ಒಂದು ತುಳಸಿ ಗಿಡ ನಿಮ್ಮ ಮನೆಯ ಮುಂದೆ ಇದ್ದರೆ ಎಷ್ಟೆಲ್ಲಾ ಲಾಭಗಳಿವೆ ಅಂತ ಗೊತ್ತಾ..?

0
3099

ತುಳಸಿ ಗಿಡ, ಹಿಂದೂ ಸಂಪ್ರದಾಯ ಪಾಲಿಸುವ ಪ್ರತಿಯೊಬ್ಬರ ಮನೆಯಲ್ಲೂ ನಾವು ಕಾಣಬಹುದು. ತುಳಸಿ ಗಿಡದಲ್ಲಿ ರೋಗಗಳನ್ನ ಗುಣ ಪಡಿಸುವ ಹಾಗೂ ಕ್ರಿಮಿಕೀಟಗಳನ್ನ ತಡೆಯುವ ಶಕ್ತಿ ಇದೆ ಎಂದು ಹೇಳುತ್ತಾರೆ, ತುಳಸಿ ಗಿಡದಲ್ಲಿ ಹಲವು ಆರೋಗ್ಯಕರ ಗುಣಗಳಿವೆ ಎಂದು ಆಯುರ್ವೇದವು ಹೇಳುತ್ತದೆ, ತುಳಸಿ ಗಿಡ ಮನೆಯಲ್ಲಿ ಇರುವುದರಿಂದ ಆಗುವ ಇನ್ನಷ್ಟು ಲಾಭಗಳು ಇಲ್ಲಿದೆ ನೋಡಿ.

ರೋಗಗಳಿಗೆ ರಾಮಬಾಣ : ಹಲವು ಶೀತ ಸಂಬಂಧೀ ರೋಗಗಳಿಗೆ ತುಳಸಿ ಮದ್ದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ, ಪ್ರತಿ ನಿತ್ಯ ಇದರ ಎಲೆಯನ್ನು ಜಗಿಯುತ್ತಿದ್ದರೆ ಶೀತ, ಕಫ, ಅಲರ್ಜಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಕಿಡ್ನಿ ಕಲ್ಲು : ಮೂತ್ರಪಿಂಡದ ಕಲ್ಲು ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿನಿತ್ಯ ತುಳಸಿ ಎಲೆಯ ರಸದ ಜತೆಗೆ ಜೇನು ತುಪ್ಪ ಸೇರಿಸಿ ಕುಡಿಯುತ್ತಿದ್ದರೆ ಒಳ್ಳೆಯದು, ಹಾಗಾಗಿ ಮನೆಯ ಸುತ್ತ ತುಳಸಿ ಗಿಡ ನೆಡುವುದು ಉತ್ತಮ.

ಸೊಳ್ಳೆ ಬರಲ್ಲ : ಸಂಜೆಯಾದರೆ ಸಾಕು ಸೊಳ್ಳೆ ಕಾಟ ಎನ್ನುವವರ ಸಂಖ್ಯೆ ಹೆಚ್ಚು, ಅಂತವರು ಮನೆಯ ಸುತ್ತ ಹೆಚ್ಚು ಹೆಚ್ಚು ತುಳಸಿ ಗಿಡ ನೆಟ್ಟು ನೋಡಿ, ಇದರ ಸುವಾಸನೆಗೆ ಸೊಳ್ಳೆ ಹೆಚ್ಚು ಸುಳಿಯಲಾರದು, ಇದು ಗಾಳಿಯನ್ನು ಶುದ್ಧ ಹಾಗೂ ನಿರ್ಮಲಗೊಳಿಸುತ್ತದೆ.

ಶುದ್ಧ ಗಾಳಿ : ಬೇರೆ ಸಸ್ಯ ಸಂಕುಲಗಳಿಗೆ ಹೋಲಿಸಿದರೆ ತುಳಸಿ ಹೆಚ್ಚು ಆಮ್ಲಜನಕ ಬಿಡುಗಡೆ ಮಾಡುತ್ತದೆ, ಅಂದಾಜು ದಿನಕ್ಕೆ 20 ಗಂಟೆಗಳ ಕಾಲ ಇದು ಆಮ್ಲಜನಕ ಹೊರಸೂಸುತ್ತವೆ ಎನ್ನಲಾಗಿದೆ, ಅಲ್ಲದೆ ಇದರಿಂದ ಹೊರಹೊಮ್ಮುವ ಸುವಾಸನೆ ನಮ್ಮ ಲಹರಿಯನ್ನು ಉತ್ತಮಗೊಳಿಸುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here