ಹೈದರಾಬಾದಿನ ಆಸ್ಪತ್ರೆಯೊಂದರಲ್ಲಿ ಮನಕಲುಕುವ ಘಟನೆಯೊಂದು ನಡೆದಿದೆ, ಉಸಿರಾಡಲು ಸಾಧ್ಯವಾಗದೆ ತನ್ನ ಕೊನೆಯ ಕ್ಷಣಗಳನ್ನು ತಿಳಿದ ಮಗ ವೈದ್ಯರ ನಿರ್ಲಕ್ಷ್ಯವನ್ನು ಹಾಗೂ ತನ್ನ ಪರಿಸ್ಥಿತಿಯನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ಇನ್ನು ನಾನು ಬದುಕಿರಲಾರೆ ಎಂದು ನನಗೆ ಅನಿಸುತ್ತಿದೆ ಬಾಯ್ ಅಪ್ಪ ಇಂದು ತಂದೆಗೆ ವಿಡಿಯೋ ಮಾಡಿ ಕಳುಹಿಸಿದ್ದಾನೆ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
34 ವರ್ಷದ ರೋಗಿ ತೀವ್ರವಾದ ಜ್ವರ, ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಆತನ ತಂದೆ ನಾಲ್ಕಾರು ಖಾಸಗಿ ಆಸ್ಪತ್ರೆಗಳಿಗೆ ತನ್ನ ಮಗನನ್ನು ಕರೆದುಕೊಂಡು ಹೋಗಿದ್ದಾರೆ ಆದರೆ ಈತನಿಗೆ ಕರೋನಾ ಇರಬಹುದು ಎನ್ನುವ ಭಯದಲ್ಲಿ ಯಾವ ಖಾಸಗಿ ಆಸ್ಪತ್ರೆಯವರು ಸೇರಿಸಿಕೊಳ್ಳದ ಕಾರಣ ಹೈದರಾಬಾದಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸ ಬೇಕಾಗಿ ಬರುತ್ತದೆ, ನಂತರ ಈತನ ಪರೀಕ್ಷೆ ನಡೆಸಿದಾಗ ಕೊರೊನ ಇರುವುದು ಗೊತ್ತಾಗುತ್ತದೆ, ನಂತರ ಈತ ಸಾವನ್ನಪ್ಪಿದ ಸುದ್ದಿಯನ್ನು ತಿಳಿದ ತಂದೆ ಮಗನ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದಿದ್ದಾರೆ.
ನಂತರ ತಮ್ಮ ಮೊಬೈಲ್ ನೋಡಿದಾಗ ಅದರಲ್ಲಿ ಮಗ ಸಾಯುವ ಮುನ್ನ ಕಳಿಸಿರುವ ಸೆಲ್ಫಿ ವಿಡಿಯೋ ನೋಡಿ ಕಣ್ಣುಗಳಲ್ಲಿ ನೀರು ತುಂಬಿ ಬಂದಿದೆ, ಹೃದಯ ಬಾರವಾಗಿದೆ, ಆ ವಿಡಿಯೋದಲ್ಲಿ ಮಗ ನನಗಿಲ್ಲಿ ಉಸಿರಾಡಲೂ ಆಗುತ್ತಿಲ್ಲ, ಆಕ್ಸಿಜನ್ ನೀಡಿ ಎಂದು 3 ಗಂಟೆಗಳಿಂದ ವೈದ್ಯರ ಬಳಿ ಬೇಡಿಕೊಳ್ಳುತ್ತಿದ್ದೇನೆ, ಆದರೆ ನನ್ನ ಮಾತನ್ನು ಯಾರೂ ಕೇಳಿಸಿಕೊಳ್ಳುತ್ತಿಲ್ಲ, ನನ್ನ ಹೃದಯ ಬಡಿತ ನಿಲ್ಲಿಸುತ್ತಿದೆ ಎಂದು ನನಗೆ ಗೊತ್ತಾಗುತ್ತಿದೆ, ಬಾಯ್ ಬಾಯ್ ಅಪ್ಪ ಇಂದು ಮಾತನಾಡಿದ್ದಾನೆ, ಇದರಿಂದ ತಂದೆಗೆ ಆಸ್ಪತ್ರೆಯವರ ಬೇಜವಾಬ್ದಾರಿತನ ದಿಂದಲೇ ನನ್ನ ಮಗ ಸಾವನ್ನಪ್ಪಿದ್ದಾನೆ ಎಂದು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ತಂದೆ ವೈರಲ್ ಮಾಡಿದ್ದಾರೆ.
ಆದರೆ ಈ ಬಗ್ಗೆ ಮಾತನಾಡುವ ಆಸ್ಪತ್ರೆ ಸಿಬ್ಬಂದಿಗಳು ಇದೆಲ್ಲ ಸುಳ್ಳು ಆತನನ್ನು ನಾವು ವೆಂಟಿಲೇಟರ್ ನಲ್ಲಿ ಇರಿಸಿದೆವು, ಆಕ್ಸಿಜನ್ ನೀಡಿದರೂ ಆತ ಬದುಕಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಹಾಗೂ ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.