ದೇಹದ ತೂಕ ಇಳಿಸುವ ಮೊದಲು ತೂಕ ಹೆಚ್ಚಾಗಲು ಕಾರಣಗಳೇನು ಎಂಬುದನ್ನ ತಿಳಿಯಿರಿ..!!

0
2306

ಹಲವುಜನರು ತೂಕ ಕಡಿಮೆ ಮಾಡಿ ಸ್ಲಿಮ್ ಆಗಿ ಕಾಣಲು ಇಚ್ಚಿಸುತ್ತಾರೆ, ಆದರೆ ಇವರೆಲ್ಲರೂ ಮಾಡುವ ಮೊದಲನೇ ತಪ್ಪೆಂದರೆ ಅವರ ದೇಹದ ತೂಕ ಯಾಕೆ ಹೆಚ್ಚಾಗಿದೆ ಎಂದು ತಿಳಿಯದೆ ಇರುವುದು, ಮೊದಲು ದೇಹದ ತೂಕ ಹೆಚಾಗಳು ಕಾರಣವೇನು ಎಂಬುದನ್ನ ತಿಳಿಯುವುದು ಉತ್ತಮ. ಇದನ್ನ ತಿಳಿದರೆ ಸುಲಭವಾಗಿ ದೇಹದ ತೂಕವನ್ನ ಕಡಿಮೆ ಮಾಡಬಹುದು, ತೂಕ ಹೆಚಾಗಳು ಕಾರಣವೇನು ಎಂಬುದು ಇಲ್ಲಿದೆ ನೋಡಿ.

ವಾರಕ್ಕೆ ಒಮ್ಮೆಯಾದರೂ ಚೆನ್ನಾಗಿ ಊಟ ಮಾಡೋಣ, ವೀಕೆಂಡ್‌ನಲ್ಲಿ ಚಾಕ್ಲೇಟ್‌ ಕೇಕ್‌ ತಿನ್ನೋಣ ಎಂದು ಎಂದಿಗೂ ಆಸೆ ಪಡಬೇಡಿ, ಇದರಿಂದ ನೀವು ವಾರವಿಡೀ ಪಾಲಿಸಿದ ಡಯಟ್‌ ವ್ಯರ್ಥವಾದಂತೆ.

ಕೆಲವರು ಡಯಟ್‌ ಆರಂಭಿಸಿದ ತಕ್ಷ ಣ ಕಠಿಣ ವ್ಯಾಯಾಮವನ್ನೂ ಮಾಡುತ್ತಾರೆ, ಸೂಕ್ತ ಆಹಾರವಿಲ್ಲದೆ ನಿತ್ರಾಣವಾಗಿರುವ ದೇಹ ವ್ಯಾಯಾಮದಿಂದ ಮತ್ತಷ್ಟು ಹದಗೆಡುತ್ತದೆ, ಆದ್ದರಿಂದ ಕಡಿಮೆ ಆಹಾರ ಸೇವನೆಗೆ ದೇಹ ಒಗ್ಗಿಕೊಂಡ ನಂತರ ನಿಧಾನವಾಗಿ ಸ್ವಲ್ಪ ಸ್ವಲ್ಪವೇ ವ್ಯಾಯಾಮ ಮಾಡುತ್ತಾ ಬನ್ನಿ.

ಪ್ರತಿ ವಾರ ನೀವು ಎಷ್ಟು ತೂಕ ಕಳೆದುಕೊಂಡಿದ್ದೀರಿ ಎಂಬುದರ ಮೇಲೆ ಹೊಸ ಹೊಸ ಡಯಟ್‌ ಪ್ಲಾನ್‌ ಮಾಡಿಕೊಳ್ಳಿ, ತೂಕ ನಷ್ಟಕ್ಕೆ ತಕ್ಕಂತೆ ನಿಮ್ಮ ಕ್ಯಾಲೋರಿ ಸೇವನೆಯ ಪ್ರಮಾಣ ಬದಲಾಗುತ್ತಿರುತ್ತದೆ, ಅದಕ್ಕೆ ತಕ್ಕಂತೆ ನಿಮ್ಮ ಡಯಟ್‌ ಹೊಂದಾಣಿಕೆಯಾಗಬೇಕು.

ಅವಸರದಿಂದ ಊಟ ಮಾಡಿದರೆ ನೀವು ತಿನ್ನುವ ಆಹಾರದ ಪ್ರಮಾಣ ಹೆಚ್ಚುತ್ತದೆ, ಆದ್ದರಿಂದ ಸಾಧ್ಯವಾದಷ್ಟು ಊಟದ ಪ್ರತಿಯೊಂದು ತುತ್ತನ್ನು ಎಂಜಾಯ್‌ ಮಾಡಿಕೊಂಡು ನಿಧಾನವಾಗಿ ಊಟ ಮಾಡಿ, ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಆಹಾರವನ್ನು ತಿನ್ನಿ.

ಬಹುತೇಕ ಜನರು ಊಟವಾದ ತಕ್ಷ ಣ ಮಲಗುತ್ತಾರೆ, ಇದರ ಬದಲು ವಾಕಿಂಗ್‌ ಮಾಡಿ, ಇದರಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ, ಆಹಾರ ಹೆಚ್ಚು ಹೊತ್ತು ಹೊಟ್ಟೆಯಲ್ಲಿದ್ದಷ್ಟು ಜೀರ್ಣಕ್ರಿಯೆ ದೀರ್ಘಗೊಳ್ಳುತ್ತದೆ, ಇದರಿಂದ ದೇಹ ಕೊಬ್ಬನ್ನು ಹೀರಿಕೊಳ್ಳುವ ಅವಧಿ ಹೆಚ್ಚುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here