ದೇಹಕ್ಕೆ ನೀರು ಅಮೃತವಿದ್ದಂತೆ. ಮಾನವನ ದೇಹ ಶೇ 70 ರಷ್ಟು ನೀರನ್ನು ಒಳಗೊಂಡಿದೆ. ಇದು ದೇಹದ ಭಾಗಗಳನ್ನು ಹೈಡ್ರೇಡ್ ಮಾಡುತ್ತದೆ. ದಿನಕ್ಕೆ 6-7 ಗ್ಲಾಸ್ ನೀರು ಸೇವನೆ ಮಾಡುವುದು ಒಳ್ಳೆಯದು. ಈ ಹಿಂದೆ ಬಿಸಿ ನೀರು ಕುಡಿವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ ಎಂದು ನಾವು ಕೇಳಿದ್ದೇವೆ. ಆರೋಗ್ಯ ಎಲ್ಲರಿಗೂ ಇರಬೇಕು. ಆರೋಗ್ಯ ಚೆನ್ನಾಗಿರಲು ಆಹಾರ ಪದಾರ್ಥಗಳ ಸೇವನೆ ಎಷ್ಟು ಮುಖ್ಯವೋ, ನೀರು ಸೇವನೆಯೂ ಅಷ್ಟೇ ಮುಖ್ಯ. ನೀರು ಜೀವ ಸೆಲೆ.
ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಇದಕ್ಕೆ ಸದಾ ಮೊದಲ ಸ್ಥಾನ. ಆಹಾರವಿಲ್ಲದೆ ಕನಿಷ್ಠ 8 ದಿನವಾದರೂ ಬದುಕಿರಬಹುದು. ಆದರೆ ನೀರಿಲ್ಲದೆ 2 ದಿನ ಬದುಕುವುದೇ ಕಷ್ಟ. ನಿಮಗೆ ಗೊತ್ತೆ. ತಣ್ಣೀರಿನ ಸೇವನೆಗಿಂತ ಬಿಸಿನೀರಿನ ಸೇವನೆ ಆರೋಗ್ಯಕ್ಕೆ ಬಹಳ ಲಾಭಕರ. ನೀರು ದಿನದಲ್ಲಿ ಹೆಚ್ಚು ಹೆಚ್ಚು ಸೇವನೆ ಮಾಡಬಹುದು,ಇದು ಅತ್ಯಂತ ಉಪಯುಕ್ತಕರ. ಅದರಲ್ಲೂ ಬಿಸಿನೀರು. ಬಿಸಿನೀರು ಸೇವನೆಯಿಂದ ಅದೆಷ್ಟೋ ಉಪಯುಕ್ತ ಅಂಶಗಳಿವೆ. ಅವುಗಳನ್ನು ಈ ಕೆಳಕಂಡಂತೆ ಹೇಳಲಾಗಿದೆ.
ಬಿಸಿನೀರು ಸೇವನೆ ಮಾಡುವುದರಿಂದ ಏನಿಲ್ಲ ಉಪಯೋಗವಿದೆ ಎಂಬುದನ್ನು ತಿಳಿಸಿ ಕೊಡುತ್ತೇನೆ ಬನ್ನಿ. ಪ್ರತಿದಿನವೂ ಬಿಸಿನೀರನ್ನು ಸೇವನೆ ಮಾಡುವುದರಿಂದ ನಮಗೆ ಅನೇಕ ರೀತಿಯ ಲಾಭಗಳಿವೆ. ಅದರಲ್ಲೂ ಕೂಡ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆಗುತ್ತದೆ. ನಮಗೆ ಯಾವುದೇ ರೀತಿಯ ತೊಂದರೆಗಳು ಕೂಡ ಆಗುವುದಿಲ್ಲ. ವಿದ್ಯೆ ಇರುವ ಮನುಷ್ಯ ಮುಂದೆ ಬರುತ್ತಾನೋ ಏನೋ ಗೊತ್ತಿಲ್ಲ. ಆದರೆ ಬುದ್ಧಿ ಇರುವ ಮನುಷ್ಯ ಮುಂದೆ ಬಂದೇ ಬರುತ್ತಾನೆ.
ಬಿಸಿನೀರಿನಲ್ಲಿ ಸ್ಕ್ರಾಪಿಂಗ್ ಮಾಡುವ ಅಂಶ ಹೆಚ್ಚಾಗಿದೆ. ಸ್ಕ್ರಾಪಿಂಗ್ ಅಂದರೆ ಕೊಳೆಯನ್ನು ತೆಗೆಯುವುದು ಎಂದು ಅರ್ಥ. ಅದಕ್ಕಾಗಿ ಪ್ರತಿನಿತ್ಯ ಬಿಸಿನೀರನ್ನು ಸೇವನೆ ಮಾಡುವುದು. 1) ಮ’ಲಬದ್ಧತೆ ಸಮಸ್ಯೆ ನಿವಾರಣೆಗೆ ಅನುಕೂಲ : ಬಿಸಿನೀರಿನ ಸೇವನೆ ಮಾಡುವುದರಿಂದ ಮ’ಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಇದು ಅತ್ಯಂತ ಉಪಯುಕ್ತವಾಗಲಿದೆ. 2) ಜೀರ್ಣಕ್ರಿಯೆ ಸಮಸ್ಯೆ ಸರಾಗವಾಗುತ್ತದೆ : ಬಿಸಿನೀರು ಸೇವನೆ ಬಹಳ ಒಳ್ಳೆಯದು. ಜೀರ್ಣಕ್ರಿಯೆಯ ಸಮಸ್ಯೆಯನ್ನು ಎದುರಿಸುವವರು ಬಿಸಿನೀರನ್ನು ಹೆಚ್ಚು ಕುಡಿಯುವುದು ತುಂಬಾನೇ ಒಳ್ಳೆಯದು. ಬಿಸಿನೀರು ಅಷ್ಟು ಉಪಯುಕ್ತಕರವಾಗಿದೆ.
