ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮೊನ್ನೆಯಷ್ಟೇ ಮದುವೆಯಾಗಿದ್ದು ವಧು ವರರಿಗೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಹಾರೈಸಿ ಶುಭ ಕೋರಿದ್ದಾರೆ. ಧ್ರುವ ಸರ್ಜಾರ ಹೆಂಡತಿ ಪ್ರೇರಣಾ ಅವರ ಬಾಲ್ಯದ ಗೆಳತಿಯಾಗಿದ್ದು , ಅವರ ತಂದೆ ದೊಡ್ಡ ಬಿಜಿನೆಸ್ ಮ್ಯಾನ್ ಆಗಿದ್ದಾರೆ. ಪ್ರೇರಣಾ ತಂದೆ ತಮ್ಮ ಸ್ಟಾರ್ ಅಳಿಯನಿಗೆ ದೊಡ್ಡ ಮೊತ್ತದ ಪ್ರಾಪರ್ಟಿಯನ್ನು ನೀಡಲು ಮುಂದಾಗಿದ್ದರು. ಆದರೆ ಧ್ರುವ ನಿಮ್ಮ ಮಗಳೇ ನನಗೆ ಕೋಟಿಗೆ ಸಮ. ಆದುದರಿಂದ ನನಗೆ ಯಾವ ಆಸ್ತಿಯೂ ಬೇಡ ಎಂದು ಸಿನಿ ಸ್ಟೈಲಿನಲ್ಲಿ ಡೈಲಾಗ್ ಹೊಡೆದು ನಿರಾಕರಿಸಿದರು.
ಈಗ ಧ್ರುವ ಸರ್ಜಾ ತನ್ನ ಮುಂದಿನ ಮಡದಿ ಪ್ರೇರಣಾರಿಗಾಗಿ ಬಹು ದೊಡ್ಡ ಬೆಲೆಬಾಳುವ ಮನೆಯನ್ನು ಕೊಂಡಿದ್ದಾರೆ. ಹಾರೋಹಳ್ಳಿ ಸಮೀಪದಲ್ಲಿ ಇರುವ ವಿಶಾಲವಾದ ಜಾಗದಲ್ಲಿ ಕಟ್ಟಿರುವ ಮನೆಯನ್ನು ಖರೀದಿಸಿದ್ದಾರೆ. ಮನೆಯು ಸುಮಾರು 5 ಎಕರೆಯಷ್ಟು ಜಮೀನಿನಲ್ಲಿ ನಿರ್ಮಾಣವಾಗಿದ್ದು ಸ್ವಿಮ್ಮಿಂಗ್ ಪೂಲ್ ಸಮೇತ ಎಲ್ಲಾ ವ್ಯವಸ್ಥೆಯನ್ನು ಹೊಂದಿದೆ .
ಈ ಮನೆಯ ಗೃಹ ಪ್ರವೇಶ ಸಿಂಪಲ್ಲಾಗಿ ನಡೆದಿದ್ದು ಇಂದು ಸತ್ಯ ನಾರಾಯಣ ಪೂಜೆ ನಡೆದಿದೆ. ಧ್ರುವ ಸರ್ಜಾ ಮತ್ತು ಪ್ರೇರಣಾರ ಮದುವೆಯು 24 ರಂದು ಜೆಪಿ ನಗರದ ಬೃಂದಾವನ ಸಂಸ್ಕೃತಿ ಹಾಲಿನಲ್ಲಿ ಅದ್ದೂರಿಯಾಗಿ ನಡೆದಿತ್ತು. ಅದ್ದೂರಿ ಹುಡುಗನ ಮದುವೆಗೆ ಗಣ್ಯಾತಿಗಣ್ಯರು ಆಗಮಿಸಿ ಹರಸಿದರು.
ಧ್ರುವ ಸರ್ಜಾ ಕನ್ನಡದ ಖ್ಯಾತ ನಟ ಅರ್ಜುನ್ ಸರ್ಜಾರ ಅಳಿಯನಾಗಿದ್ದು ಅವರಂತೆಯೇ ಸ್ಟಂಟ್, ಡಾನ್ಸ್’ನಲ್ಲಿ ಮಿಂಚುತ್ತಿದ್ದಾರೆ. ಮೊದಲು ಅದ್ದೂರಿ ಎಂಬ ಚಿತ್ರದಲ್ಲಿ ನಟಿಸಿದರು. ಅದರಲ್ಲಿ ನಾಯಕಿಯಾಗಿ ರಾಕಿಂಗ್ ಸ್ಟಾರ್ ಯಶ್’ರ ಹೆಂಡತಿ ರಾಧಿಕಾ ಪಂಡಿತ್ ನಾಯಕಿಯಾಗಿ ನಟಿಸಿದ್ದಾರೆ. ಎ ಪಿ ಅರ್ಜುನ್ ಕತೆ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದರು. ಕತೆ ಹೊಸತನದಿಂದ ಕೂಡಿದ್ದು ಹಾಡುಗಳು ಹಿಟ್ ಆಗಿದ್ದವು. ಚಿತ್ರ ನೂರು ದಿನದ ಪ್ರದರ್ಶನ ಕಂಡಿತು. ನಂತರ ಎರಡನೇ ಚಿತ್ರ ಬಹದ್ದೂರ್ ಮಾಡಿದರು. ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಇದೂ ಕೂಡ ಯಶಸ್ಸು ಗಳಿಸಿದ್ದು ನಂತರ ಮೂರನೇ ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶನದಲ್ಲೇ ಮೂಡಿತು. ಇದಕ್ಕೆ ಭರ್ಜರಿ ಎಂದು ಹೆಸರಿಟ್ಟರು. ಇದೂ ಕೂಡ ಯಶಸ್ವಿಯಾಗಿ ಪ್ರದರ್ಶನ ಕಂಡು ಧ್ರುವ ಸರ್ಜಾ ಹ್ಯಾಟ್ರಿಕ್ ಹಿಟ್ ಕೊಟ್ಟರು. ಈಗ ಪೊಗರು ತೆರೆಗೆ ಬರಲಿದ್ದು ಅದರ ಮೇಲೆ ಭಾರೀ ನಿರೀಕ್ಷೆ ಇದೆ.