ಹೆಣ್ಣು ಮಕ್ಕಳು ಅದರಲ್ಲೂ ಭಾರತೀಯ ಸಂಸ್ಕೃತಿಯಲ್ಲಿ ಹೆಂಗಸರು ಹಣೆಯ ಮೇಲೆ ಕುಂಕುಮವನ್ನು ಸದಾಕಾಲ ಇಟ್ಟುಕೊಂಡಿರುತ್ತಾರೆ, ಕೆಲವೊಮ್ಮೆ ಕೈಬಳೆ, ವಾಲೆ ಇಲ್ಲದೆ ಇರಬಹುದು ಆದರೆ ಕುಂಕುಮ ಮಾತ್ರ ಇದ್ದೇ ಇರುತ್ತದೆ, ಇಷ್ಟು ಸಿಸ್ತಾಗಿ ಈ ಆಚಾರವನ್ನು ಪಾಲಿಸಲು ನಿಜವಾದ ಕಾರಣವಾದರೂ ಏನು, ಭಾರತೀಯ ಸಂಸ್ಕೃತಿ ಹಿಂದಿನ ನಿಜವಾದ ವಿಚಾರ ಏನು ಎಂಬುದರ ಬಗ್ಗೆ ತಿಳಿಯೋಣ.
ಭಾವನಾತ್ಮಕತೆ : ಅರಿಶಿಣ ಮತ್ತು ಕುಂಕುಮ ನಮ್ಮ ಸಂಸ್ಕೃತಿಯ ಹೆಣ್ಣುಮಕ್ಕಳ ಪಾಲಿಗೆ ಪವಿತ್ರ ಭಾವ ಉಂಟು ಮಾಡುವ ಸಂಕೇತ, ಹೀಗಾಗಿ ನಮ್ಮ ಹೆಣ್ಣು ಮಕ್ಕಳು ಒಂದು ಹೊತ್ತಿನ ಊಟವಾದರೂ ಬಿಡುತ್ತಾರೆ, ಆದರೆ ಅರಿಶಿನ ಕುಂಕುಮ ಇಲ್ಲದೆ ಒಂದು ದಿನವೂ ಅವರು ಕಲ್ಪನೆ ಸಹ ಮಾಡಿಕೊಳ್ಳುವುದಿಲ್ಲ.
ವಾಸ್ತವಿಕತೆ : ಎಲ್ಲವನ್ನೂ ಬಿಟ್ಟು ವಾಸ್ತವವಾಗಿ ಯೋಚನೆ ಮಾಡು ವುದಾದರೆ ಅರಿಶಿನದಲ್ಲಿ ಅನೇಕ ಬಗೆಯ ಔಷಧೀಯ ಗುಣಗಳು ಇದೆ,ಕುಂಕುಮ ನನಗೆ ಸ್ವಲ್ಪ ಮೇಲ್ಭಾಗದಲ್ಲಿ ಇರುವುದರಿಂದ ತಲೆನೋವು ಬರುವುದಿಲ್ಲ, ದೇಹದಲ್ಲಿ ಷಟ್ ಚಕ್ರಗಳು ಇದೆ, ಹಣೆಗೆ ಸ್ವಲ್ಪ ಮೇಲ್ಭಾಗದಲ್ಲಿ ಆಜ್ಞಾಚಕ್ರ ಇರುವುದರಿಂದ ನರಗಳಿಗೆ ಉತ್ತಮ ವ್ಯಾಯಾಮ ಲಭಿಸುತ್ತದೆ.
ವೈಚಾರಿಕತೆ : ಅರಿಶಿನ ಹಾಗು ಕುಂಕುಮ ಧರಿಸಿದ ಹೆಣ್ಣು ಮಕ್ಕಳ ಮುಖದಲ್ಲಿ ಸೌಭಾಗ್ಯವತಿ ಕಳೆ ತುಂಬಿರುತ್ತದೆ, ಅರಿಶಿಣ ಮತ್ತು ಕುಂಕುಮ ಎನ್ನುವುದು ಭಗವಂತನಿಗೆ ಲೇಪಿಸುವುದು, ಹೊಸ್ತಿಲಿಗೆ ಹಚ್ಚುವುದು, ಪ್ರತಿಯೊಂದು ಶುಭ ಕಾರ್ಯಗಳಲ್ಲಿ ಅರಿಶಿನ ಹಾಗು ಕುಂಕುಮ ಮೊದಲು ಬಳಸುತ್ತಾರೆ, ಅರಿಶಿನ ಹಾಗು ಕುಂಕುಮ ಶುಭದ ಸಂಕೇತ, ಆದ ಕಾರಣ ಹೆಣ್ಣು ಮಕ್ಕಳು ಸದಾ ಅರಿಶಿಣ ಕುಂಕುಮ ಇಟ್ಟು ಕೊಳ್ಳಬೇಕು.
ಅರಿಶಿನ ಕುಂಕುಮದ ಧಾರ್ಮಿಕ ಹಾಗೂ ವೈಜ್ಞಾನಿಕ ವಿಶ್ಲೇಷಣೆಯ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸಲ್ಲಿ ಬರೆದು ತಿಳಿಸಿ.