ಟೈಫಾಯ್ಡ್ ಜ್ವರವು ಸಾಲ್ಮೊನೆಲ್ಲ ಟೈಫಿ ಎಂಬ ಬ್ಯಾಕ್ಟೀರಿಯಾದಿಂದ ಹರಡುತ್ತದೆ. ಇದು ವಿಷಾಹಾರಕ್ಕೆ ಕಾರಣವಾದ ಸಾಲ್ಮೊನೆಲ್ಲ ಬ್ಯಾಕ್ಟೀರಿಯಾ ಜಾತಿಗೆ ಸೇರಿದ್ದು. ಒಂದು ಸಲ ಈ ಬ್ಯಾಕ್ಟೀರಿಯಾ ಮನುಷ್ಯನ ದೇಹ ಸೇರಿದರೆ ಅದು ತ್ವರಿತವಾಗಿ ದ್ವಿಗುಣಗೊಳ್ಳುತ್ತಾ ರಕ್ತಪ್ರವಾಹದಲ್ಲಿ ಹರಡಿಕೊಂಡು ರೋಗ ಲಕ್ಷಣಗಳನ್ನು ಪ್ರದರ್ಶಿಸುತ್ತದೆ, ಹಾಗಾಗಿ ಯಾವುದೇ ಕ್ಮಾರಣಕ್ಕೂ ನಿಮಗೇನಾದರೂ ಜ್ವರದಂತಹ ಲಕ್ಷಣಗಳು ಕಾಣಿಸಿ ಕೊಂಡರೆ ಅದು ಟೈಫಾಯ್ಡ್ ಜ್ವರವೇ ಎಂದು ಕಂಡು ಹಿಡಿಯುವುದು ಹೇಗೆ ಎಂಬುದನ್ನು ಮುಂದೆ ತಿಳಿಸಿದ್ದೇವೆ.
ಜ್ವರ ಬಂದವರ ಎದೆಯ ಮೇಲೆ ಗುಲಾಬಿ ಬಣ್ಣದ ಕಲೆಗಳಾಗುವುದು, ಸ್ವಲ್ಪವಾಗಿ ಶುರುವಾಗುವ ಜ್ವರ ದಿನೇ ದಿನೇ ಜಾಸ್ತಿಯಾಗಬಹುದು, ಹೊಟ್ಟೆ ನೋವು ಮತ್ತು ಹಸಿವೇ ಇಲ್ಲದಿರುವುದು, ಸುಸ್ತು ಮತ್ತು ಆಯಾಸ ಹಾಗು ತಲೆನೋವು ಇದರ ಲಕ್ಷಣಗಳು.
ಟೈಫಾಯ್ಡ್ ಸಮಯದಲ್ಲಿ ಸೇವಿಸ ಬೇಕಾದ ಆಹಾರಗಳು ಹೆಚ್ಚು ಕ್ಯಾಲೋರಿ ಇರುವಂತಹ ಕಾರ್ಬೊಹೈಡ್ರಾಟ್ ಆಹಾರಗಳಾದ ಗ್ಲುಕೋಸ್ ಹಾಕಿದ ಹಣ್ಣಿನ ರಸ, ಎಳನೀರು, ಬಾರ್ಲಿ, ಗಂಜಿ ಮತ್ತು ಬೆಣ್ಣೆ ಹಾಗು ತುಪ್ಪ, ಅಡುಗೆ ಎಣ್ಣೆ, ಮೆಣಸಿನಕಾಯಿ, ಮಸಾಲೆ ಪದಾರ್ಥಗಳು, ಸಿಹಿ ತಿನಿಸುಗಳು, ಗಟ್ಟಿ ಕ್ರೀಮ್ ಸೂಪ್, ಕರಿದ ಪದಾರ್ಥ ಮತ್ತು ತಣ್ಣಗಿರುವ ಪದಾರ್ಥಗಳನ್ನು ಆದಷ್ಟು ತಿನ್ನಬೇಡಿ, ಬದಲಿಗೆ ಹಣ್ಣುಗಳನ್ನು ತಿನ್ನಬೇಕು.
ನಿಲ್ಲದ ವಾಂತಿ, ಅತಿಯಾದ ಭೇದಿ, ಊದಿಕೊಂಡ ಹೊಟ್ಟೆ, ಜ್ವರ ಮೂರು ದಿನಕ್ಕಿಂತ ಜಾಸ್ತಿ ಇದ್ದರೆ ಮೊದಲು ನಿಮ್ಮ ಅತ್ತಿರದ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.