ಐರಾ ಕತ್ತರಿಸಿದ ಕೇಕ್ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ ಕಣ್ರಿ !

0
4965

ಪ್ರತಿಯೊಬ್ಬ ತಂದೆ ತಾಯಿಯು ತನ್ನ ಮಕ್ಕಳ ಹುಟ್ಟಿದ ಹಬ್ಬವನ್ನು ಸ್ಮರಣೀಯವಾಗಿಸಲು ಎಷ್ಟು ಸಡಗರ,ಅದ್ದೂರಿಯಾಗಿ ನಡೆಸಲು ಸಾದ್ಯವಾಗುತ್ತದೋ ಅಷ್ಟು ಪ್ರಯತ್ನ ಮಾಡುತ್ತಾರೆ. ಜೀವನದ ರಸಗಳಿಗೆಯನ್ನು ಮಕೆ ತಾವು ದೊಡ್ಡವರಾದ ಮೇಲೂ ನೋಡಿ ಖುಚಿಪಡಲೆಂದು.

ಈಗಂತೂ ಹಳ್ಳಿಗಳಲ್ಲಿ ಬಡವರೂ ಕೂಡ ಮಕ್ಕಳ ಹುಟ್ಟಿದ ಹಬ್ಬವನ್ನು ಆಚರಿಸುತ್ತಾರೆ. ಇನ್ನೂ ಶ್ರೀಮಂತರು ಅದರಲ್ಲೂ ಜನಪ್ರಿಯ ನಾಯಕನಟರು ಕೇಳಬೇಕೆ ? ಅವರು ಒಂದು ಹೆಜ್ಜೆ ಮುಂದೆ ಹೋಗಿ ಆಚರಿಸುತ್ತಾರೆ.

ಕನ್ನಡದ ನಂಬರ್ ಒನ್ ನಟ ಹಾಗೂ ಗ್ಲೋಬಲ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ತಮ್ಮ ಮಗಳು ಐರಾಳ ಮೊದಲ ವರ್ಷದ ಹುಟ್ಟು ಹಬ್ಬವನ್ನು ಬೆಂಗಳೂರಿನ ಫನ್ ವರ್ಲ್ಡ್ ನಲ್ಲಿ ಬಹಳ ಅದ್ದೂರಿಯಾಗಿ ಆಚರಿಸಿದರು . ಈ ಕಾರ್ಯಕ್ರಮಕ್ಕೆ ಭಾರತಿ ವಿಷ್ಣುವರ್ಧನ್, ಜೊತೆ ಜೊತೆಯಲ್ಲಿ ಖ್ಯಾತಿಯ ಅನಿರುದ್ದ್ , ಚಾಲೆಂಜಿಂಗ್ ಸ್ಟಾರ್ ದರ್ಶನ್ , ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮುಂತಾದ ನಟರು ಹಾಜರಿದ್ದು ಪಾರ್ಟಿಗೆ ರಂಗು ತುಂಬಿದರು. ನಟ ಯಶ್ ತಮ್ಮ ಮಗಳ ಹುಟ್ಟಿದ ಹಬ್ಬವನ್ನು ಫನ್ ವರ್ಲ್ಡ್ ನಲ್ಲಿ ಆಚರಿಸಲು ಬಗೆ ಬಗೆಯ ಬಣ್ಣದ ಬಲೂನುಗಳನ್ನು ದಾರಿಯ ತುಂಬಾ ಕಟ್ಟಿದರು.

ಕೇಕ್ ಕತ್ತರಿಸುವ ಸ್ಟೆಜ್ ಹಿಂದೆ ಓಡುವ ಕುದುರೆಯ ಸವಾರಿಯ ಫೋಟೋಗಳನ್ನು ಅಂಟಿಸಿದ್ದರು. ನಿಮಗೆ ಗೊತ್ತಿರಲಿಕ್ಕಿಲ್ಲ ಐರಾಳ ಹುಟ್ಟು ಹಬ್ಬಕ್ಕೆಂದು ತಂದ ಕೇಕ್ ಸಾಮನ್ಯ ಕೇಕ್ ಆಗಿರಲಿಲ್ಲ. ಅದು ಮ್ಯಾಜಿಕ್ ಕೇಕ್ ಆಗಿತ್ತು. ಅಂದ್ರೆ ಕೇಕ್ ಮೇಲೆ ಸವಾರಿ ಮಾಡುವ ಚಿತ್ರ ಹಾಕಿ ಬಹಳ ಚೆನ್ನಾಗಿ ಡಿಸೈನ್ ಮಾಡಿದ್ದರು. ಹ್ಯಾಪಿ ಬರ್ತ್ ಡೇ ಐರಾ ಎಂದು ಬರೆದಿದ್ದ ಕೇಕ್ ಬೆಲೆ ಮಾತ್ರ ಹುಬ್ಬೇರಿಸುವಂತಹದ್ದು !

ಯಶ್ ತನ್ನ ಮಗಳ ಕೇಕನ್ನು ತಾನೇ ಖುದ್ದಾಗಿ ಮಾಡಿಸಿದ್ದರು. ತಮ್ಮ ಇಷ್ಟ ಬಂದ ಹಾಗೆ ಡಿಸೈನ್ ಹೀಗೆ ಬರಬೇಕೆಂದು ಆಸೆಯಿಂದ ಮಾಡಿಸಿದ್ದರು. ಅದರ ಬೆಲೆ ಅರವತ್ತು ಸಾವಿರ ರೂಪಾಯಿಗಳು.

ಐರಾ ದೊಡ್ಡವಳಾದ ಮೇಲೆ ಖಂಡಿತಾ ತನ್ನ ಮೊದಲ ಬರ್ತ್ ಡೇ ಸೆಲೆಬ್ರೇಷನ್ನ ನೋಡೇ ನೋಡುತ್ತಾಳೆ. ಆಗ ಅಪ್ಪ ಅಮ್ಮನ ಬಗ್ಗೆ ಹೆಮ್ಮೆಯಿಂದ ಬಾಚಿ ತಬ್ಬಿಕೊಳ್ಳುತ್ತಾಳೆ. ಅಲ್ಲವೇ ?!

LEAVE A REPLY

Please enter your comment!
Please enter your name here