ತಾಯಿ ಮಹಾಲಕ್ಷ್ಮಿ ಕೃಪೆಯಿದ್ದರೆ ಜೀವನದಲ್ಲಿ ಯಾವುದೇ ಕಷ್ಟ ಎದುರಾಗುವುದಿಲ್ಲ ಎನ್ನುತ್ತಾರೆ, ತಾಯಿ ಲಕ್ಷ್ಮಿ ಒಲಿಸಿಕೊಳ್ಳುವುದು ಸುಲಭವಲ್ಲ, ಲಕ್ಷ್ಮಿ ಪೂಜೆಯನ್ನು ಶ್ರದ್ಧೆ ಭಕ್ತಿಯ ಜೊತೆಗೆ ವಿಧಿ ವಿಧಾನದ ಮೂಲಕ ಮಾಡಬೇಕಾಗುತ್ತದೆ, ನಿಯಮದಂತೆ ತಾಯಿ ಪೂಜೆ ಮಾಡಿದ್ದಲ್ಲಿ ಮಾತ್ರ ಲಕ್ಷ್ಮಿ ಆಶೀರ್ವಾದ ಪಡೆಯಲು ಸಾಧ್ಯ.
ತಾಯಿ ಲಕ್ಷ್ಮಿ ಪೂಜೆ ಮಾಡುವಾಗ ಬಿಳಿಯ ಅಥವಾ ಗುಲಾಬಿ ಬಣ್ಣದ ಬಟ್ಟೆ ಧರಿಸಿ ಮಾಡಬೇಕು.
ಮನೆಯಲ್ಲಿ ಲಕ್ಷ್ಮಿ ಪೂಜೆ ಮಾಡಲು ಬಯಸಿದರೆ ಲಕ್ಷ್ಮಿ ಪೂಜೆಗೆ ಶುಭ ಮುಹೂರ್ತ ಗೋಧೂಳಿ ಸಮಯ ಮತ್ತು ಮಧ್ಯರಾತ್ರಿ.
ಗುಲಾಬಿ ಬಣ್ಣದ ಕಮಲದ ಹೂವಿನ ಮೇಲೆ ಕುಳಿತಿರುವ ಲಕ್ಷ್ಮಿ ಮೂರ್ತಿಗೆ ಪೂಜೆ ಮಾಡಬೇಕು, ಇದರಿಂದ ಲಕ್ಷ್ಮಿ ಬೇಗ ಪ್ರಸನ್ನಳಾಗುತ್ತಾಳೆ.
ಇದರ ಜೊತೆಗೆ ಲಕ್ಷ್ಮಿ ಕೈಯಿಂದ ನಾಣ್ಯ ಕೆಳಗೆ ಬೀಳುತ್ತಿರುವ ಮೂರ್ತಿಯನ್ನು ಆಯ್ಕೆ ಮಾಡಿಕೊಳ್ಳಿ.
ತಾಯಿ ಲಕ್ಷ್ಮಿಗೆ ಗುಲಾಬಿ ಬಣ್ಣದ ಹೂವು ಅದರಲ್ಲೂ ಕಮಲದ ಹೂವನ್ನು ಅರ್ಪಿಸುವುದು ಶ್ರೇಷ್ಠ.
ಲಕ್ಷ್ಮಿ ಮಂತ್ರವನ್ನು ಸ್ಪಟಿಕದ ಮೇಲೆ ಕೈ ಹಿಡಿದು ಜಪಿಸಿದರೆ ಫಲ ಶೀಘ್ರ ಪ್ರಾಪ್ತಿಯಾಗುತ್ತದೆ.
ಈ ಸೂತ್ರಗಳನ್ನು ಪಾಲಿಸಿ ದಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಮನೆಯಲ್ಲಿ ದರಿದ್ರಲಕ್ಷ್ಮಿ ವಾಸವಾಗಿದೆ ಅದೃಷ್ಟಲಕ್ಷ್ಮಿ ವಾಸವಾಗಿ ನಿಮಗೆ ಯಾವುದೇ ಕಷ್ಟಗಳು ಬರದ ರೀತಿಯಲ್ಲಿ ನಿಮ್ಮನ್ನು ಕಾಯುತ್ತಾಳೆ.