ಮೈಗ್ರೇನ್ ಒಂದು ಪದೇ ಪದೇ ಕಾಡುವ ತಲೆ ನೋವಿನ ಸಮಸ್ಯೆಯಾಗಿದೆ, ಇದು ಯಾವಾಗಲು ತಲೆಯ ಒಂದು ಭಾಗದಲ್ಲಿ ಮಾತ್ರ ಅತಿಯಾದ ನೋವು ಕಾಣಿಸಿ ಕೊಳ್ಳುತ್ತದೆ ಹಾಗು ಇದು ಬೆಳಕು, ಶಬ್ದ, ಮತ್ತು ವಾಕರಿಕೆಗಳಿಂದ ಜಾಸ್ತಿಯಾಗುತ್ತದೆ, ಒಂದು ಸಲ ತಲೆ ನೋವು ಶುರುವಾದರೆ ಘಂಟೆಗಳ ಕಾಲ ಕೆವವೊಮ್ಮೆ ಹಲವಾರು ದಿನಗಳು ಇರುತ್ತದೆ, ಈ ನೋವಿಗೆ ಸ್ಪಷ್ಟ ಕಾರಣಗಳು ತಿಳಿದು ಬಂದಿಲ್ಲ ಆದರೆ ಅನುವಂಶಿಕ ಎಂದು ಊಹಿಸಲಾಗಿದೆ.
ಗುಣವಾಗಲು ಎಷ್ಟು ಸಮಯ ಬೇಕು ಈ ತಲೆ ನೋವು ಬಂದರೆ ಅಷ್ಟು ಸುಲಭವಾಗಿ ಕಮ್ಮಿ ಯಾಗುವುದಿಲ್ಲ ಸಂಮನ್ಯವಾಗಿ ಒಮ್ಮೆ ಬಂದರೆ 4 ರಿಂದ 72 ಗಂಟೆಗಳ ಕಾಲ ಇರುತ್ತದೆ ಮತ್ತು ಹೆಚ್ಚಿನ ಜನರಲ್ಲಿ ಇದು ಆಗಾಗ್ಗೆ ಸಂಭವಿಸುವುದರಿಂದ ಮಧ್ಯೆ ಮಧ್ಯೆ ಆರಾಮವಾಗಿಯೂ ಇರುತ್ತಾರೆ, ಕೆಲವರಿಗಂತೂ ದಿನಗಟ್ಟಲೆ ನೋವು ಇರುತ್ತದೆ ಚಿಕಿತ್ಸೆಯನ್ನು ಪಡೆದರು ಮತ್ತೆ ನೋವು ಕಾಣಿಸುವ ಸಾಧ್ಯತೆ ಇರುತ್ತದೆ.
ನಿಮ್ಮ ಹಳೆಯ ವೈದ್ಯಕೀಯ ವಿವರಗಳು, ನಿಮ್ಮ ರೋಗಲಕ್ಷಣಗಳ ವಿಮರ್ಶೆ ಮತ್ತು ದೈಹಿಕ ಮತ್ತು ನರವೈಜ್ಞಾನಿಕ ಪರೀಕ್ಷೆಯ ಆಧಾರದ ಮೇಲೆ ಮೈಗ್ರೇನ್ ನನ್ನು ಗುರುತಿಸಲಾಗುತ್ತದೆ ಇನ್ನು ಕೆಲವು ರಕ್ತ ಪರೀಕ್ಷೆಗಳು, ಎಂಆರ್ಐ ಸ್ಕ್ಯಾನ್, ಸಿಟಿ ಸ್ಕ್ಯಾನ್, ಸ್ಪೈನಲ್ ಟ್ಯಾಪ್ (ಸೊಂಟದ ತೂತು) ಮುಂತಾದವುಗಳನ್ನು ಸಹ ಮಾಡಿಸಬಹುದು.
ಇನ್ನು ಚಿಕಿತ್ಸೆ ಪರಿಹಾರಗಳು : ಮೈಗ್ರೇನ್ ತಲೆನೋವಿನ ಚಿಕಿತ್ಸೆಯು ನೋವಿನ ತೀವ್ರತೆ ಮತ್ತು ಆವರ್ತನವನ್ನು ಅವಲಂಬಿಸಿರುತ್ತದೆ ಮೈಗ್ರೇನ್ ತಲೆನೋವನ್ನು ತಡೆಗಟ್ಟಲು ಕೆಲವು ರೋಗನಿರೋಧಕ ಔಷಧಿಗಳು ಸಹ ಲಭ್ಯವಿದೆ, ಅವುಗಳಲ್ಲಿ ಮೊದಲಿಗೆ ಪ್ಯಾರೆಸೆಟಮಾಲ್ ಮತ್ತು ಐಬುಪ್ರೊಫೆನ್ ನಂತಹ ಗುಳಿಗೆಗಳೊಂದಿಗೆ ಚಿಕಿತ್ಸೆ ನೀಡುತ್ತಾರೆ ಮತ್ತು ನಿಮಗೆ ಅತಿಯಾದ ತಲೆನೋವು ಇದ್ದರೆ ನಿಮ್ಮ ಅತ್ತಿರದ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.