ಬಿಗ್ಬಾಸ್ ಶೊ ನಿರೂಪಿಸುವ ಸುದೀಪ್’ಗೆ ಎಷ್ಟು ಸಂಭಾವನೆ ಗೊತ್ತಾ‌ !

0
1860

ಬಿಗ್ಬಾಸ್ ಭಾರತೀಯ ಟಿವಿ ಮಾಧ್ಯಮದ ಜನಪ್ರಿಯ ರಿಯಾಲಿಟಿ ಶೋ‌. ಇದು ಹಿಂದಿ ,ತಮಿಳು, ತೆಲುಗು ಹಾಗೂ ಕನ್ನಡದ ಭಾಷೆಗಳಲ್ಲಿ ಮೂಡಿ ಬರುತ್ತಿದೆ. ಕನ್ನಡದಲ್ಲಿ ಈಗ 7 ನೇ ಸೀಜನ್ ನಡೆಯುತ್ತಿದೆ.ಕನ್ನಡದಲ್ಲಿ ಬಿಗ್ ಬಾಸ್ ಯಶಸ್ವಿಯಾಗಲು ಮುಖ್ಯ ಕಾರಣ ಕಿಚ್ಚ ಸುದೀಪ್.ವಾರದ ಎರಡು ದಿನಗಳಲ್ಲಿ ಕಾರ್ಯಕ್ರಮ ನಡೆಸಿಕೊಡುವ ಸುದೀಪ್ ಅತ್ಯಂತ ಸುಂದರವಾಗಿ ನಿರೂಪಣೆ ಮಾಡುತ್ತಾರೆ.ಅಷ್ಟಕ್ಕೂ ಸುದೀಪ್ ಈ ಬಿಗ್ ಬಾಸ್ ನ ಕಾರ್ಯಕ್ರಮ ನಡೆಸಿಕೊಡಲು ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಾರೆ ಗೊತ್ತೇ ?

ಸುದೀಪ್ ಮತ್ತು ಬಿಗ್ ಬಾಸ್ ನಡುವೆ ಐದು ವರ್ಷಗಳ ಅಂಗ್ರಿಮೆಂಟ್ ಆಗಿದೆ. ಐದು ಆವೃತ್ತಿಗಳಿಗೆ ನಿರೂಪಣೆಗಾಗಿ ಸುದೀಪ್ ದೊಡ್ಡ ಮೊತ್ತವನ್ನ ಪಡೆದುಕೊಂಡಿದ್ದಾರಂತೆ. ಮೂಲಗಳ ಪ್ರಕಾರ ಐದು ಆವೃತ್ತಿಗಾಗಿ ಸುದೀಪ್ 20 ಕೋಟಿ ಸಂಭಾವನೆ ಸ್ವೀಕರಿಸಿದ್ದಾರೆ ಎನ್ನಲಾಗಿದೆ. ಇದು 2015 ರಿಂದ ಡೀಲ್ ಆಗಿದ್ದು 2020 ರವರೆಗೆ ಇರಲಿದೆ.
ಒಟ್ಟು ಐದು ಆವೃತ್ತಿಗೆ ಅವರು 20 ಕೋಟಿ ಅಂದರೆ ಪ್ರತಿ ಆವೃತ್ತಿಗೆ 4 ಕೋಟಿ ತೆಗೆದುಕೊಂಡಂತಾಗುತ್ತದೆ.

ಕನ್ನಡದಲ್ಲಿ ಒಂದು ರಿಯಾಲಿಟಿ ಶೋಗೆ ಅತಿಹೆಚ್ಚು ಸಂಭಾವನೆಯನ್ನು ಸುದೀಪ್ ತೆಗೆದುಕೊಳ್ಳುತ್ತಾರೆ.ಆದರೆ ಹಿಂದಿ ಆವೃತ್ತಿಯನ್ನು ನಡೆಸಿಕೊಡುವ ಸಲ್ಮಾನ್ ಖಾನ್ ಕೇವಲ ಒಂದೇ ವಾರದ ಎಪಿಸೋಡ್’ಗೆ 31 ಕೋಟಿ ತೆಗೆದುಕೊಂಡರೆ ಒಂದು ಸಿಜನ್ 13 ವಾರ ಇರುತ್ತದೆ. ಒಟ್ಟಾರೆ ಒಂದು ಸೀಜನ್’ಗೆ ಒಟ್ಟು 400 ಕೋಟಿ ಸಂಭಾವನೆ ಪಡೆಯುತ್ತಾರೆ.

ಆ ಲೆಕ್ಕದಲ್ಲಿ ಸುದೀಪ್ ಸಂಭಾವನೆ ಕಡಿಮೆ ಎನಿಸಿದರೂ ಹಿಂದಿಯ ಬಿಗ್ಬಾಸ್ ನೋಡುವವರ ಸಂಖ್ಯೆ ಕನ್ನಡದ ನೋಡುಗರಿಗಿಂತ ಜಾಸ್ತಿ ಇದೆ.ಆದರೆ ಕನ್ನಡದಲ್ಲಿ ಸೀಮಿತ ನೋಡುಗರು ಇರುವುದರಿಂದ ಲಾಭಾಂಶದ ಲೆಕ್ಕಾಚಾರದ ಮೇಲೆ ಅವರ ಸಂಭಾವನೆ ನಿಗದಿಯಾಗಿರುತ್ತದೆ.

ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಇತ್ತೀಗೆಚೆಗೆ ಸಿಕ್ಕಾಪಟ್ಟೆ ಸದ್ದು ಮಾಡಿದ್ದು ನಿಮಗೆ ಗೊತ್ತೆ ಇದೆ.ಆದರೆ ಸಿನಿಮಾ ಬಿಡುಗಡೆಯಾದ ದಿನವೆ ಕಲ್ಲು ಮನಸ್ಸಿನ ಕಟುಕನೊಬ್ಬ ಸಿನಿಮಾವನ್ನು ಸಂಪೂರ್ಣ ರೆಕಾರ್ಡ್ ಮಾಡಿ ಅಂತರ್ಜಾಲದಲ್ಲಿ ಹರಿ ಬಿಟ್ಟಿದ್ದ.ಅಷ್ಟರಲ್ಲೆ ಎಚ್ಚೆತ ಸಿನಿಮಾ ತಂಡ ಹಾಗೂ ಬೆಂಗಳೂರು ನಗರ ವಲಯದ ಪೋಲಿಸ್ ಇಲಾಖೆ ಸಿಬ್ಬಂದಿಗಳು ಪೈರೆಸಿ ಮಾಡಲು ಹೊರಟ್ಟಿದ್ದ ಆ ವ್ಯಕ್ತಿಯನ್ನು ಹಿಡಿದು ಜೈಲಿಗೆ ಹಾಕಿದ್ದರು.ಈ ಘಟನೆಯ ನಂತರ ಪೈರೆಸಿ ಮಾಡುವ ಮಂದಿಗೆಲ್ಲಾ ನಡುಕ ಹುಟ್ಟಿದ್ದಂತು ಸತ್ಯ.ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಇಷ್ಟು ಚಾಲೆಂಜ್ ವಿರುದ್ದ ಹೋರಾಡಿ ಯಶಸ್ವಿಯಾಗಿ ಜನ ಮನ ಗೆದ್ದಿದಂತು ಸತ್ಯ.ಇದೆ ಸಮಯದಲ್ಲಿ ಬಿಗ್ ಬಾಸ್ ಪ್ರಾರಂಭ ಆಗಿತು.

LEAVE A REPLY

Please enter your comment!
Please enter your name here