ವಯಸ್ಸಾದಂತೆ ತಲೆಯ ಕೂದಲು ಹಣ್ಣಾಗಿ ಉದುರುವುದು ಸಾಮಾನ್ಯ ಆದರೆ ನೀವು ಗಮನಿಸಿರಬಹುದು ಇಂದಿನ ಹರೆಯದ ಹುಡುಗ ಹುಡುಗಿಯರಿಗೆ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ, ಅಷ್ಟೇ ಅಲ್ಲದೆ ಕೂದಲಿನ ಅತಿಯಾದ ಒಟ್ಟು ಹಾಗೂ ಕೂದಲಿನ ಸರಿಯಾದ ಆರೈಕೆ ಮತ್ತು ಪೋಷಣೆ ಮಾಡದೆ ಇರುವುದರಿಂದ ಈ ರೀತಿಯ ಸಮಸ್ಯೆಗಳು ಕಾಡುತ್ತಿವೆ.
ಕೂದಲು ಬಿಳಿಯಾಗುವುದು, ಹೊಟ್ಟು ಹಾಗೂ ಉದುರುವ ಸಮಸ್ಯೆಯಿಂದ ಮುಕ್ತಿ ಪಡೆಯಲು ಕೆಲವು ಮನೆಮದ್ದು ಗಳನ್ನು ಹಾಗೂ ಕೂದಲ ಪೋಷಣೆ ಯ ಸರಿಯಾದ ರೀತಿಯನ್ನು ತಿಳಿಸುತ್ತೇವೆ ಒಮ್ಮೆ ಸಂಪೂರ್ಣವಾಗಿ ಓದಿ.
ಗಂಡಸರು ಪ್ರತಿದಿನ ಕೂದಲನ್ನು ತೊಳೆಯಬೇಕು ಹೆಂಗಸರು ವಾರಕ್ಕೆ ಎರಡು ಬಾರಿಯಾದರೂ ಕೂದಲನ್ನು ಶುದ್ಧಗೊಳಿಸಬೇಕು.
ಸಾಧ್ಯವಾದಷ್ಟು ನಿಮ್ಮ ಕೂದಲಿಗೆ ರಾಸಾಯನಿಕ ವಸ್ತುಗಳಿಂದ ತಯಾರಿಸಿದ ಶಾಂಪು ಗಳನ್ನು ಉಪಯೋಗಿಸುವುದು ನಿಲ್ಲಿಸಿ ಸೀಗೆಕಾಯಿ ಅನ್ನು ಬಳಸಿದರೆ ಉತ್ತಮ.
ಕೂದಲು ಒದ್ದೆಯಾಗಿದ್ದಾಗ ಯಾವುದೇ ಕಾರಣಕ್ಕೂ ಬಾಚಬಾರದು ಹೀಗೆ ಒದ್ದೆ ಕೂದಲನ್ನು ನೀವೇನಾದರೂ ಆದರೆ ಇದರಿಂದ ತಲೆಹೊಟ್ಟು ಸಮಸ್ಯೆ ಶುರುವಾಗುತ್ತದೆ ನೆನಪಿರಲಿ ಈ ಹುಟ್ಟಿನ ಸಮಸ್ಯೆಯಿಂದಲೇ ಕೂದಲ ಬೆಳವಣಿಗೆ ಕುಂಠಿತವಾಗಿ ಉದುರಲು ಶುರುವಾಗುತ್ತದೆ.
ಹರೆಯದ ಹುಡುಗರಿಗೆ ಅಥವಾ ಹುಡುಗಿಯರಿಗೆ ಬಿಳಿ ಕೂದಲಿನ ಸಮಸ್ಯೆ ಮಾನಸಿಕವಾಗಿ ಕುಗ್ಗುವಂತೆ ಮಾಡಿದೆ, ಚಿಂತೆ ಬೇಡ ಶುದ್ಧವಾದ ಕೊಬ್ಬರಿ ಎಣ್ಣೆಗೆ ಸ್ವಲ್ಪ ಮೆಂತ್ಯವನ್ನು ಬೆರೆಸಿ ಚೆನ್ನಾಗಿ ಕಾಯಿಸಿ ಹಾಗೂ ಈ ಎಣ್ಣೆಯನ್ನು ಪ್ರತಿದಿನ ತಲೆಗೆ ಹಚ್ಚಿ ಹೀಗೆ ಮಾಡುವುದರಿಂದ ಬಿಳಿ ಕೂದಲ ಸಮಸ್ಯೆ ಕಡಿಮೆಯಾಗುತ್ತದೆ.
ಕೂದಲ ಬುಡ ಗಳನ್ನು ಗಟ್ಟಿ ಮಾಡಲು ದಂಟಿನ ಸೊಪ್ಪಿನ ರಸವನ್ನು ಹಚ್ಚಬೇಕು ಹೀಗೆ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.
ತಾಂಬೂಲ ಕ್ಕಾಗಿ ಬಳಸುವ ವೀಳ್ಯದೆಲೆಯನ್ನು ಚೆನ್ನಾಗಿ ಕುಟ್ಟಿ ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಚೆನ್ನಾಗಿ ಕುದಿಸಿದ ನಂತರ ತಲೆಗೆ ಹಚ್ಚುವುದರಿಂದ ಕೂದಲು ಬಿಳಿ ಆಗುವುದಿಲ್ಲ.
ಪ್ರತಿದಿನ ಕೂದಲನ್ನು ತಣ್ಣೀರಿನಲ್ಲಿ ತೊಳೆದರೆ ಕೂದಲು ಉದುರುವುದಿಲ್ಲ ಹಾಗೂ ಮೆಂತ್ಯೆಯನ್ನು ಹಾಲಿನಲ್ಲಿ ನೆನೆಸಿ ಮರುದಿನ ನುಣ್ಣಗೆ ರುಬ್ಬಿ ಕೂದಲಿಗೆ ಹಚ್ಚಬೇಕು ಹಾಗೆ ಮಾಡುವುದರಿಂದ ಕೂದಲು ರೇಷ್ಮೆಯಂತ ಹೊಳೆಯುತ್ತದೆ.
ಅತಿ ಮುಖ್ಯವಾಗಿ ಗಮನಿಸಬೇಕಾದ ವಿಚಾರವೇನೆಂದರೆ ಕೂದಲು ಬೆಳೆಯಲು ದೇಹದಲ್ಲೂ ಸಹ ಉತ್ಕೃಷ್ಟವಾದ ಜೀವಸತ್ವಗಳು ಇರಬೇಕಲ್ಲವೇ, ಹಾಗಾಗಿ ಪ್ರತಿ ದಿನ ಉತ್ತಮ ಆಹಾರವನ್ನು ಸೇವಿಸಿ ಆರೋಗ್ಯದಿಂದಿರಿ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.