ತಾಯ್ತನ ಅನ್ನುವುದು ಹೆಣ್ಣಿನ ಜೀವನದ ಪರಿಪೂರ್ಣ ಘಟ್ಟ.ಪ್ರತಿಯೊಬ್ಬ ಮುದುವೆಯಾದ ಹೆಣ್ಣೂ ತಾನು ತಾಯಿಯಾಗಬೇಕು, ಮಡಿಲಲ್ಲಿ ಮಗುವನ್ನು ಆಡಿಸಬೇಕು ಎಂದು ಕನಸು ಕಾಣುತ್ತಾಳೆ.ಆದರೆ ವಿಧಿ ಆಟ ಬೇರೇ ಇರುತ್ತದೆ.ಕೆಲವರಿಗೆ ಮಕ್ಕಳು ಆಗಿ ಕೊನೆಯ ತನಕ ಜೊತೆಯಲ್ಲಿದ್ದರೆ ಇನ್ನೂ ಕೆಲವರಿಗೆ ಹುಟ್ಟಿದ ಕೂಡಲೇ ಮಗು ಸಾಯುವ ದುರಂತ ನಡೆಯುತ್ತದೆ.
ಇಂತಹ ಕಠೋರ ಗಳಿಗೆಯಲ್ಲಿ ಹೆಣ್ಣಿನ ರೋದನೆ ಹೇಳತೀರದು.ಅದರಲ್ಲೂ ತನ್ನ ಮಗು ಸಾಯುವುದು ಮೊದಲೇ ಗೊತ್ತಿದ್ದರಂತೂ ಆಕೆಯ ಪರಿಸ್ಥಿತಿ ಹೇಗಿರಬಹುದು ಯೋಚಿಸಿ.ಆಕೆ ಆಗ ಯಾವ ನಿರ್ಧಾರ ತೆಗೆದುಕೊಳ್ಳಬಹುದು? ತನ್ನ ಗಂಡನ ದುಃಖವನ್ನು ಹೇಗೆ ಕಡಿಮೆ ಮಾಡಬಲ್ಲಳು ?
ತಾಯಿಯೊಬ್ಬಳು ಹುಟ್ಟಿದ ಮಗು ಕೆಲವೆ ಗಂಟೆಗಳಲ್ಲಿ ಸತ್ತಾಗ ಸುಮಾರು 15 ಲೀಟರ್ ಎದೆ ಹಾಲನ್ನು 65 ದಿನಗಳಲ್ಲಿ ದಾನ ಮಾಡಿದ್ದಾಳೆ.ಇವರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು ತಾಯಿ ಪ್ರೀತಿಗೆ ಎಲ್ಲೆ ಎಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ವಾಸವಾಗಿರುವ ಸಿಯೆರಾ ಸ್ಟ್ರಾಂಗ್’ಫೆಲ್ಡ್ ಎರಡನೇ ಬಾರಿಗೆ ಪ್ರೆಗ್ನೆಸಿ ಆಗಿದ್ದು ಡಾಕ್ಟರ್ ಸ್ಕಾನಿಂಗ್ ಮಾಡಿ ನೋಡಿದಾಗ ಮಗು ಅಪರೂಪದ ಕಾಯಿಲೆಗೆ ತುತ್ತಾಗಿರುವುದು ಗೊತ್ತಾಗುತ್ತದೆ. ಮಗು ಟ್ರೈಸೋಮಿ 18 ಎಂಬ ಕಾಯಿಲೆಯಿಂದ ಬಳಲುತ್ತಿತ್ತು.ಇದು ಪ್ರತಿ ಎರಡು2500 ಸಾವಿರ ಮಕ್ಕಳಲ್ಲಿ ಒಬ್ಬರಿಗೆ ಬರುವಂತಹದ್ದು.ಈ ಕಾಯಿಲೆ ಇರುವ ಮಗು ಹುಟ್ಟಿದ ಗಂಟೆಗಳಲ್ಲಿ ಅಥವಾ ಒಂದೆರಡು ದಿನಗಳಲ್ಲಿ ಸಾಯುವುದು ಖಂಡಿತ.ಮಗುವಿನ ದೇಹ ಬೆಳವಣಿಗೆ ಆಗುವುದಿಲ್ಲ. ಮೆದುಳು ನ್ಯೂನತೆ ಹೊಂದಿರುತ್ತದೆ. ಈ ವಿಷಯ ತಿಳಿದ ಸಿಯೇರಾ ಮತ್ತು ಆಕೆಯ ಗಂಡ ಲೀ ಬಹಳ ಚಿಂತಾಕ್ರಾಂತಾರಾಗುತ್ತಾರೆ.ಕೊನೆಗೆ ಒಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಸಿಯೇರಾ ಹುಟ್ಟುವ ಮಗುವಿನ ಜೊತೆ ಆದಷ್ಟು ಹೆಚ್ಚು ಹೊತ್ತು ಇರಬೇಕು.ನಂತರ ನನ್ನ ಎದೆ ಹಾಲನ್ನು ಇತರ ಮಕ್ಕಳಿಗೆ ನೀಡಬೇಕು ಎಂದು ತೀರ್ಮಾನಿಸುತ್ತಾಳೆ.
ಕಡೆಗೆ ಒಂದು ದಿನ ಮಗು ಜನಿಸುತ್ತೆ.ಎರಡು ಗಂಟೆ ಮಗುವನ್ನು ತಬ್ಬಿಕೊಂಡಿದ್ದ ಸಿಯೆರಾಳ ದುಃಖ ಹೇಳತೀರದು.ನಂತರ ತನ್ನ ಎದೆ ಹಾಲನ್ನು ಮಿಲ್ಕ್ ಬ್ಯಾಂಕಿಗೆ ದಾನ ಮಾಡಿದಳು.ಇದರಿಂದ ತಬ್ಬಲಿ ಮಕ್ಕಳಿಗೆ ಹಾಲು ದೊರಕಲಿ ಎಂದು ಸಮಾಧಾನ ಹೊಂದಿದ್ದಾಳೆ.ಇತ್ತ ಲೀ ಹೆಂಡತಿಯ ಕಾರ್ಯಕ್ಕೆ ಸಾತ್ ನೀಡಿದ್ದು ಅವಳ ನಿಷ್ಕಲ್ಮಶ ತಾಯಿ ಪ್ರೀತಿ ಕಂಡು ಕಣ್ಣೀರಾಗಿದ್ದಾನೆ.ಅವರಿಬ್ಬರೂ ತಮ್ಮ ಮೊದಲ ಮಗುವನ್ನು ಬಹಳ ಎಚ್ಚರಿಕೆಯಿಂದ ಹಾಗೂ ಮುದ್ದಿನಿಂದ ಸಾಕುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.