡಿ ಜೀವನ ಸಾಗಿಸುವ ಆ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ಕೊಟ್ಟು ಆಪರೇಷನ್ ಮಾಡಿಸುವುದು ಹೇಗೆ ಎಂದು ಯೋಚಿಸಿ ಊರಿಗೆ ವಾಪಾಸು ಹೋಗಿದ್ದಾರೆ. ಅಲ್ಲಿನ ಊರಿನ ಜನ ಪವಾಡ ಎಂದು ತಂಡೋಪತಂಡವಾಗಿ ಆ ಮಗುವನ್ನು ನೋಡಲು ಬರುತ್ತಿದ್ದರು. ಆದರೆ ಆ ಮಗುವೋ ನೋವು ತಡೆಯಲಾರದೇ ಅಳುತ್ತಲೇ ಇತ್ತು.

ಇದರಿಂದ ಗಾಭರಿಗೊಂಡ ದಂಪತಿಗಳು ಎಂವೈ ಆಸ್ಪತ್ರೆಗೆ ಹೋದರು. ನರಚಿಕಿತ್ಸಾ ತಜ್ಞರು ಎಂಆರ್ ಐ ಟೆಸ್ಟ್‌ ಮಾಡಿದಾಗ ಮಗುವಿಗೆ ಟೆಥರ್ಡ್ ಕಾರ್ಡ್ ಎಂಬ ಕಾಯಿಲೆ ಇರುವುದು ಕಂಡು ಬಂದಿತು.ಇದರಲ್ಲಿ ದೊಡ್ಡ ರಕ್ತ ನಾಳ ಅದರ ಗೊತ್ತುಪಡಿಸಿದ ಜಾಗಕ್ಕಿಂತ ಸ್ವಲ್ಪ ಕೆಳಗಿನ ಭಾಗದಲ್ಲಿ ಬೆಳೆದಿತ್ತು. ಇದನ್ನು ಆಪರೇಷನ್ ಮಾಡಿ ತೆಗೆಯದಿದ್ದರೆ ಕಾಲುಗಳು ನಿಶ್ಯಕ್ತಿ ಕಳೆದುಕೊಳ್ಳುತ್ತವೆ, ಬೆನ್ನಿನ ನರಭಾಗ ವೀಕ್ ಆಗುತ್ತವೆ ಎಂದರು. ಕೊನೆಗೆ ಮಗುವನ್ನು ಆಸ್ಪತ್ರೆಯ ವೈದ್ಯರಾದ ರಾಕೇಶ್ ಗುಪ್ತಾ ಹಾಗೂ ಜಾಫರ್ ಶೇಖ್ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದರು. ಮಗು ಆರೋಗ್ಯವಾಗಿದ್ದು ಚೇತರಿಸಿಕೊಳ್ಳುತ್ತಿದೆ. ಮಗುವನ್ನು ನಾಲ್ಕು ದಿನಗಳ ನಂತರ ಡಿಸ್’ಚಾರ್ಜ್ ಮಾಡಲಾಗಿದೆ.

ಇದೇ ರೀತಿಯ ಒಂದು ಘಟನೆ ಇತ್ತೀಚೆಗೆ ವೈರಲ್ ಆಗುತ್ತಿದೆ. ರಾಕ್ಷಸಾಕಾರದ ಒಂದು ಮಗು ಹುಟ್ಟುವಾಗಲೇ ತನ್ನ ತಾಯಿಯನ್ನು ಬಲಿ ತೆಗೆದುಕೊಂಡಿತ್ತಲ್ಲದೇ, ಅದರ ಕೈ ಮುಟ್ಟಿ ಹೆರಿಗೆ ಮಾಡಿದ ನರ್ಸಿನ ಬಲಿ ತೆಗೆದುಕೊಂಡಿತ್ತು. ಕೊನೆಗೆ ಆ ಮಗುವನ್ನು ಹದಿನಾರು ಇಂಜಕ್ಷನ್ ಕೊಟ್ಟು ಸಾಯಿಸಲಾಗಿದೆ ಎಂದು ಸುದ್ದಿಯಾಗಿತ್ತು. ಇದು ಎಷ್ಟರಮಟ್ಟಿಗೆ ನಿಜವೋ ಗೊತ್ತಿಲ್ಲ.

LEAVE A REPLY

Please enter your comment!
Please enter your name here