ಕೊಬ್ಬರಿ ಎಣ್ಣೆಯಿಂದ ಪ್ರತಿ ದಿನ ಮನೆಯಲ್ಲಿ ಈ ರೀತಿ ದೀಪ ಹಚ್ಚಿದರೆ ಸಕಲ ದಾರಿದ್ರ್ಯದಿಂದ ನಿವಾರಣೆ..!!

0
3898

ಯಾರ ಮನೆಯಲ್ಲಿ ಕೊಬ್ಬರಿ ಎಣ್ಣೆ ದೀಪವನ್ನು ದೇವರಿಗೆ ಹಚ್ಚುತ್ತಾರೆ ಆ ಮನೆಯಲ್ಲಿ ಶುಭಕಾರ್ಯಗಳು ಬಹಳ ಬೇಗ ಜರುಗುತ್ತದೆ.

ಯಾವ ಮನೆಯಲ್ಲಿ ಮನೆದೇವರಿಗೆ ಕೊಬ್ಬರಿ ಎಣ್ಣೆ ದೀಪವನ್ನು ಅಖಂಡ ( ನಂದಾದೀಪ ) ದೇವರಿಗೆ ಹಚ್ಚುತ್ತಾರೆ ಆ ಮನೆಯಲ್ಲಿ ಸಿರಿ ಸಂಪತ್ತು ವೃದ್ಧಿಯಾಗುತ್ತದೆ.

ಯಾರ ಮನೆಯಲ್ಲಿ ಮದುವೆಯಾಗದ ಗಂಡು ಅಥವಾ ಹೆಣ್ಣು ಮಕ್ಕಳು ಕಾತ್ಯಾಯಿನಿ ದೇವಿಯ ಪೂಜೆಯನ್ನು ಮಾಡುವಾಗ ಕೊಬ್ಬರಿ ಎಣ್ಣೆ ದೀಪವನ್ನು ದೇವರಿಗೆ ಹಚ್ಚಿದರೆ ಆ ಮನೆಯಲ್ಲಿ ಬೇಗ ಮದುವೆ ಕಾರ್ಯಗಳು ಜರುಗುತ್ತವೆ.

ಮಂಗಳವಾರ ಸುಬ್ರಮಣ್ಯ ಸ್ವಾಮಿಗೆ ಕೊಬ್ಬರಿ ಎಣ್ಣೆ ದೀಪವನ್ನು ದೇವರಿಗೆ ಹಚ್ಚಿದರೆ ಆ ಮನೆಯಲ್ಲಿ ಸಂತಾನವಿಲ್ಲದ ಗೃಹಿಣಿಯರಿಗೆ ಸಂತಾನ ಭಾಗ್ಯ ಲಭಿಸುತ್ತದೆ.

ಅಶ್ವತ್ಥ ಮರದ ಕೆಳಗೆ ಇರುವ ನಾಗರ ಕಲ್ಲಿಗೆ ತನಿ ಎರೆಯುವ ಸಮಯದಲ್ಲಿ ಶ್ರೀ ಅಶ್ವಥನಾರಾಯಣ ಸ್ವಾಮಿಗೆ ಕೊಬ್ಬರಿ ಎಣ್ಣೆಯಲ್ಲಿ ದೀಪ ಹಚ್ಚಿದರೆ ದಾಂಪತ್ಯ ಜೀವನದ ಹಲವು ಕಲಹಗಳು ನಿವಾರಣೆಯಾಗುತ್ತದೆ.

ಜಾತಕದಲ್ಲಿ ಕುಜ ದೋಷ ಜಾಸ್ತಿ ಇದ್ದರೆ ಅವರು ಮಂಗಳವಾರ ಅಥವಾ ಶುಕ್ರವಾರ ದಿವಸ ದೇವಿ ಪೂಜೆ ಮಾಡುವ ಸಮಯದಲ್ಲಿ ಕೊಬ್ಬರಿ ಎಣ್ಣೆ ದೀಪವನ್ನು ದೇವರಿಗೆ ಹಚ್ಚಿ, ಒಬ್ಬಟ್ಟನ್ನು ನೈವೇದ್ಯ ಮಾಡಿ, ಬಾಗಿನವನ್ನು ದಾನ ವಾಗಿರುತ್ತದೆ ಕುಜ ದೋಷ ನಿವಾರಣೆ ಆಗುತ್ತದೆ.

