ದೇಹದ ಉಷ್ಣಾಂಶ ಹೆಚ್ಚಾದರೆ ನಿಮಗೆ ಅಲ್ಸ ಸಮಸ್ಯೆಯ ಬಾಗಿಲು ತೆರೆದಂತೆ ಅಷ್ಟೇ ಅಲ್ಲದೆ ದೇಹದ ಉಷ್ಣಾಂಶವನ್ನು ಸರಿಯಾದ ರೀತಿಯಲ್ಲಿ ಕಳೆದುಕೊಳ್ಳದೆ ಇದ್ದರೆ ಇನ್ನು ಹಲವಾರು ಸಮಸ್ಯೆಗಳು ಇರುತ್ತವೆ ಆದ್ದರಿಂದ ಅದಕ್ಕೆ ಇಲ್ಲಿದೆ ನೋಡಿ ಸುಲಭ ಹಾಗೂ ಉತ್ತಮ ಪರಿಹಾರಗಳು.
ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಬೂದುಕುಂಬಳಕಾಯಿ ರಸವನ್ನು ಮಾಡಿಕೊಂಡು ಅದರಲ್ಲಿ ಸಮ ಪ್ರಮಾಣದ ನೀರು ಬೆರೆಸಿ ಸೇವಿಸಿದರೆ ಅಲ್ಸರ್ ನಂತಹ ಸಮಸ್ಯೆ ಗುಣವಾಗುತ್ತದೆ ಹಾಗೂ ಎಲೆಕೋಸಿನ ಜ್ಯೂಸ್ ಅನ್ನು ಪ್ರತಿದಿನ ನಿಯಮಿತವಾಗಿ ಸೇವಿಸುವುದರಿಂದ ಕೂಡ ಅಲ್ಸರ್ ನಿವಾರಣೆಯಾಗುತ್ತದೆ.
ಅಲ್ಸರ್ ನಿವಾರಣೆಗೆ ಬಹುಮುಖ್ಯ ಬಾಳೆಕಾಯಿ ಮತ್ತು ಬಾಳೆಹಣ್ಣು, ಈ ಎರಡನ್ನು ಪ್ರತಿದಿನ ನಿಯಮಿತವಾಗಿ ಸೇವಿಸುವುದರಿಂದ ಅಲ್ಸರ್ ಸಮಸ್ಯೆಯಿಂದ ನೀವು ದೂರ ಇರಬಹುದು.
ನಮಗೆಲ್ಲರಿಗೂ ತಿಳಿದಂತೆ ಎಳನೀರು ದೇಹದ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ, ಹೊಟ್ಟೆ ಉರಿ ಹೊಟ್ಟೆ ನೋವಿನಂತಹ ಸಮಸ್ಯೆಗಳಿಗೂ ಇದು ರಾಮಬಾಣ, ಇಂತಹ ಎಳನೀರನ್ನು ಪ್ರತಿನಿತ್ಯ ಬೆಳಗ್ಗೆ ಅಥವಾ ಸಂಜೆ ಸೇವಿಸುವುದರಿಂದ ಅಲ್ಸರ್ ಕಡಿಮೆಯಾಗುತ್ತದೆ.
ನುಗ್ಗೆಕಾಯಿ ಯ ಎಲ್ಲೆಯನ್ನು ನಿರಿನಲ್ಲಿ ರುಬ್ಬಿ ಪೇಸ್ಟ್ ಮಾಡಿಕೊಂಡು ಅದಕ್ಕೆ ಮಜ್ಜಿಗೆಯನ್ನು ಬೆರೆಸಿ ಖಾಲಿ ಹೊಟ್ಟೆಗೆ ಸೇರಿಸಿದರೆ ಅಲ್ಸರ್ ಕಡಿಮೆಯಾಗುತ್ತದೆ, ಅಥವಾ ಖಾಲಿ ಹೊಟ್ಟೆಯಲ್ಲಿ ಆಲೋವೆರ ರಸಕ್ಕೆ ಬೆಚ್ಚಗಿರುವ ನೀರನ್ನು ಬೆರೆಸಿ ಕುಡಿಯಬಹುದು.
ಜೇಷ್ಠ ಮಧು ಕಷಾಯ ಇದನ್ನು ನೀರಲ್ಲಿ ತಯಾರಿಸಿ ಪ್ರತಿದಿನ ಊಟದ ಮುಂಚೆ ಮೂರು ಬಾರಿ ಕುಡಿಯುವುದರಿಂದ ಅಲ್ಸರ್ ಮಾಯ ವಾಗುತ್ತದೆ, ಅಷ್ಟೇ ಅಲ್ಲದೆ ಅಲ್ಸರ್ ನಿವಾರಣೆಗೆ ಮೆಂತ್ಯ ಬೀಜದ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಕುಡಿದರೆ ಉಪಶಮನ ನೀಡುತ್ತದೆ, ಅತಿ ಮುಖ್ಯವಾಗಿ ಮರ ಸೇಬನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಆ ನೀರನ್ನು ಕುಡಿಯುವುದರಿಂದ ಸಹ ನಿವಾರಣೆಯಾಗುತ್ತದೆ.