ಹಿಂದಿಯ ಸಿನಿಮಾಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಟ ಸುಶಾಂತ್ ಸಿಂಗ್ ರಜಪೂತ್ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಈ ಬಗ್ಗೆ ವರದಿ ಮಾಡುತ್ತಿದ್ದು, ಬಾಲಿವುಡ್ ಮಂದಿಗೆ ಇದೊಂದು ದೊಡ್ಡ ಶಾಕಿಂಗ್ ನ್ಯೂಸ್ ಆಗಿದೆ, ಸುಶಾಂತ್ ಸಿಂಗ್ ಕೇದಾರನಾಥ್ ಪಿಕೆ, ಶುದ್ಧ ದೇಸಿ ರೋಮ್ಯಾನ್ಸ್, ಸೇರಿದಂತೆ ಇನ್ನೂ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದರು.
ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡುವ ಪ್ರಕಾರದಲ್ಲಿ, ಈಗಾಗಲೇ ಅವರ ಮನೆಯಲ್ಲಿ ಕೆಲವು ಮೆಡಿಕಲ್ ಸಂಬಂಧಪಟ್ಟ ಡಾಕ್ಯುಮೆಂಟ್ ಗಳು ಮನೆಯಲ್ಲಿ ಪತ್ತೆಯಾಗಿದ್ದು, ಮಾನಸಿಕ ಖಿನ್ನತೆಗೆ ಟ್ರೀತ್ಮೆಂಟ್ ಪಡೆಯುತ್ತಿದ್ದರು ಎನ್ನಲಾಗಿದೆ, ಮುಂಬೈನ ಬಾಂದ್ರಾದಲ್ಲಿ ಇರುವ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್ ಸಿಂಗ್ ಅವರ ಶವ ಪತ್ತೆಯಾಗಿದೆ, ಮನೆಕೆಲಸದವರು ಇದನ್ನು ನೋಡಿ ಗಾಬರಿಯಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇತ್ತೀಚಿಗೆ ಚಿಚೋರೆ ಎಂಬ ಸಿನಿಮಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕಥೆಯನ್ನು ಹೊಂದಿರುವ ಚಿತ್ರದಲ್ಲಿ ನಟನೆ ಮಾಡಿದ ಇವರೇ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿರುವುದು ನಿಜವಾಗಿಯೂ ಎಲ್ಲರಿಗೂ ಶಾಕ್ ಮೂಡಿಸಿದೆ, ಇನ್ನು ಕಳೆದ ತಿಂಗಳು ಒಂಬತ್ತು ನೇ ತಾರೀಕು ಸುಶಾಂತ್ ಅವರ ಮಾಜಿ ಕಾರ್ಯದರ್ಶಿಯಾದ ದಿಶಾ ಸಾಲಿಯಾನ್ ಕಟ್ಟಡ ಒಂದರಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು.