ಮನೆ ಎನ್ನುವುದು ಮನುಷ್ಯ ಕುಟುಂಬ ಸಮೇತ ವಾಸ ಮಾಡುವ ಜಾಗ. ಈ ಮನೆ ವಾಸ್ತು ಪ್ರಕಾರ ಕಟ್ಟಿದ್ದರೂ ಕೆಲವೊಮ್ಮೆ ಅಡಚಣೆಗಳು, ಬಡತನ, ಮನೆಯಲ್ಲಿ ಅಶಾಂತಿ ಕಾಣತೊಡಗುತ್ತವೆ. ಇದರಿಂದ ಸಂತೋಷ ಎನ್ನುವುದೇ ಇಲ್ಲವಾಗುತ್ತದೆ. ಇದಕ್ಕೆ ಕಾರಣ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ಇದ್ದಾಳೆ ಎಂದರ್ಥ. ಇವಳು ಇದ್ದರೆ ಯಾವುದೇ ಏಳಿಗೆ ಆಗುವುದಿಲ್ಲ. ಮನೆಯಲ್ಲಿ ಆರೋಗ್ಯ , ಐಶ್ವರ್ಯ ಇರಲು ದಾರಿದ್ರ್ಯ ಲಕ್ಷ್ಮಿಗೆ ಜಾಗವಿರಬಾರದು.
ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ಇದ್ದಾಳಾ ? ಇಲ್ಲವಾ ಎಂದು ತಿಳಿದುಕೊಳ್ಳುವುದು ಹೇಗೆ ಗೊತ್ತೇ ? ಹಲವಾರು ವಿಧಾನಗಳ ಮೂಲಕ ಮುನ್ಸೂಚನೆಯನ್ನು ತಿಳಿದುಕೊಳ್ಳಬಹುದು ಎಂದು ಹೇಳುತ್ತಾರೆ. ಮನೆಯಲ್ಲಿನ ಜನರು ನಿರುತ್ಸಾಹದಿಂದ ಇದ್ದರೆ, ನಿಸ್ತೇಜದಿಂದ ಇದ್ದರೆ, ಸಂತೋಷವನ್ನು ಆನಂದಿಸದಿದ್ದರೆ, ಮಕ್ಕಳು ಹೇಳಿದ ಮಾತನ್ನು ಕೇಳದೇ ಇದ್ದರೆ ಅಲ್ಲಿ ದಾರಿದ್ರ್ಯ ಲಕ್ಷ್ಮಿ ಇದ್ದಾಳೆ ಎಂದರ್ಥ.
ಮಕ್ಕಳು ಮೊಂಡು ಹಠವನ್ನು ಮಾಡುತ್ತಾ ಇದ್ದರೆ , ಮನೆ ಒಂಥರಹ ಮುಗ್ಗು ವಾಸನೆ ಬರುತ್ತಿದ್ದರೆ ಅಲ್ಲಿ ದಾರಿದ್ರ್ಯ ಲಕ್ಷ್ಮಿ ಇದ್ದಾಳೆ ಎಂದರ್ಥ. ಸದಾ ಮನೆಯಲ್ಲಿ ಅನ್ನ ಮತ್ತು ಬೇಳೆ ತಳ ಅತ್ತುತ್ತಾ ಬಂದರೆ ಅಂದರೆ ಹೊತ್ತಿ ಹೋಗುತ್ತಾ ಬಂದರೆ ಅಲ್ಲಿ ದಾರಿದ್ರ್ಯ ಇದೆ ಎಂದರ್ಥ.
ಇನ್ನೂ ದಾರಿದ್ರ್ಯ ಲಕ್ಷ್ಮಿಯನ್ನ ಮನೆಯಿಂದ ಹೊರಹಾಕಬೇಕೆಂದರೆ ಮನೆಯನ್ನು ಸದಾ ಶುಚಿಯಾಗಿಟ್ಟುಕೊಳ್ಳಬೇಕು. ಹಾಗೂ ನೀರಿಗೆ ಸ್ವಲ್ಪ ಅರಿಷಿಣ ಹಾಕಿ ಅರಿಸಿನದ ನೀರನ್ನು ಮನೆಯ ಕೋಣೆಗಳಿಗೆ ಸಿಂಪಡಿಸಿದರೆ ದಾರಿದ್ರ್ಯ ಲಕ್ಷ್ಮಿ ಹೊರಹೋಗುತ್ತಾಳೆ.
ಇನ್ನೂ ಶ್ರೀವೆಂಕಟೇಶ್ವರನ ಪೂಜೆಯನ್ನು ಮಾಡಬೇಕು. ಪ್ರತಿ ಶನಿವಾರ ವೆಂಕಟೇಶ್ವರನಿಗೆ ಕಾಯಿಯನ್ನು ಒಡೆದು ಪೂಜಿಸಬೇಕು . ಇದರಿಂದ ವೆಂಕಟೇಶ್ವರನ ಪತಿ ಲಕ್ಷ್ಮಿಯು ಪತಿಯ ಪೂಜೆಯಿಂದ ಸಂತೃಷ್ಠಳಾಗಿ ನಮಗೆ ಒಲಿಯುತ್ತಾಳೆ.
ಪ್ರತಿ ನಿತ್ಯ ಸಾಂಬ್ರಾಣಿಯ ಧೂಪವನ್ನು ಹಾಕಬೇಕು. ಮನೆಯ ತುಂಬಾ ಸಾಂಬ್ರಾಣಿ ಹೊಗೆಯಿಂದ ಮನೆಗೆ ಸಕಾರಾತ್ಮಕ ಶಕ್ತಿ ಆವರಿಸಿ ದಾರಿದ್ರ್ಯ ಲಕ್ಷ್ಮಿ ಹೊರಟು ಹೋಗುತ್ತಾಳೆ. ಸಾಧ್ಯವಾದರೆ ಸಾಂಬ್ರಾಣಿಗೆ ಚೂರು ಒಣ ಕೊಬ್ಬರಿ ಚೂರ್ಣ, ಎರಡು ಚಿಟಿಕೆಯಷ್ಟು ಸಕ್ಕರೆ, ಒಂದು ಹನಿ ತುಪ್ಪ ಹಾಕಿ ಧೂಪ ಹಾಕಿ.
ಎಲ್ಲಾ ನಿಯಮಗಳನ್ನು ಮಾಡಿದರೆ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ಹೊರಟು ಹೋಗಿ ಮನೆಯ ಮಕ್ಕಳು ನಗುತ್ತಾ ಖುಷಿಯಿಂದ ಇರುತ್ತಾರೆ. ಮನೆಯಲ್ಲಿ ಧನಲಕ್ಷ್ಮಿ ಒಲಿದು ಬರುತ್ತಾಳೆ. ಇನ್ನೇಕೆ ತಡ ಇವುಗಳನ್ನು ಮಾಡಿ.