ಯಾವ ಯುಗದಲ್ಲಿ ಜನರು ಯಾವ ರೀತಿಯ ಗುಣಗಳನ್ನು ಹೊಂದಿದ್ದರು ಗೊತ್ತಾ..?

0
3112

ಭಾವನಾತ್ಮಕತೆ : ನಮ್ಮ ಶಾಸ್ತ್ರಗಳು ಯುಗ ಯುಗಗಳ ಬಗ್ಗೆ ಉಲ್ಲೇಖ ಮಾಡಿದೆ, ಯಾವ ಯುಗದಲ್ಲಿ ಜನರು ಯಾವ ಗುಣಗಳು ಅಥವಾ ವರ್ತನೆ ಹೊಂದಿದ್ದರು ಎಂದು ದಾಖಲೆಗಳು ಉಂಟು, ತಾಳೆಗರಿ ಎನ್ನುವುದು ಅಂದಿನ ಕಾಲದಲ್ಲಿ ಬರೆಯಲು ಉಪಯೋಗಿಸುವ ಸಾಧನ ಆಗಿತ್ತು, ಕೃತ ಯುಗದಲ್ಲಿ ಸತ್ಯ, ದಯೆ, ತಪಸ್ಸು, ದಾನ ಮಾಡುವ ಗುಣಗಳನ್ನು ಮನುಷ್ಯ ಹೊಂದಿದ್ದನು.

ತ್ರೇತಾ ಯುಗದಲ್ಲಿ ಸತ್ಯ ದೂರವಾಯಿತು, ಆದರೆ ದಾನ, ಕರುಣೆ, ತಪಸ್ಸು ಮಾತ್ರ ಉಳಿದುಕೊಂಡಿತು, ದ್ವಾಪರ ಯುಗದಲ್ಲಿ ಸತ್ಯ ದಯೆ ದೂರವಾಯಿತು, ತಪಸ್ಸು ದಾನ ಎನ್ನುವ ಎರಡು ಗುಣಗಳು ಮುಂದುವರೆಯಿತು, ಕಲಿಯುಗದಲ್ಲಿ ಸತ್ಯ ದಯೆ ತಪಸ್ಸು ಸಂಪೂರ್ಣವಾಗಿ ದೂರವಾಯಿತು, ಕೇವಲ ದಾನ ಎನ್ನುವ ಗುಣ ಮಾತ್ರ ಉಳಿದುಕೊಂಡಿತ್ತು, ಕಾಲ ಮುಂದೆ ಮುಂದೆ ಸಾಗಿ ದಾನ ಎನ್ನುವ ಸ್ವಭಾವ ಕ್ಷೀಣಿಸಿದೆ ಎಂದು ಹೇಳಬಹುದು.

ವಾಸ್ತವಿಕತೆಗೆ : ನಾವು ಪುರಾಣಗಳಲ್ಲಿ ಮುತ್ತು ರತ್ನಗಳು ಅಪಾರ ಪ್ರಮಾಣದಲ್ಲಿ ದಾನ ಧರ್ಮ ಕರುಣೆಗೆ ಬಡವರ ಮೇಲೆ ಇತ್ತು, ಆ ಕಾಲದಲ್ಲಿ ಮುತ್ತುರತ್ನಗಳು ರಸ್ತೆಯಲ್ಲಿ ರಾಶಿ ರಾಶಿ ಕಾಣಿಸುತ್ತಿತ್ತು ಎನ್ನಲಾಗಿದೆ, ಇಂದು ಚಿನ್ನ ಎನ್ನುವುದು ನೋಡುವುದು ಸಹ ಕಷ್ಟ ಎನ್ನುವಂತಹ ಸ್ಥಿತಿ ಎದುರಾಗಿದೆ, ಈ ಸ್ಥಿತಿಗೆ ಕಾರಣ ಏನೆಂದರೆ ಸಕಾರಾತ್ಮಕ ಗುಣಗಳ ಲೋಪ.

ಮನುಕುಲದ ಆರಂಭ ಉತ್ತಮವಾಗಿತ್ತು ಎಂದು ತಿಳಿದು ಬರುತ್ತದೆ, ಆದರೆ ಕ್ರಮೇಣ ಅವನು ತನ್ನ ಅಪಾರ ಸ್ವಾರ್ಥ, ಲಾಲಸೆ, ಮೋಸ,ದುರಾಸೆಗಳನ್ನು ತುಂಬಿಕೊಂಡು ಒಳ್ಳೆಯ ಗುಣಗಳನ್ನು ತಳ್ಳಿ ತನ್ನ ಸ್ವಾರ್ಥ ಸಾಧನೆಗೆ ಕೆಟ್ಟ ಗುಣಗಳನ್ನು ತುಂಬಿಕೊಂಡು ಪ್ರಯಾಣಿಸುತ್ತಿರುವ, ಬೇಡ ಅಂತಹ ಕೆಟ್ಟ ಗುಣಗಳಿಂದ ಮುಕ್ತರಾಗಿ, ಸತ್ಯದಿಂದ ಬಾಳಿ, ಬದುಕಲ್ಲಿ ಸಂತೋಷ ಕಾಣಿರಿ.

ವೈಚಾರಿಕತೆ : ಸತ್ಯ, ಧರ್ಮ, ತಪಸ್ಸು, ದಯೆ, ಕರುಣೆ ಬದುಕಿಗೆ ಕನ್ನಡಿ, ಅಂತಹ ಕನ್ನಡಿಯಲ್ಲಿ ಕೇವಲ ಕೆಟ್ಟ ಗುಣಗಳು ತುಂಬಿಕೊಂಡರೆ ಕನ್ನಡಿ ಮಾಸಿ ನಮ್ಮ ಪ್ರತಿಬಿಂಬ ನಮಗೆ ಕಾಣುವುದಿಲ್ಲ, ನಮ್ಮ ಕನ್ನಡಿಗೆ ನಮ್ಮನ್ನು ದೂರ ಮಾಡಿದರೆ ಪ್ರಯೋಜನವಾದರೂ ಏನು.

LEAVE A REPLY

Please enter your comment!
Please enter your name here