ವಿದೇಶ ಪ್ರಯಾಣ ಮಾಡಬೇಕು ಎಂಬ ಆಸೆ ಇದ್ದವರು ಈ 500 ವರ್ಷ ಹಳೆಯ ಇತಿಹಾಸ ಹೊಂದಿರುವ ದೇವಸ್ಥಾನಕ್ಕೆ ಒಮ್ಮೆ ಭೇಟಿ ಮಾಡಿ..!!

0
4001

ಭಾರತದಲ್ಲಿ ಇರುವ ಪ್ರತಿಯೊಂದು ದೇವಾಲಯವು ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ, ಉದಾಹರಣೆಗೆ ಮಕ್ಕಳ ಭಾಗ್ಯ ನೀಡಲು ಹಲವು ದೇವಸ್ಥಾನಗಳು ಪ್ರಖ್ಯಾತಿಯನ್ನು ಹೊಂದಿದೆ, ಹಣದ ಸಮಸ್ಯೆಗಳಿಗಾಗಿ ಬೇಡಿಕೆಯನ್ನು ಪೂರೈಸುವ ಕೆಲವು ದೇವಸ್ಥಾನಗಳು ಆದರೆ, ಮಾಟ ಮಂತ್ರ ಸಮಸ್ಯೆಗಳ ಪರಿಹಾರಕ್ಕೆ ಕೆಲವು ದೇವಸ್ಥಾನಗಳು, ಆದರೆ ಇಂದು ನಾವು ನಿಮಗೆ ತಿಳಿಸುವ ದೇವಾಲಯ ವೀಸಾ ದೇವಾಲಯ ಎಂದೇ ಪ್ರಸಿದ್ಧಿಯನ್ನು ಪಡೆದಿದೆ.

ಹೌದು ಐ ನೂರು ವರ್ಷ ಇತಿಹಾಸವಿರುವ ಈ ದೇವಾಲಯ ಕೆಲವು ವರ್ಷಗಳಿಂದ ವಿಸ ದೇವಾಲಯ ಎಂಬ ಹೆಸರಿನಿಂದ ಪ್ರಖ್ಯಾತಿಯನ್ನು ಪಡೆದಿದೆ, ಈ ದೇವಸ್ಥಾನವಿರುವುದು ಹೈದರಾಬಾದಿನ ಓಸ್ಮಾನ್ ಸಾಗರದಲ್ಲಿ ಹಾಗೂ ಈ ದೇವಾಲಯದ ಹೆಸರು ಚಿಕ್ಕಲೂರು ಬಾಲಾಜಿ ದೇವಸ್ಥಾನ, ಪ್ರತಿವರ್ಷ ಇಲ್ಲಿ ಸಾವಿರಾರು ಜನರು ತಮ್ಮ ವಿದೇಶ ಪ್ರಯಾಣದ ಬೇಡಿಕೆಯನ್ನು ಇಟ್ಟು ಇಲ್ಲಿಗೆ ಬರುತ್ತಾರೆ.

ಅಮೆರಿಕಾ ಅಥವಾ ರಷ್ಯಾದಂತಹ ದೇಶಗಳಿಗೆ ವೀಸಾ ಪಡೆಯುವುದು ಅಷ್ಟು ಸುಲಭದ ಮಾತಲ್ಲ, ಹೈದರಾಬಾದ್ ಅಷ್ಟೇ ಅಲ್ಲದೆ ಸುತ್ತಮುತ್ತಲಿನ ರಾಜ್ಯಗಳಾದ ಕರ್ನಾಟಕ ತಮಿಳುನಾಡು ಹಾಗೂ ಮಹಾರಾಷ್ಟ್ರ ಗಳಿಂದಲೂ ಭಕ್ತರು ಇಲ್ಲಿ ಬರುತ್ತಾರೆ ಹಾಗೂ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ, ದೇವಸ್ಥಾನದ ಸಿಬ್ಬಂದಿ ಹಾಗೂ ಸ್ಥಳೀಯರು ಹೇಳುವ ಪ್ರಕಾರ ಲಕ್ಷಕ್ಕೂ ಅಧಿಕ ಭಕ್ತರಿಗೆ ಈ ದೇವರಿಗೆ ಹರಕೆ ಹೊತ್ತು visa ಪಡೆದಿದ್ದಾರೆ.

ವೀಸಾ ಪಡೆಯಲು ಈ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಸುತ್ತ 11 ಪ್ರದಕ್ಷಿಣೆ ಹಾಕಬೇಕು, ನಂತರ ತಮ್ಮ ಪಾಸ್ಪೋರ್ಟ್ ಜೊತೆಗೆ ತೆಂಗಿನಕಾಯಿಯನ್ನು ದೇವರ ಮುಂದೆ ಇಟ್ಟು ಪ್ರಾರ್ಥನೆ ಮಾಡಿ ಕೊಳ್ಳಬೇಕು, ವಿಸ ಪಡೆದ ನಂತರ 108 ಪ್ರದಕ್ಷಿಣೆ ಹಾಕುವುದಾಗಿ ಹರಕೆಯನ್ನು ಹೊರಬೇಕು.

ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here