ಎಲ್ಲಾ ಕಾಲದಲ್ಲೂ ನೆಗಡಿ ಇದ್ದದ್ದೆ ಈ ರೀತಿ ನೆಗಡಿ ಆಗಿ ನಿಮಗೆ ಹಿಂಸೆ ಆಗುತ್ತಿದ್ದರೆ ಸ್ವಲ್ಪ ಶುಂಠಿ ರಸವನ್ನು ಸ್ವಲ್ಪ ಬೆಲ್ಲದಲ್ಲಿ ನಿತ್ಯ ಎರಡು ಹೊತ್ತು ತಿನ್ನುವುದರಿಂದ ನೆಗಡಿ ಕೆಮ್ಮು ನಿವಾರಣೆಯಾಗುತ್ತದೆ.
ನಿತ್ಯ ಎರಡು ವೇಳೆ ಒಂದೆರಡು ದಿನ ಸ್ವಲ್ಪ ಬೆಲ್ಲವನ್ನು ಸ್ವಲ್ಪ ಮೊಸರಿನಲ್ಲಿ ಕಲಸಿ ಅದರಿಂದ ಸ್ವಲ್ಪ ಮೆಣಸಿನ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ನೆಗಡಿ ಮೂಗಿನಿಂದ ನೀರು ಸುರಿಯುವುದು ಸಿಂಬಳ ಸುರಿವುದು ನಿಲ್ಲುತ್ತದೆ.
ತೀವ್ರ ನೆಗಡಿಯಾದರೆ ಅರಿಶಿಣ ಒಂದುವರೆ ಗ್ರಾಂ ಅತಿಮಧುರ ಒಂದುವರೆ ಗ್ರಾಂ ಮೆಣಸಿನ ಕಾಳು ಒಂದುವರೆ ಗ್ರಾಂ ಗೋಧಿಯ ತೌಡು ಒಂದುವರೆ ಗ್ರಾಂ ಬತಾಸು ಅಥವಾ ಕಲ್ಲು ಸಕ್ಕರೆ 12 ಗ್ರಾಂ ಇವುಗಳನ್ನೆಲ್ಲ ಕುಟ್ಟಿ 125 ಮಿಲಿ ಲೀಟರ್ ನೀರಿನಲ್ಲಿ ಹಾಕಿ ಕಾಯಿಸಿ ಪ್ರತಿದಿನ ಪ್ರತಿ ಎರಡು ವಾರ ಕುಡಿಯಬೇಕು.
ಐದರಿಂದ ಹತ್ತು ತೊಟ್ಟು ನಿಂಬೆರಸ ಅದರ ಎರಡರಷ್ಟು ಜೇನು 2-3 ಚಿಟಕಿ ಬಳೆಗಾರದ ಅರಳು ಈ ಮೂರನ್ನು ಸೇರಿಸಿ ನಿತ್ಯವೂ 2.10 ಸೇವಿಸುವುದರಿಂದ ನೆಗಡಿ ಪರಿಹಾರವಾಗುತ್ತದೆ ಈ ಕ್ರಮವನ್ನು ಕನಿಷ್ಠ ನಾಲ್ಕೈದು ದಿನ ಅನುಸರಿಸಿ.
ಮೂಗಿನಲ್ಲಿ ಸದಾ ನೀರು ಸುರಿಯುತ್ತಿದ್ದರೆ ಹೋಮದ ಕಾಡು ಹರಿಶಿನ ಇವುಗಳನ್ನು ಕೊಟ್ಟಿ ವಸ್ತ್ರಗಳಿಂದ ಚೂರ್ಣ ಮಾಡಿ ಬೇವಿನ ಎಲೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ಕಾಯಿಸಿ ಸೋಸಿ ಮೂಗಿಗೆ ಮೂರರಿಂದ ನಾಲ್ಕು ಹನಿ ಹಾಕುತ್ತಿರಬೇಕು.
ಉದ್ದಿನ ಬೇಳೆಯ ಸಾರನ್ನು ಬಿಸಿ-ಬಿಸಿ ಇರುವಾಗಲೇ ದಿನಕ್ಕೆ ನಾಲ್ಕೈದು ಬಾರಿ ಕುಡಿದರೆ ಶೀತ ನೆಗಡಿ ಪರಿಹಾರ ಅರಿಶಿನದ ಪುಡಿಯನ್ನು ಕೆಂಡದ ಮೇಲೆ ಹಾಕಿ ಹೋಗೆ ತೆಗೆದುಕೊಂಡರೂ ನೆಗಡಿ ನಿವಾರಣೆಯಾಗುತ್ತದೆ ಹೀಗೆ ದಿನದಲ್ಲಿ ನಾಲ್ಕೈದು ಬಾರಿ ಮಾಡಬೇಕು.
12 ಗ್ರಾಂ ಬೆಲ್ಲವನ್ನು 48 ಗ್ರಾಂ ಮೊಸರಿನಲ್ಲಿ ಕಲಸಿ ಅದಕ್ಕೆ 3 ಗ್ರಂ ಕರಿ ಮೆಣಸು ಕಾಳು ಪುಡಿಯನ್ನು ಸೇರಿಸಿ ನಿತ್ಯವೂ 2 ರಿಂದ 3ದಿನ ಸೇವಿಸುವುದರಿಂದ ನೆಗಡಿ ಮತ್ತು ಮೂಗಿನಿಂದ ನೀರು ಸುರಿಯುವುದು ನಿಲ್ಲುತ್ತದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.