ಬೇಸಿಗೆಯಲ್ಲಿ ಪ್ರತಿ ದಿನ ಒಂದು ಗ್ಲಾಸ್ ರಾಗಿ ಅಂಬಲಿ ಕುಡಿದರೆ ಸಿಗುವ ಲಾಭಗಳು..!

0
2531

ರಾಗಿ ಅಂಬಲಿ ಬಹಳ ಹಿಂದಿನಿಂದ ನಮ್ಮ ಹಿರಿಯರು ಬಳಸುವ ಅತಿಮುಖ್ಯ ಆಹಾರಗಳಲ್ಲಿ ಒಂದು, ಕೆಲವು ವರ್ಷಗಳ ಹಿಂದೆ ಹಳ್ಳಿಗಳಲ್ಲಿ ಮಾತ್ರ ಬಳಸುತ್ತಿದ್ದ ರಾಗಿ ಅಂಬಲಿ ಸದ್ಯ ಪಟ್ಟಣಗಳಲ್ಲೂ ತಿನ್ನಲು ಶುರು ಮಾಡಿದ್ದಾರೆ, ರಾಗಿ ಅದ್ಭುತವಾದ ಶಕ್ತಿಯನ್ನು ಹೊಂದಿರುವ ಬೆಳೆ, ಮನುಷ್ಯನ ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡಿ ದೇಹದ ಕೊಬ್ಬನ್ನು ಕರಗಿಸಲು ಪ್ರಮುಖವಾದ ಆಹಾರ, ಇಂದು ರಾಗಿ ಅಂಬಲಿ ಇಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದರ ಬಗ್ಗೆ ತಿಳಿಯೋಣ.

ರಾಕಿ ಅಂಬಲಿ ಎಲ್ಲಿ ಕ್ಯಾಲ್ಸಿಯಂ ಅಂಶಗಳು ಹೆಚ್ಚಾಗಿ ಇರುವುದರಿಂದ ಮಕ್ಕಳು ಹಾಗೂ ವಯಸ್ಸಾದವರು ಪ್ರತಿದಿನ ಕುಡಿಯುವುದರಿಂದ ಕೈಕಾಲುಗಳ ಮೂಳೆಗಳು ಗಟ್ಟಿಯಾಗಿ ಕಾಲುಗಳಿಗೆ ಬಲವನ್ನು ನೀಡುತ್ತದೆ.

ಕಡಿಮೆ ವಯಸ್ಸಿನಲ್ಲಿಯೇ ವಯಸ್ಸಾದಂತೆ ಕೆಲವರು ಕಾಣುತ್ತದೆ, ಅದಕ್ಕೆ ಮುಖ್ಯ ಕಾರಣ ದೇಹದಲ್ಲಿ ಆಂಟಿ ಆಕ್ಸಿಡೆಂಟ್ ಅಂಶವು ಕಡಿಮೆಯಾಗುವುದು, ರಾಗಿ ಅಂಬಲಿ ಪ್ರತಿನಿತ್ಯ ಸೇವಿಸುವುದರಿಂದ ಈ ಸಮಸ್ಯೆಯಿಂದ ದೂರವಾಗಬಹುದು.

ಮಧುಮೇಹ ಅಥವಾ ಸಕ್ಕರೆ ಕಾಯಿಲೆಯ ಸಮಸ್ಯೆ ಶೇಕಡಾವಾರು ಭಾರತದಲ್ಲಿ ಹೆಚ್ಚಾಗುತ್ತಲೇ ಇದೆ, ಈ ಸಮಸ್ಯೆ ಇದ್ದವರು ಪ್ರತಿದಿನ ರಾಗಿಯಿಂದ ಮಾಡಿದ ಅಂಬಲಿ ಅಥವ ಮುದ್ದೆಯನ್ನು ಸೇವಿಸುವುದರಿಂದ ರಕ್ತದಲ್ಲಿರುವ ಸಕ್ಕರೆ ಅಂಶ ನಿಯಂತ್ರಣಕ್ಕೆ ಬರುತ್ತದೆ.

ಮನುಷ್ಯನ ದೇಹದ ತೂಕ ವಯಸ್ಸಿಗೆ ತಕ್ಕಂತೆ ಏರುಪೇರುಗಳನ್ನು ಕಾಣುತ್ತವೆ, ಕಾರಣ ಸೇವಿಸುವ ಆಹಾರ ದಲ್ಲಿ ಇರುವ ಕೊಬ್ಬಿನಂಶ, ಪ್ರತಿದಿನ ರಾಗಿ ಅಂಬಲಿ ಕುಡಿಯುವುದರಿಂದ ಹೊಟ್ಟೆ ಹಸಿವು ಕಡಿಮೆಯಾಗುತ್ತದೆ ಹಾಗೂ ಅದರ ಜೊತೆ ದೇಹದ ತೂಕವು ಇಳಿಯುತ್ತದೆ.

ಈ ರೀತಿ ದೇಹದಲ್ಲಿ ಕೊಲೆಸ್ಟ್ರಾಲ್ ಕಡಿಮೆಯಾಗುವುದರಿಂದ ಬಿಪಿ ಸಮಸ್ಯೆ ದೂರವಾಗುತ್ತದೆ ಹಾಗೂ ದೇಹಕ್ಕೆ ಬೇಕಾದ ಜೀವಸತ್ವಗಳನ್ನು ರಾಗಿ ಅಂಬಲಿ ಪೂರೈಸುತ್ತದೆ.

ಈ ಮಾಹಿತಿ ನಿಮಗೆ ಇಷ್ಟ ವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನ ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಎಲ್ಲ ಲೇಟೆಸ್ಟ್ ನ್ಯೂಸ್ ಹಾಗು ಆರೋಗ್ಯ ಮಾಹಿತಿಯನ್ನು ಮೊದಲು ಓದಲು ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ.

LEAVE A REPLY

Please enter your comment!
Please enter your name here