ಬಿಸಿಸಿಐ ಸಂಸ್ಥೆ ಎಲ್ಲಾ ಪ್ರಾಂಚೈಸಿಗಳಿಗೂ ಐಪಿಎಲ್ ನಲ್ಲಿ ಆಡಲಿಚ್ಚಿಸುವ ಆಟಗಾರರ ಪಟ್ಟಿಯನ್ನು ಕಳುಹಿಸಿಕೊಟ್ಟಿದ್ದು ಸುಮಾರು ,970 ಆಟಗಾರರ ಹೆಸರು ಲಿಸ್ಟ್’ನಲ್ಲಿ ಇದೆ. 8 ತಂಡಗಳು ತಮಗೆ ಬೇಕಾದ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಆದರೆ ಕೆಲವು ಜನಪ್ರಿಯ ಆಟಗಾರರು ತಮ್ಮ ಮೂಲಬೆಲೆಯನ್ನು 2 ಕೋಟಿಗೆ ನಿಗದಿಪಡಿಸಿಕೊಂಡಿದ್ದರೆ , ಇನ್ನೂ ಕೆಲವು ಆಟಗಾರರು 1.5 ಕೋಟಿ ರೂಪಾಯಿಗಳಿಗೆ ನಿಗದಿಪಡಿಸಿಕೊಂಡಿದ್ದಾರೆ. ಅದು ಬಿಟ್ಟು 970 ಆಟಗಾರ ಆಯ್ಕೆ ಬಯಸಿ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಐಪಿಎಲ್’ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್, ಬೆಂಗಳೂರು ರಾಯಲ್ ಚಾಲೆಂಜರ್ಸ್, ಡೆಲ್ಲಿ ಕ್ಯಾಪಿಟಲ್, ಚೆನೈ, ಕೋಲ್ಕತ್ತಾ, ಮುಂಬೈ, ಹೈದರಾಬಾದ್ ತಂಡಗಳು ಪೈಪೋಟಿ ನಡೆಸಲಿವೆ. ಅದರಲ್ಲಿ ಎಂದೂ ಗೆಲ್ಲದ ಪಂಜಾಬ್, ಡೆಲ್ಲಿ ಮತ್ತು ಬೆಂಗಳೂರು ತಂಡಗಳು ಆಟಗಾರರನ್ನು ಖರೀದಿಸಲು ಉತ್ಸುಕತೆ ತೋರಿದ್ದಾರೆ. ಸುಮಾರು 7 ಆಟಗಾರರು ತಮ್ಮ ಮೂಲಬೆಲೆಯನ್ನು 2 ಕೋಟಿಗೆ ನಿಗದಿಪಡಿಸಿದ್ದಾರೆ. ಅವರೆಂದರೆ ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್‌ವುಡ್ , ಕ್ರಿಸ್ ಲಿನ್ , ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಡೇಲ್ ಸ್ಪೇನ್, ಏಂಜಲೋ ಮ್ಯಾಥ್ಯೂಸ್. ಇವರಲ್ಲಿ ಐದು ಜನ ಆಸ್ಟ್ರೇಲಿಯಾದವರಾಗಿದ್ದು ಇಬ್ಬರು ಶ್ರೀಲಂಕಾದವರಾಗಿದ್ದಾರೆ.
ಇನ್ನೂ ರಾಬಿನ್ ಉತ್ತಪ್ಪ, ಶಾನ್ ಮಾರ್ಷ್, ಕೇನ್ ರಿಚರ್ಡ್ಸನ್, ಇಯಾನ್ ಮಾರ್ಗನ್, ಜೇಸನ್ ರಾಯ್, ಕ್ರಿಸ್ ವೋಕ್ಸ್, ಡೆವಿಡ್ ವಿಲ್ಲಿ, ಕ್ರಿಸ್ ಮೋರಿಸ್, ಕೈಲ್ ಅಬೊಟ್ ಆಟಗಾರೆ 1.5 ಕೋಟಿಗೆ ನಿಗದಿಪಡಿಸಿಕೊಂಡಿದ್ದಾರೆ. ಅದರಲ್ಲಿ ರಾಬಿನ್ ಉತ್ತಪ್ಪ ಮಾತ್ರ ಇಂಡಿತಾದವರಾಗಿದ್ದಾರೆ.
ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಗಮನಾರ್ಹ ಬದಲಾವಣೆ ಆಗಲಿದ್ದು ಕೆಲವು ಆಟಗಾರರ ಅದಲು ಬದಲು ಆಗಲಿದೆ. ವಿರಾಟ್ ಕೊಹ್ಲಿ ತಂಡದ ಕ್ಯಾಪ್ಟನ್ ಆಗಲಿದ್ದಾರೆ.
ಡಿಸೆಂಬರ್ 19 ರಂದು ಕೋಲ್ಕತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು ಸುಮಾರು 8 ತಂಡಗಳು ತಮಗೆ ಬೇಕಾದ ಆಟಗಾರರ ಆಯ್ಕೆ ಮಾಡಿಕೊಳ್ಳಬೇಕಿದೆ. ಬೆಂಗಳೂರು ತಂಡಕ್ಕೆ ಸಣ್ಣ ಶಾಕ್ ಇದ್ದು ಆ ತಂಡದ ಪ್ರಮುಖ ವೇಗಿ ಮಿಕೆಲ್ ಸ್ಟಾರ್ಕ್ ಹರಾಜು ಪ್ರಕ್ರಿಯೆಯಿಂದ ಹೊರಗುಳಿದಿದ್ದಾರೆ.
ಇನ್ನೂ ಖುಷಿಯ ವಿಚಾರ ಎನೆಂದರೆ ಕೊಹ್ಲಿ ಜೊತೆ ಕನ್ನಡಿಗನೊಬ್ಬ ಓಪನರ್ ಆಗುತ್ತಾನೆ. ದೇವದತ್ ಓಪನರ್ ಆಗಿ ಆರ್ಸಿಬಿ ಪರ ಆಡಲಿದ್ದಾರೆ.