3) ಗಂಟಲುನೋ’ವು ಸಮಸ್ಯೆಗೂ ಪರಿಹಾರ : ಬಿಸಿನೀರಿನ ಸೇವನೆಯಿಂದ ಸಲೀಸಾಗಿ ನಾವು ಗಂಟಲುನೋವನ್ನು ನಿವಾರಿಸಿಕೊಳ್ಳಬಹುದು. ಬಿಸಿನೀರನ್ನ ಗಂಟಲಿಗೆ ಬಿಟ್ಟುಕೊಂಡು ಗಾರ್-ಗಲ್ ಮಾಡಬೇಕು. ಇದರಿಂದ ನೋ’ವು ಬೇಗ ಕಡಿಮೆಯಾಗುತ್ತದೆ. 4) ದೇಹದ ತೂಕ ಕಡಿಮೆ ಆಗಲೂ ಸಹಾಯಕಾರಿ : ಬಿಸಿನೀರಿನ ಸೇವನೆಯಿಂದ ಆರೋಗ್ಯ ಜೀರ್ಣಾಂಗ ಕ್ರಿಯೆ ಉತ್ತಮವಾಗಿ ನಡೆಯುತ್ತದೆ. ಬೊಜ್ಜಿನ ಅಂಶ ಹೊರಹಾಕುತ್ತದೆ. ಇದು ತೂಕ ಇಳಿಸಲು ಅನುಕೂಲವಾಗುತ್ತದೆ.
5) ರ’ಕ್ತ ಕಣಗಳ ಸೃಷ್ಟಿಗೆ ಅನುಕೂಲ : ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನಿಮ್ಮ ದೇಹವು ಕೆಂ’ಪುರ’ಕ್ತದ ಕಣಗಳನ್ನು ವೇಗವಾಗಿ ಉತ್ಪತ್ತಿ ಮಾಡಲು ನೆರವಾಗುತ್ತದೆ. ಇದು ಆಮ್ಲಯುಕ್ತ ರ’ಕ್ತವಾಗಿರುವ ಕಾರಣ ನಿಮ್ಮ ಹೆಚ್ಚು ಕ್ರಿಯಾಶೀಲವಾಗಿರುವಂತೆ ಮಾಡುತ್ತದೆ. ಒಟ್ಟಾರೆ ಬಿಸಿನೀರಿನ ಸೇವನೆಯಿಂದ ನಿಮ್ಮ ಮ’ಲಬದ್ಧತೆ ಸಮಸ್ಯೆ ಮತ್ತು ಜೀ’ರ್ಣಕ್ರಿಯೆ ಸಮಸ್ಯೆ ಸರಾಗವಾಗುತ್ತದೆ ಹಾಗೂ ಕ’ಫ, ಕೆ’ಮ್ಮು, ಗಂಟಲು ನೋ’ವು ಸಮಸ್ಯೆ ಕೂಡ ಅತಿ ಬೇಗನೆ ನಿವಾರಣೆಯಾಗುತ್ತದೆ.
ನೀರು ಕುಡಿಯುವುದರಿಂದ ಮತ್ತು ನಿಮ್ಮ ಕರುಳನ್ನು ಸ್ವಚ್ಛಗೊಳಿಸುವುದರಿಂದ ದೇಹದ ಆಯಾಸ ಕಡಿಮೆಯಾಗುತ್ತದೆ. ಬೆಳಗ್ಗೆ ಬೇಗನೆ ಹಸಿವಾಗುತ್ತದೆ ಮತ್ತು ಇದರಿಂದ ಸರಿಯಾಗಿ ಉಪಹಾರ ಮಾಡಬಹುದು. ಅಷ್ಟೇ ಅಲ್ಲದೆ ಮಾಂ’ಸಾಹಾರ ಊಟವನ್ನು ಮಾಡಿದ ನಂತರ ಬಿಸಿನೀರನ್ನು ಕುಡಿದರೆ ಜೀರ್ಣಕ್ರಿಯೆಗೆ ತುಂಬಾ ಚೆನ್ನಾಗಿ ಆಗುತ್ತದೆ ಬೇಕಾದರೆ ಮಾಡಿ ನೋಡಿ. ಆದರೆ ಊಟಕ್ಕೂ ಮೊದಲು ಬಿಸಿನೀರನ್ನು ಕುಡಿದರೆ ಊಟ ಅರ್ಧಂಬರ್ಧ ಸೇರುತ್ತದೆ. ಹಾಗಾಗಿ ಆದಷ್ಟು ಊಟಕ್ಕೆ ಮುಂಚೆ ಸ್ವಲ್ಪವೇ ಬಿಸಿ ನೀರನ್ನು ಕುಡಿಯಿರಿ. ಈ ಮಾಹಿತಿ ಇಷ್ಟವಾಗಿದ್ದರೆ ದಯವಿಟ್ಟು ಶೇರ್ ಮಾಡಿ. ಧನ್ಯವಾದಗಳು.