ಮದಕರಿ ವಿವಾದದಲ್ಲಿ ದರ್ಶನ್ ಬಗ್ಗೆ ಹೇಳಿಕೆ ಕೊಟ್ಟ ಸುದೀಪ್

0
3400

ಮದಕರಿ ನಾಯಕ ಚಿತ್ರ ಮೊನ್ನೆ ಅದ್ದೂರಿಯಾಗಿ ಸೆಟ್ಟೇರಿದೆ. ರಾಜ ವೀರ ಮದಕರಿ ನಾಯಕ ಎಂದು ಹೆಸರು ಇಡಲಾಗಿದೆ. ಈ ಮೊದಲು ಈ ಕತೆಯನ್ನು ಯಾರು ಮಾಡುತ್ತಾರೆ ಎಂದು ಸ್ವಲ್ಪ ಗೊಂದಲ ಮತ್ತು ವಿವಾದ ಉಂಟಾಯಿತು. ದರ್ಶನ್ ಮಾಡಬೇಕು ಮತ್ತು ಸುದೀಪ್ ಮಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಪರಸ್ಪರ ಜಗಳ ಮಾಡುತ್ತಿದ್ದರು. ಸುದೀಪ್ ಪರ ಕೆಲವು ಸ್ವಾಮೀಜಿಗಳೂ ಸಪೋರ್ಟ್ ಮಾಡಿದ್ದನ್ನ ನಾವು ನೋಡಿದ್ದೇವೆ. ಆದರೆ ಸುದೀಪ್ ನಯವಾಗಿಯೇ ಈ ಕತೆಯನ್ನು ನಿರಾಕರಿಸಿದರು.

ಈಗ ಈ ಚಿತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಾಲಾಗಿದೆ. ಸಂಗೊಳ್ಳಿ ರಾಯಣ್ಣ, ಕುರುಕ್ಷೇತ್ರದಂತಹ ಐತಿಹಾಸಿಕ ಮತ್ತು ಪೌರಾಣಿಕ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ದರ್ಶನ್ ಈ ಮದಕರಿ ನಾಯಕ ನನಗೇ ಸಿಗಬೇಕು ಎಂದು ಆಸೆ ಪಟ್ಟಿದ್ದರು. ಈಗ ರಾಜ ವೀರಮದಕರಿ ನಾಯಕ ಚಿತ್ರದ ಮುಹೂರ್ತ ನಡೆದು ಡಿಸೆಂಬರ್ 6 ರಂದು ಸೆಟ್ಟೇರಿದೆ.

ಈ ಚಿತ್ರಕ್ಕೆ ಜನಪ್ರಿಯ ಕಾದಂಬರಿಗಾರ ಬಿಎಲ್ ವೇಣು ಕತೆ ಇದೆ. ನಿರ್ಮಾಪಕರು ರಾಕ್ ಲೈನ್ ವೆಂಕಟೇಶ್ , ನಿರ್ದೇಶನ ರಾಜೇಂದ್ರ ಸಿಂಗ್ ಪ್ರಸಾದ್ ರವರದ್ದು. ಸಾಹಿತ್ಯ ಮತ್ತು ಸಂಗೀತದ ಜವಾಬ್ದಾರಿ ಹಂಸಲೇಖ ಹೊತ್ತುಕೊಂಡಿದ್ದಾರೆ.

ಟಿವಿ ಸಂದರ್ಶನದಲ್ಲಿ ಸುದೀಪ್’ಗೆ ಈ ಚಿತ್ರ ಕೈ ಬಿಟ್ಟಿರುವುದರ ಬಗ್ಗೆ ಕೇಳಿದ್ದಕ್ಕೆ ಅವರು ಹೇಳಿದ್ದಿಷ್ಟು. ನನ್ನ ಸ್ವಾರ್ಥಕ್ಕೆ ಒಳ್ಳೆಯ ಕತೆ ಬಲಿಯಾಗುವುದು ನನಗೆ ಇಷ್ಟವಿಲ್ಲ.ನಾನು ಕತೆ ಬಿಟ್ಟು ಕೊಟ್ಟಿದ್ದು ಕೇವಲ ರಾಕ್ ಲೈನ್ ವೆಂಕಟೇಶ್ ಗೆ ಮಾತ್ರ. ಅವರು ದೊಡ್ಡ ನಿರ್ಮಾಪಕರು. ಅವರು ಈ ಕತೆಯನ್ನು ಚೆನ್ನಾಗಿ ತೆರೆಗೆ ತರುತ್ತಾರೆ. ರಾಜೇಂದ್ರಸಿಂಗ್ ಕೂಡ ಹಿರಿಯ ನಿರ್ದೇಶಕರು. ನಾನು ಕತೆ ಮಾಡೊಕೆ ಬಹಳ ವರ್ಷ ತಗೊಂಡಿದ್ದೀನಿ. ಹಾಗಂತ ನಾನು ಮದಕರಿ , ನನಗೇ ಚಿತ್ರ ಸಿಗಬೇಕು ಎಂದು ಹೇಳುವುದಿಲ್ಲ. ಒಟ್ಟಾರೆ ನನಗೆ ನನ್ನ ಮದಕರಿ ಗೆಲ್ಲಬೇಕು ಅಷ್ಟೇ. ನನ್ನ ಸ್ವಾರ್ಥಕ್ಕೋಸ್ಕರ ಒಂದು ಒಳ್ಳೆಯ ಕತೆಗೆ ಅಡ್ಡಿಯಾಗಲಾರೆ ಎಂದು ಹೇಳುತ್ತಾರೆ.

ಅಂದ ಹಾಗೇ ಈ ಚಿತ್ರದಲ್ಲಿ ದರ್ಶನ್ ಜೊತೆ ರಾಜ ಮಾತೆ ಯಾಗಿ ಸಂಸದೆ ಸುಮಲತಾ ಅಭಿನಯಿಸಲಿದ್ದಾರೆ. ಶ್ರೀನಿವಾಸ್ ಮೂರ್ತಿ, ದೊಡ್ಡಣ್ಣ ಕೂಡ ಸಾತ್ ನೀಡಲಿದ್ದಾರೆ. ಸುದೀಪ್ ಮಾತನಾಡಲಿರುವ ವೀಡಿಯೋ ಕೆಳಗೆ ಇದೆ ನೋಡಿ

LEAVE A REPLY

Please enter your comment!
Please enter your name here