ವಿಜಯ್ ದೇವರಕೊಂಡ ಹೆಸರು ಯಾರಿಗೆ ಗೊತ್ತಿಲ್ಲ ? ಹೆಣ್ಣು ಮಕ್ಕಳ ಹೃದಯ ಕದ್ದಿರುವ ತೆಲುಗಿನ ಸುರದ್ರೂಪಿ ನಟ. ವಿಜಯ್ ದೇವರಕೊಂಡ ಸಾಮಾನ್ಯ ಮಧ್ಯಮ ವರ್ಗದಿಂದ ಬಂದಿರುವ ಇವರು ಈಗ ಹೈದರಾಬಾದ್’ನಲ್ಲಿ ಅತಿ ದೊಡ್ಡ ಮನೆಯನ್ನು ನಿರ್ಮಿಸಿದ್ದಾರೆ. ಆ ಮನೆಯ ಬೆಲೆ ಕೇಳಿದ್ರೆ ದಂಗಾಗ್ತೀರ!
ಇವರು 2011 ರ ನುವ್ವಿಲೆ ತೆಲುಗು ಚಿತ್ರದ ಮೂಲಕ ಬೆಳಕಿಗೆ ಬಂದರು. ಆದರೆ ಆ ಚಿತ್ರ ಅಷ್ಟಾಗಿ ಹೆಸರು ಮಾಡಲಿಲ್ಲ. ನಂತರ ಎವುಡೇ ಸುಬ್ರಮಣ್ಯಂ ಚಿತ್ರದಲ್ಲಿ ಸಪೋರ್ಟಿಂಗ್ ಕ್ಯಾರೆಕ್ಟರ್ ಮಾಡುತ್ತಾರೆ. ಜೀವನದಲ್ಲಿ ಗೆಲುವು ಬಂದರೆ ಅದು ಒಮ್ಮೆಲೆ ಬರುತ್ತೆ ಅಂತ ನಂಬಿರುವ ವಿಜಯ್ ಆ ಸಕ್ಸಸ್’ಗಾಗಿ ಕಾಯುತ್ತಲೇ ಇದ್ದರು. ನಂತರ ಪೆಳ್ಳಿ ಚೂಪುಲು ಚಿತ್ರ ಅವರಿಗೆ ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿತು. ಆ ಚಿತ್ರದ ಸಮಾಧಾನಕರ ಗೆಲುವು ಇವರಿಗೆ ಮಂದಹಾಸ ಮೂಡಿಸಿತು. ಈ ಮಧ್ಯೆ ಅವರು ತಮಿಳು ಚಿತ್ರಗಳಲ್ಲಿ ಅಭಿನಯಿಸಿ ಬಂದರು.
2017 ಅವರ ಜೀವನದ ಬಹು ದೊಡ್ಡ ತಿರುವಿನ ವರ್ಷ. ಅರ್ಜುನ್ ರೆಡ್ಡಿ ಕತೆಯನ್ನು ಒಪ್ಪಿದರೋ ಅವರ ಗೆಲುವು ನಿಶ್ವಿತವಾಗಿತ್ತು. ಚಿತ್ರದ ಪ್ರೆಶ್ನೆಸ್, ಸಂಗೀತ, ರೋಮಾಂಚಕ ದೃಶ್ಯಗಳಿಂದ ಇಡೀ ದಕ್ಷಿಣ ಭಾರತದ ಸಿನಿಮಾ ಮಂದಿಯೇ ಇವರತ್ತ ನೋಡತೋಡಗಿದರು. ಅರ್ಜುನ್ ರೆಡ್ಡಿ ಕ್ರೇಝ್ ಎಷ್ಟಿತ್ತೆಂದರೆ ಆ ಚಿತ್ರ ಹಿಂದಿ, ತಮಿಳಿನಲ್ಲಿ ರೀಮೇಕ್ ಆಯಿತು. ಹಿಂದಿಯಲ್ಲಿ ಶಾಹಿದ್ ಕಪೂರ್ ಮಾಡಿದರೆ ತಮಿಳಿನಲ್ಲಿ ವಿಕ್ರಂ ಮಗ ದ್ರುವ ಮಾಡಿದ. ಹಿಂದಿಯಲ್ಲಿ ಶಾಹಿದ್ ಬಹು ದೊಡ್ಡ ಬ್ರೇಕ್ ಕೊಟ್ಟ ಚಿತ್ರ ಇದು. ನಂತರ ಅವರು ಗೀತ ಗೋವಿಂದಂ ಚಿತ್ರದಲ್ಲಿ ಕನ್ನಡದ ನಟಿ ರಶ್ಮಿಕಾ ಜೊತೆ ಮಾಡಿದರು. ಇದು ನೂರು ಕೋಟಿ ಗಳಿಸಿತು. ರಶ್ಮಿಕಾ ಜೊತೆಯೇ ಡಿಯರ್ ಕಾಮ್ರೆಡ್ ಚಿತ್ರ ಮಾಡಿದರಾದರೂ ಆ ಚಿತ್ರ ಪ್ಲಾಪ್ ಆಯಿತು. ಆದರೂ ಇವರ ಕ್ರೇಜ್ ಏನೂ ಕಮ್ಮಿ ಆಗಿಲ್ಲ.
ಈಗ ತನ್ನ ತಂದೆ ತಾಯಿ ತಮ್ಮನ ಜೊತೆ ಹೊಸ ಮನೆಗೆ ಗೃಹ ಪ್ರವೇಶ ಮಾಡಿದ್ದಾರೆ. ವಿಶಾಲ ಬಂಗಲೆ, ಸ್ವಿಮ್ಮಿಂಗ್ ಪೂಲ್, ಅತಿಥಿಗಳಿಗೆಂದೇ ಪ್ರತ್ಯೇಕ ಹಾಲ್, ದೇವರ ಕೋಣೆ, ಮುಂದೆ ಗಾರ್ಡನ್ ಏರಿಯಾ ಹೀಗೆ ವಿಶೇಷವಾದ ಡಿಸೈನ್ ಮಾಡಿರುವ ಮನೆ ಅವರ ಪಾಲಾಗಿದೆ. ಮಧ್ಯಮ ವರ್ಗದಿಂದ ಬಂದು ಈ ರೀತಿ ಬೆಳೆದಿದ್ದು ಅವರ ಅದೃಷ್ಟದ ಜೊತೆ ಪರಿಶ್ರಮ ಕೂಡ ಇದೆ.ಇವರ ತಂದೆ ತಾಯಿ ಸರ್ಕಾರಿ ನೌಕರರಾಗಿದ್ದು ಇಂದಿಗೂ ಬಸ್ಸಿನಲ್ಲೇ ಪಯಣ ಮಾಡುತ್ತಿದ್ದಾರೆ.
ಅಮದ ಹಾಗೇ ಆ ಮನೆಯ ಬೆಲೆ ಎಷ್ಟು ಗೊತ್ತೇ ? ಬರೋಬ್ಬರಿ 15 ಕೋಟಿ ರೂಪಾಯಿ. ಆಂ! ಈ ಮನೆಗೆ ರಶ್ಮಿಕಾಳಿಗೆ ಆಹ್ವಾನ ಇತ್ತಿದ್ದರಾ ? ಅದರ ಬಗ್ಗೆ ಮಾಹಿತಿ ಇಲ್ಲ.