ಪ್ರತಿಯೊಂದು ಮನೆಯಲ್ಲೂ ಇಂದಿಗೂ ಮನೆಯ ಹೆಣ್ಣು ಮಕ್ಕಳು ಮುಟ್ಟಾದಾಗ ಮನೆಯ ಒಂದು ಮೂಲೆಗೆ ಕೂರಿಸಿ ಬಿಡುತ್ತಾರೆ, ಏನನ್ನು ಮುಟ್ಟಲು ಬಿಡುವುದಿಲ್ಲ, ಮನೆಯ ದೇವರ ಕೋಣೆ ಹೀಗಿರಲಿ ಅಡುಗೆ ಕೋಣೆಗೂ ಅವರನ್ನು ಸೇವಿಸುವುದಿಲ್ಲ, ಮುಟ್ಟಾದ ಹೆಣ್ಣು ಮಕ್ಕಳನ್ನು ಯಾವ ಕೆಲಸ ಮಾಡಲು ಬಿಡುವುದಿಲ್ಲ, ಎಲ್ಲರೂ ಬಳಸುವ ನೀರಿನ ಲೋಟ ತಟ್ಟೆಗಳನ್ನು ಸ ಬಳಸುವ ಹಾಗಿಲ್ಲ.
ಈ ರೀತಿಯ ಆಚರಣೆ ನಮ್ಮ ಧರ್ಮದಲ್ಲಿ ಇರುವುದು ಏಕೆ, ಮುಟ್ಟಾಗುವುದು ಅರ್ಥವೇನು, ಮುಟ್ಟಾಗುವುದು ದಾರಿದ್ರ್ಯ ಏಕೆ ಅವರಿಗೆ ಈ ರೀತಿ ನಡೆಸಿಕೊಳ್ಳುತ್ತಾರೆ, ಈ ರೀತಿಯ ಪ್ರಶ್ನೆಗಳು ನಿಮ್ಮಲ್ಲಿ ಕಾಡುತ್ತಿದ್ದರೆ, ಮುಟ್ಟಿನ ಬಗೆಗಿನ ಕೆಲವು ವಿಚಾರಗಳನ್ನು ಇಂದು ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ.
ಮುಟ್ಟು ಹೆಂಗಸರ ಸಹಜ ಕ್ರಿಯೆ, ಹೆಂಗಸಿನ ಒಳಗಿರುವ ದೇವರು ಆಕೆ ತಾಯಿಯಾಗಿ ಮಾತೃವಾತ್ಸಲ್ಯ ಹಂಚಲು ಅರ್ಹಲ್ ಎಂದು ತೋರಿಸುವ ಶುಭಲಕ್ಷಣ ಇದು, ಆಗ ಆಕೆ ದೈಹಿಕ ಯಾತನೆಯ ಜೊತೆ ಮನೆಗೆಲಸದ ದುಡಿತದಿಂದ ಇನ್ನಷ್ಟು ನರಳುವುದು ಬೇಡವೆಂದು, ಆ ದಿನಗಳಲ್ಲಿ ಅವಳನ್ನು ಮನೆಗೆಲಸದಿಂದ ದೂರದಲ್ಲಿ ಇರಿಸಿದರು.
ಕಾಲಕ್ರಮೇಣ ಈಗ ಉದ್ದೇಶ ಸಂಪೂರ್ಣವಾಗಿ ಅರಿಯದೆ, ಬೇರೆ ರೀತಿಯಲ್ಲಿ ನಡೆದುಕೊಂಡು ಬಂದಿದೆ, ಮೊದಲೆಲ್ಲ ಸ್ವಚ್ಛತೆ ಕಾರ್ಯ ಇಂದಿನಷ್ಟು ಆ ಯೋಜಿತವಾಗಿ ಇರುತ್ತಿರಲಿಲ್ಲ, ಸ್ನಾನಕ್ಕೆ ಆಗಲಿ ಅಥವಾ ಮನೆಯ ಶುಚಿಗಾಗಿ ಇಂದು ಇರುವ ಆಧುನಿಕತೆಯ ಸೌಲಭ್ಯಗಳು ಅಂದು ಇರಲಿಲ್ಲ, ಆದರೆ ಇಂದು ಸಂಪೂರ್ಣ ಸೌಲಭ್ಯಗಳಿದ್ದು, ಮುಟ್ಟಾದ ಹೆಣ್ಣು ಮಕ್ಕಳು ಮುಂಜಾನೆ ಸ್ನಾನ ಮಾಡುವ ಮುಖಾಂತರ ಶುಭ್ರತೆಯನ್ನು ಕಾಯ್ದುಕೊಂಡು, ಮನೆಯ ಉಳಿದವರ ಜೊತೆ ತಮ್ಮ ಆನಂದದ ಕ್ಷಣಗಳನ್ನು ಕಳೆಯಬಹುದಾಗಿದೆ.
ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಬರೆಯಿರಿ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.