ಬೇಲದಹಣ್ಣು ಯಾರಿಗೆ ಗೊತ್ತಿಲ್ಲ ತಾನೆ ಹೇಳಿ ಈ ಹಣ್ಣನ್ನು ನೀವು ಈಗಾಗಲೇ ತಿಂದಿರಬಹುದು ಇದು ಸ್ವಲ್ಪಹುಳಿ ಇರುತ್ತೆ ಅಲ್ಲದೆ ಈ ಹಣ್ಣು ಹಳ್ಳಿ ಕಡೆಯಲ್ಲಿ ಜಾಸ್ತಿ ಇರುತ್ತೆ .ಇದರಲ್ಲಿ ತುಂಬಾನೇ ಹೆಲ್ತ್ ಬೆನಿಫಿಟ್ ಇರುವಂತಹ ಅಂಶ ಇರುತ್ತದೆ. ಅಂದರೆ ಈ ಹಣ್ಣು ತುಂಬಾನೇ ಪೌಷ್ಟಿಕಾಂಶವುಳ್ಳ ಹಣ್ಣು ಹಾಗೂ ಆರೋಗ್ಯಕರವಾದ ಹಣ್ಣಾಗಿರುತ್ತೆ. ಅಲ್ಲದೆ ಈ ಹಣ್ಣನ್ನು ವುಡ್ ಆಪಲ್ ಅಂತ ಕೂಡ ಕರೆಯುತ್ತಾರೆ.
ನಾವು ದಿನನಿತ್ಯ ಉಪಯೋಗಿಸುವ ಆಹಾರದಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗದೇ ಇದ್ದಾಗ ಈ ಹಣ್ಣನ್ನು ತಿಂದರೆ ಒಳ್ಳೆಯದು. ಕೆಲವೊಂದು ಸಲ ಸರಿಯಾಗಿ ಜೀರ್ಣ ಆಗದೇ ಇದ್ದ ಸಂದರ್ಭದಲ್ಲಿ ಅತಿಸಾರ ಆಗುತ್ತೆ, ಡೈರಿ ಆಗುತ್ತೆ, ಮಲಬದ್ಧತೆ ಕೂಡ ಉಂಟಾಗುತ್ತದೆ ಹಾಗೂ ಹೊಟ್ಟೆಯಲ್ಲಿ ಕೂಡ ತುಂಬಾನೇ ಎಸಿಡಿಟಿ ಉಂಟಾಗುತ್ತೆ . ಅಂಥ ಸಂದರ್ಭದಲ್ಲಿ ಬೇಲದ ಹಣ್ಣನ್ನು ತಿಂದರೆ ತುಂಬಾನೇ ಲಾಭ ಆಗುತ್ತೆ .ಬೇಲದಹಣ್ಣು ಹೊರಗಡೆ ತುಂಬಾನೇ ಗಟ್ಟಿ ಇರುತ್ತೆ ಆದ್ರೆ ಒಳಗಡೆ ಮೃದುವಾಗಿರುತ್ತದೆ ಹಾಗೂ ಸ್ವಲ್ಪ ಹುಳಿ ಇರುತ್ತೆ.
ಬೇಲದಹಣ್ಣು ಕಫ ಕಡಿಮೆ ಮಾಡಲು ಕೂಡ ಮನೆಮದ್ದಾಗಿ ಇರುತ್ತದೆ ಅಂದರೆ ಇದನ್ನು ಕಡಿಮೆ ಮಾಡಲು ಮನೆಮದ್ದಾಗಿ ಉಪಯೋಗಿಸುತ್ತಾರೆ.ಅದು ಹೇಗೆಂದರೆ ಸಮ ಪ್ರಮಾಣವಾಗಿ ಕಲ್ಲು ಸಕ್ಕರೆಯನ್ನು ಬೆರೆಸಿ ಸೇವಿಸುವುದರಿಂದ ಕಫ ಕಡಿಮೆಯಾಗುತ್ತದೆ. ಹೀಗೆ ವಾರಕ್ಕೆ ಎರಡರಿಂದ ಮೂರು ಸಲ ಮಾಡುವುದರಿಂದ ಕಫ ಸಂಪೂರ್ಣವಾಗಿ ಗುಣವಾಗುತ್ತೆ.
ಇನ್ನು ಕೆಲವರಿಗೆ ಯಾವಾಗಲೂ ಬಿಕ್ಕಳಿಕೆ ಬರುವುದು ಸಹಜ ಅಂತವರು ಯಾವತರ ಮನೆಮದ್ದು ಮಾಡಿಸಬೇಕೆಂದರೆ ಬೇಲದ ಹಣ್ಣಿನ ಜೊತೆ ಎರಡು ನೆಲ್ಲಿಕಾಯಿಯನ್ನು ಹಾಕಿ ರಸ ಮಾಡಿ ಕುಡಿದರೆ ಬಿಕ್ಕಳಿಕೆ ಯು ಸಂಪೂರ್ಣವಾಗಿ ಗುಣವಾಗುತ್ತದೆ. ಇದನ್ನು ತಿಂಗಳಿಗೆ ನಾಲ್ಕರಿಂದ ಐದು ಸಲ ಮಾಡಿದರೆ ಸಾಕು ಸಂಪೂರ್ಣವಾಗಿ ಬಿಕ್ಕಳಿಕೆ ಗುಣವಾಗುತ್ತದೆ.
ಇನ್ನು ಅಸ್ತಮಾ ಕಡಿಮೆ ಮಾಡಲು ಕೂಡ ಈ ಬೇಲದ ಹಣ್ಣನ್ನು ಉಪಯೋಗಿಸುತ್ತಾರೆ ಅದು ಹೇಗೆಂದರೆ ಬೇಲದ ಎಲೆಗಳ ರಸಕ್ಕೆ ಉಪ್ಪು ಮತ್ತು ಬಿಸಿ ನೀರನ್ನು ಸೇರಿಸಿ ಸೇವಿಸುವುದರಿಂದ ಅಸ್ತಮಾವು ಕಡಿಮೆಯಾಗುತ್ತದೆ. ಅಲ್ಲದೆ ಬೇದಿ ಕಡಿಮೆಯಾಗಲು ಕೂಡ ಈ ಬೇಲದಹಣ್ಣು ಉಪಯೋಗಕರ. ಅಂದರೆ ಆಮಶಂಕೆ ಭೇದಿಯಾಗುತ್ತಿದ್ದರೆ ಬೀಜಗಳನ್ನು ತೆಗೆದ ಬೇಲದ ಕಾಯಿಯ ತಿರುಳನ್ನು ನುಣ್ಣಗೆ ರುಬ್ಬಿ ಸೇವಿಸಿದರೆ ಭೇದಿ ನಿಲ್ಲುತ್ತದೆ ಹೀಗೆ ಎರಡು ಸಲ ಮಾಡಿದರೆ ಬೇಡರು ಸಂಪೂರ್ಣವಾಗಿ ಕಡಿಮೆಯಾಗುತ್ತದೆ.