ಈ ಬಾರಿಯ ಕನ್ನಡ ಬಿಗ್ಗ್ ಬಾಸ್ ವಿಜೇತರಾದ ಶೈನ್ ಶೆಟ್ಟಿ ಒಂದು ಉತ್ತಮ ಕೆಲಸ ಮಾಡುತ್ತಿದ್ದಾರೆ, ನಟನೆಯಲ್ಲಿ ಹೆಚ್ಚಾಗಿ ಆಸಕ್ತಿ ಇದ್ದ ಇವರು ನಟನ ಅವಕಾಶ ಸಿಗದಿದ್ದಾಗ ಸುಮ್ಮನೆ ಕೂರದೆ ಬನಶಂಕರಿ ಬಳಿ ರಸ್ತೆಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದದ್ದು ನಮಗೆಲ್ಲರಿಗೂ ಗೊತ್ತಿರುವ ವಿಷಯ, ಇಂದು ಕೊರೊನ ದಿಂದಾಗಿ ಅನೇಕ ಬೀದಿ ಬದಿಯ ವ್ಯಾಪಾರಿಗಳು ಹಾಗು ದಿನ ಕೂಲಿಯವರು ಈ ಸಮಯದಲ್ಲಿ ಪಡುವ ಕಷ್ಟ ಶೈನ್ ಶೆಟ್ಟಿ ಅವರಿಗೆ ಮನದಟ್ಟಾಗಿದೆ, ಇದೇ ಕಾರಣಕ್ಕಾಗಿ ತಮ್ಮ ಬಳಿ ಇರುವ ಹಣವನ್ನು ಸದುಪಯೋಗ ಪಡಿಸಲು ಬೀದಿ ವ್ಯಾಪಾರಿಗಳ ಒಂದು ತಿಂಗಳ ಮನೆ ಬಾಡಿಗೆ ಹಾಗೂ ಒಂದು ತಿಂಗಳ ರೇಶನ್ ನೀಡಲು ಮುಂದಾಗಿದ್ದಾರೆ.
ಈ ಬಗ್ಗೆ ಖುದ್ದು ಶೈನ್ ಶೆಟ್ಟಿ ಅವರೇ ಮಾತನಾಡಿದ್ದು, ಆ ವಿಡಿಯೋ ಕೆಳಗೆ ನೀಡಲಾಗಿದೆ, ಅವರ ಮಾತುಗಳನ್ನು ಒಮ್ಮೆ ನೀವು ಕೂಡ ಕೇಳಿ ಹಾಗೂ ಶೈನ್ ಶೆಟ್ಟಿ ಅವರ ಈ ಕಾರ್ಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ, ಹೆಚ್ಚಿನ ಜನರಲ್ಲಿ ಈ ವಿಷಯವನ್ನು ಹಂಚಿಕೊಂಡು ಉತ್ತಮ ಸಮಾಜ ನಿರ್ಮಾಣವಾಗಲು ಸಹಕರಿಸಿ.