ಭಾನುವಾರ ಈ ಕೆಲಸಗಳನ್ನು ಮಾಡಿದರೆ ಉದ್ಯೋಗ ಇಲ್ಲದವರಿಗೆ ಖಂಡಿತವಾಗಿಯೂ ಉತ್ತಮ ಉದ್ಯೋಗಗಳು ದೊರೆಯುತ್ತದೆ..!!

0
3632

ಒಳ್ಳೆ ಉದ್ಯೋಗದ ಕನಸನ್ನು ಹೊತ್ತು ಸ್ಕೂಲು ಕಾಲೇಜುಗಳಲ್ಲಿ ಉತ್ತಮ ವಿದ್ಯಾಭ್ಯಾಸವನ್ನು ಪಡೆಯುತ್ತೇವೆ, ದೊಡ್ಡ ದೊಡ್ಡ ಡಿಗ್ರಿಗಳನ್ನು ಸಂಪಾದನೆ ಮಾಡುತ್ತೇವೆ ಆದರೆ ನಾವು ಇಷ್ಟಪಟ್ಟ ಅಥವಾ ನಮ್ಮ ಓದಿಗೆ ಸರಿಸಮನಾದ ಕೆಲಸಗಳು ಸಿಗದೇ ಚಿಕ್ಕ ಕೆಲಸಗಳನ್ನು ಮಾಡುತ್ತಿರುತ್ತೇವೆ, ಶಾಸ್ತ್ರಗಳ ಪ್ರಕಾರ ಇಂದು ನೀವು ಅನುಭವಿಸುವ ಎಲ್ಲಾ ಪಾಪ ಹಾಗೂ ಪುಣ್ಯಗಳಿಗೆ ನಿಮ್ಮ ಹಿಂದಿನ ಜನ್ಮದಲ್ಲಿ ನೀವು ಮಾಡಿರುವ ಕೆಲಸಗಳ ಮೇಲೆ ನಿಂತಿರುತ್ತದೆ ಎಂದು ಹೇಳಲಾಗುತ್ತದೆ, ಅದೇನೇ ಇರಲಿ ಉತ್ತಮ ಉದ್ಯೋಗ ಪ್ರಾಪ್ತಿ ಗಾಗಿ ಭಾನುವಾರ ಹಾಗೂ ಉಳಿದ ದಿನಗಳಲ್ಲಿ ಏನೆಲ್ಲಾ ಮಾಡಬೇಕು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ.

ಪ್ರತಿ ಶನಿವಾರ ಹಾಗೂ ಮಂಗಳವಾರ ರಾಮಭಕ್ತ ಹನುಮಂತನ ದೇವಸ್ಥಾನಕ್ಕೆ ಭೇಟಿ ನೀಡಬೇಕು ಹಾಗೂ ಹನುಮಾನ್ ಚಾಲೀಸ್ ಅನ್ನು ದೇವಸ್ಥಾನದಲ್ಲಿ ಅಥವಾ ದೇವರ ದರ್ಶನ ಪಡೆದು ಮನೆಗೆ ಬಂದು ದೇವರ ಕೋಣೆಯ ಮುಂದೆ ಒಮ್ಮೆಯಾದರೂ ಸಂಪೂರ್ಣವಾಗಿ ಓದಬೇಕು, ಹೀಗೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಅಥವಾ ನಿಮ್ಮ ಸುತ್ತ ಮುತ್ತಲಿರುವ ನೆಗೆಟಿವ್ ಶಕ್ತಿಯು ನಾಶವಾಗುತ್ತದೆ ಹಾಗೂ ಸಕಾರಾತ್ಮಕ ಶಕ್ತಿ ಪ್ರಬಲವಾಗುತ್ತದೆ.

ಸೋಮವಾರ, ಸೋಮವಾರದ ಶಿವನ ವ್ರತವನ್ನು ಮಾಡಬೇಕು ಮತ್ತು ಶಿವನಿಗೆ ಪಂಚಾಮೃತ ಅಭಿಷೇಕ ಮಾಡಿಸಬೇಕು, ನಂತರ ಕೆಲಸದ ಸಂದರ್ಶನಕ್ಕೆ ಹೋಗುವ ಮೊದಲು ಮನೆಯಲ್ಲಿ ಸ್ವಲ್ಪ ಸಕ್ಕರೆಯನ್ನು ಸೇರಿಸಿ ಹೊರಟರೆ, ನೀವು ಹೊರಟ ಕೆಲಸ ನಿಮಗೆ ಸಿಗುವ ಸಂಪೂರ್ಣ ಸಾಧ್ಯತೆಗಳು ಇರುತ್ತವೆ.

ಹಾಗೆ ಸಂದರ್ಶನಕ್ಕೆ ಹೋಗುವಾಗ ಸ್ವಲ್ಪ ಬೆಲ್ಲವನ್ನು ನಿಮ್ಮ ಜೇಬಿನಲ್ಲಿ ಅಥವಾ ಬ್ಯಾಗಿನಲ್ಲಿ ಇಟ್ಟುಕೊಂಡು ಹೊರಡಿ, ರಸ್ತೆಯಲ್ಲಿ ಸಂಚರಿಸುವಾಗ ನಿಮಗೆ ಕಾಣ ಸಿಗುವ ಹಸುವಿಗೆ ಬೆಲ್ಲವನ್ನು ತಿನ್ನಿಸಿ ನಂತರ ಉದ್ಯೋಗದ ಸಂದರ್ಶನಕ್ಕೆ ಹೊರಡಿ.

ಉದ್ಯೋಗ ಪ್ರಾಪ್ತಿ ಗಾಗಿ ಸೂರ್ಯದೇವನ ಅನುಗ್ರಹ ಅತಿ ಮುಖ್ಯ ಆದಕಾರಣ ಪ್ರತಿ ಭಾನುವಾರ ಬೆಳಗ್ಗೆ ಸೂರ್ಯನ ಮೊದಲ ಕಿರಣ ಗಳನ್ನು ಪಡೆದು ಸೂರ್ಯ ನಮಸ್ಕಾರವನ್ನು ಮಾಡಿ, ಸೂರ್ಯ ಮುಳುಗಿದ ನಂತರ ಸೂರ್ಯ ದೇವನ ನೆನೆಯುವುದು ಪ್ರಾರ್ಥನೆ ಮಾಡುವುದು ಮಾಡಿದರೆ ಶನಿಯ ವಕ್ರದೃಷ್ಟಿ ಬೀರುತ್ತದೆ, ಸೂರ್ಯದೇವನ ಕಿರಣಗಳು ನಿಮ್ಮ ಮೇಲೆ ಬಿದ್ದ ಕೆಟ್ಟ ದೃಷ್ಟಿ ಗಳನ್ನು ನಿವಾರಿಸಲು ತುಂಬಾ ಪ್ರಬಲ ಶಾಲಿ.

LEAVE A REPLY

Please enter your comment!
Please enter your name here