ಪೈನಾಪಲ್ ಪೋಷಕಾಂಶಗಳ ಆಗರ : ಮೂಲತಃ ಬ್ರೆಜಿಲ್ ದೇಶಕ್ಕೆ ಸೇರಿದ್ದು, ಪೈನಾಪಲ್ ಅತಿ ಉಪಯುಕ್ತವಾದ ಹಣ್ಣು ಇದರಿಂದ ಗೊಜ್ಜು, ಕೇಸರಿಭಾತ್, ಜ್ಯೂಸು, ಮೊರಬ್ಬ, ಫ್ರುಟ ಸಲಾಡ್, ಸಾಸಿವೆ ಇತ್ಯಾದಿ ರುಚಿಕರವಾದ ಅಡುಗೆ ಮಾಡಬಹುದು ಹಣ್ಣಿನ ರಸದಿಂದ ಸಕ್ಕರೆ, ಸಿರಪ್, ಮದ್ಯಗಳನ್ನು ಹಾಗು ಎಳೆಯ ನಾರಿನಿಂದ ಉತ್ತಮ ಮಟ್ಟದ ರೇಷ್ಮೆಯಂಥ ನೂಲುಗಳನ್ನು ತೆಗೆದು ಬಟ್ಟೆಯನ್ನು ತಯಾರಿಸುತ್ತಾರೆ ರಸ ತೆಗೆದ ಹಣ್ಣಿನ ಸಿಪ್ಪೆ ತಿರುಳಿನಿಂದ ಜಾನುವಾರುಗಳ ಮೇವನ್ನು ತಯಾರಿಸುತ್ತಾರೆ, ದಿನವೂ ಊಟದ ನಂತರ ಅನಾನಸ್ ಹಣ್ಣಿನ ಹೋಳುಗಳಿಗೆ ಸ್ವಲ್ಪ ಉಪ್ಪು ಮತ್ತು ಸ್ವಲ್ಪ ಕರಿಮೆಣಸಿನ ಪುಡಿಯನ್ನು ಹಚ್ಚಿ ಸೇವಿಸುವುದರಿಂದ ಅಜೀರ್ಣ ರೋಗ ದೂರವಾಗುತ್ತದೆ.
ಅನಾನಸ್ ಹಣ್ಣಿನ ಹೋಳುಗಳಿಗೆ ಸ್ವಲ್ಪ ಕಾಳುಮೆಣಸಿನ ಪುಡಿಯನ್ನು ಹಚ್ಚಿ ಸೇವಿಸುವುದರಿಂದ ಆಮ್ಲಪಿತ್ತ (Acidity) ದೂರವಾಗುತ್ತದೆ, ಅನಾನಸ್ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಗಂಟಲುಬೇನೆ ಗುಣವಾಗುತ್ತದೆ ಪ್ರತಿದಿನ ತಾಜಾ ಅನಾನಸ್ ಹಣ್ಣನ್ನು ಸೇವಿಸುವುದರಿಂದ ಹೃದಯದ ದುರ್ಬಲತೆ ದೂರವಾಗುತ್ತದೆ.
ಮೂತ್ರ ಕಟ್ಟುವುದು, ಪಿತ್ತಕೋಶ ಊದಿಕೊಳ್ಳುವುದು, ಕಣ್ಣಿನ ಸುತ್ತಮುತ್ತ ಊದಿಕೊಳ್ಳುವುದು ಮುಂತಾದ ತೊಂದರೆಗಳಿಗೆ ತಾಜಾ ಅನಾನಸ್ ಹಣ್ಣನ್ನು ತಿಂದು ಹಾಲು ಕುಡಿಯಬೇಕು ಬೇರೆ ಏನನ್ನೂ ಸೇವಿಸಬಾರದು ಹೀಗೆ ಮಾಡುವುದರಿಂದ ಒಂದು ವಾರದಲ್ಲಿ ಗುಣವಾಗುವುದು.
ಅನಾನಸ್ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಧೂಮಪಾನದಿಂದ ಉಂಟಾಗುವ ಅನೇಕ ದುಷ್ಪರಿಣಾಮಗಳು ದೂರವಾಗುತ್ತವೆ ಅನಾನಸ್ ಹಣ್ಣಿನ ರಸವನ್ನು ಕಜ್ಜಿ, ತುರಿಕೆ ಇದ್ದಲ್ಲಿ ಹಚ್ಚಿ ತಿಕ್ಕಿದರೆ ವಾಸಿಯಾಗುತ್ತವೆ, ಅನಾನಸ್ ಹಣ್ಣಿಗೆ ಕರಿಮೆಣಸಿನ ಪುಡಿಯನ್ನು ಹಾಕಿ ಸೇವಿಸಿದರೆ ಕೆಮ್ಮು, ಕಫಾ ಕಡಿಮೆ ಆಗುತ್ತದೆ.
ಅನಾನಸ್ ಹಣ್ಣಿನ ಹೋಳುಗಳನ್ನು ಜೇನುತುಪ್ಪದೊಡನೆ ಸೇವಿಸುವುದರಿಂದ ಯಕೃತ್ತಿನ ದೋಷ ಮತ್ತು ಅರಿಶಿನ ಕಾಮಾಲೆ ಗುಣವಾಗುತ್ತದೆ, ಊಟದ ನಂತರ ಈ ಹಣ್ಣನ್ನು ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ.
ಅನಾನಸು ಬ್ರೋಮೊಲಿನ್ ಎಂಬ ಕಿಣ್ವ ಹೊಂದಿದೆ ಇದು ಜೀರ್ಣಕ್ರಿಯೆಗೆ ಸಹಕಾರಿ ಆದ್ದರಿಂದ ಇದನ್ನು ಹೆಚ್ಚಾಗಿ ಅಜೀರ್ನವಿದ್ದಾಗ ಆಮಾಶಯ ಅತಿಶಯ ದೂಶಿತವಾಗಿರುವಾಗ ಉಪಯೋಗಿಸುವುದು ಒಳ್ಳೆಯುದು ಅನನಾಸಿನಲ್ಲಿ ಹೇರಳವಾಗಿ ನೈಸರ್ಗಿಕ ಪೊಟ್ಯಾಸಿಯಂ ಇರುವುದರಿಂದ ಮೂತ್ರ ಕಟ್ಟುವಿಕೆ, ಉರಿ ಮೂತ್ರ ಮುಂತಾದ ರೋಗಗಳಲ್ಲಿ ಗುಣಕಾರಿ ಅನಾನಸು ಹಣ್ಣನ್ನು ದಿನವು (ಮಿತಿಯಲ್ಲಿ) ಅತಿ ಧೂಮಪಾನದಿಂದ ಉಂಟಾಗುವ ವಿಕಾರಗಳನ್ನು ಕಡಿಮೆ ಮಾಡಬಹುದು.