ಅಶ್ವತ್ಥನಾರಾಯಣ ಸ್ವಾಮಿಯ ಸನ್ನಿಧಿಯಲ್ಲಿ ಇರುವ ನಾಗರ ಕಲ್ಲಿಗೆ ( ಶ್ರೀಕೃಷ್ಣ ಇರಬೇಕು ) ಸಂತಾನಗೋಪಾಲಕೃಷ್ಣ ಸ್ವಾಮಿಯ ಪೂಜಾ ಸಮಯದಲ್ಲಿ ಕೊಬ್ಬರಿ ಎಣ್ಣೆ ದೀಪವನ್ನು ಹಚ್ಚಿ ವ್ರತವನ್ನು ಮಾಡಿ, ಉದ್ಯಾಪನೆ ಯನ್ನು ಮಾಡಿಕೊಂಡರೆ ಗಂಡು ಸಂತಾನ ಫಲ ಪ್ರಾಪ್ತಿಯಾಗುತ್ತದೆ.

ಯಾವುದೇ ಹೋಮದಲ್ಲಿ ಪೂರ್ಣಾಹುತಿ ಸಮಯದಲ್ಲಿ ರೇಷ್ಮೆ ವಸ್ತ್ರವನ್ನು ಕೊಬ್ಬರಿ ಎಣ್ಣೆಯಲ್ಲಿ ನೆನೆಸಿ ಹೋಮಕುಂಡಕ್ಕೆ ಹಾಕಿದರೆ ಅಷ್ಟ ನಿಧಿ, ನವನಿಧಿ ಪ್ರಾಪ್ತಿಯಾಗುತ್ತದೆ.

ಈಶಾನ್ಯದಿಕ್ಕಿನಲ್ಲಿ ಮಹಾಲಕ್ಷ್ಮಿ ದೇವಿಯ ಪೂಜೆ ಮಾಡಿ ಕೊಬ್ಬರಿ ಎಣ್ಣೆ ದೀಪವನ್ನು ಹಚ್ಚಿ, 48 ದಿವಸಗಳ ಮಂಡಲ ಪೂಜೆಯನ್ನು ಯಾರು ಮಾಡುತ್ತಾರೋ ಅವರಿಗೆ ಬರಬೇಕಾಗಿದ್ದ ಸಾಲದ ಬಾಕಿ ಇರುವುದು, ಮತ್ತು ಶುಭ ಕಾರ್ಯಗಳು ಜರುಗುತ್ತವೆ.

ಪ್ರತಿದಿವಸ ಮಹಾಲಕ್ಷ್ಮಿ ದೇವಿಗೆ ಕೊಬ್ಬರಿ ಎಣ್ಣೆ ದೀಪವನ್ನು ಹಚ್ಚಿ ಕೊಬ್ಬರಿ ಸಕ್ಕರೆ ನೈವೇದ್ಯ ಮಾಡುತ್ತಾರೆ ಶುಭ ಕಾರ್ಯ ಯಾವುದೇ ತೊಂದರೆಗಳಿಲ್ಲದೆ ನೆರವೇರುತ್ತವೆ.

ಬಲಮುರಿ ಗಣೇಶ ನಿಗೆ ವಿಧಿ ವಿಧಾನಗಳಿಂದ ಪೂಜೆ ಮಾಡಿ ಬೆಲ್ಲವನ್ನು ನೈವೇದ್ಯ ಅರ್ಪಿಸಿ ತನ್ನ ಪ್ರಿಯತಮನ ಜೊತೆಯಲ್ಲಿ ವಿವಾಹ ನೆರವೇರಲಿ ಎಂದು ಕೇಳಿಕೊಂಡರೆ, ಕೊಬ್ಬರಿ ಎಣ್ಣೆ ದೀಪ ಹಚ್ಚಿ ರೇಷ್ಮೆ ವಸ್ತ್ರಗಳನ್ನು ಅಥವಾ ಹಣವನ್ನು ಮದುವೆಯಾಗುವ ಸ್ತ್ರೀ ಅಥವಾ ಪುರುಷರಾಗಲಿ ಗಣೇಶನಿಗೆ ಪ್ರಾರ್ಥಿಸಿ ಅಶ್ವತ ಮರ, ನಾಗರ ಕಲ್ಲು, ಮಾವಿನ ಮರಕ್ಕೆ ಕಟ್ಟಿದರೆ ಅವರ ಇಚ್ಛೆಯಂತೆ ವಿವಾಹ ಜರಗುತ್ತದೆ.

LEAVE A REPLY

Please enter your comment!
Please enter your name here