ಮಾನವನಿಗೆ ಹಲವು ರೀತಿಯ ಕಾಯಿಲೆಗಳು ಕಾಡುತ್ತವೆ ಪ್ರತಿಯೊಂದು ರೋಗಕ್ಕೂ ಮಾನವ ಪ್ರಕೃತಿಯಲ್ಲಿ ಸಿಗುವ ವಸ್ತುಗಳನ್ನು ಬಳಸಿ ಔಷಧಗಳನ್ನು ಕಂಡುಹಿಡಿದಿದ್ದಾನೆ ಆದರೆ ಮನುಷ್ಯನ ಬುದ್ಧಿಗೂ ಮೀರಿದ ಕಾಯಿಲೆಗಳು ಭೂಮಿಯ ಮೇಲೆ ಇನ್ನೂ ಇದೆ, ಇಂತಹ ಕಾಯಿಲೆಗಳಲ್ಲಿ ಬಲು ಭಯಂಕರವಾದ ಕಾಯಿಲೆ ಎಂದರೆ ಕ್ಯಾನ್ಸರ್, ಕ್ಯಾನ್ಸರ್ ಗೆ ಯಾವುದೇ ಔಷಧವನ್ನು ಯಾರೂ ಸಹ ಇದುವರೆಗೂ ಕಂಡು ಹಿಡಿದಿರಲಿಲ್ಲ, ಆದರೆ ಇಸ್ರೇಲ್ ನ ವಿಜ್ಞಾನಿಗಳು ಕ್ಯಾನ್ಸರ್ ಗೆ ಔಷಧವನ್ನು ಕಂಡು ಹಿಡಿದು ಬಹುದೊಡ್ಡ ಕೊಡುಗೆಯನ್ನು ಮಾನವಕುಲಕ್ಕೆ ನೀಡಿದ್ದಾರೆ.
ಕ್ಯಾನ್ಸರ್ ಬಂದರೆ ಅದು ಮೊದಲನೇ ಹಂತದಲ್ಲಿ ತಿಳಿದರೆ ಆಗ ಔಷಧಿಗಳನ್ನು ಕೊಟ್ಟು ಕ್ಯಾನ್ಸರನ್ನು ಗುಣಪಡಿಸಬಹುದು, ಮೊದಲನೇ ಹಂತವನ್ನು ಕ್ಯಾನ್ಸರ್ ರೋಗವು ದಾಟಿದರೆ ಯಾವುದೇ ಕಾರಣಕ್ಕೂ ಆ ವ್ಯಕ್ತಿಯನ್ನು ಸಾವಿನಿಂದ ಬದುಕಿಸಲು ಸಾಧ್ಯವಾಗವುದಿಲ್ಲ, ನಿಮಗೆ ತಿಳಿದಿರಲಿ ಪ್ರತಿನಿತ್ಯವೂ ಕ್ಯಾನ್ಸರ್ ನಿಂದ ಸಾವಿರಾರು ಜನರು ಸಾಯುತ್ತಿದ್ದಾರೆ.
ಇಂತಹ ಬಲು ಭಯಾನಕ ಖಾಯಿಲೆಯಾದ ಕ್ಯಾನ್ಸರ್ ಗೆ ಪರಿಣಾಮಕಾರಿ ಔಷಧ ಒಂದನ್ನು ಕಂಡುಹಿಡಿಯಲು ನಮ್ಮ ಭಾರತವೂ ಸೇರಿ ಹಲವು ದೇಶದ ವಿಜ್ಞಾನಿಗಳು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಆದರೆ ಯಾವುದೇ ಪ್ರತಿಫಲವು ಸಿಗಲಿಲ್ಲ, ಇಸ್ರೇಲ್ ನ ವಿಜ್ಞಾನಿಗಳು ಕ್ಯಾನ್ಸರ್ ಗೆ ಕಾರಣವಾಗುವ ಅಂಶಗಳು ಮತ್ತು ಕ್ಯಾನ್ಸರ್ ಕೋಶಗಳನ್ನು ಮಾತ್ರ ಗುರಿಯಾಗಿಸಿ ನೇರ ಅವುಗಳ ಮೇಲೆ ದಾಳಿ ಮಾಡಿ ಅವುಗಳನ್ನು ನಾಶ ಮಾಡುವಂತಹ ಔಷಧವನ್ನು ಕಂಡು ಹಿಡಿದಿದ್ದಾರೆ.
ಈ ವೈದ್ಯರ ತಂಡ ನೀಡಿದ ಮಾಹಿತಿಯ ಪ್ರಕಾರ 2020 ರ ಒಳಗೆ ಸಂಪೂರ್ಣವಾಗಿ ಕ್ಯಾನ್ಸರನ್ನು ಗುಣಪಡಿಸುವ ಔಷಧಿ ತಯಾರಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ, ಸದ್ಯ ಔಷಧಿಯನ್ನು ತಯಾರಿಸಿದ ವಿಜ್ಞಾನಿಗಳು ಮೊದಲು ಇಲಿಗಳ ಮೇಲೆ ಪ್ರಯತ್ನ ಮಾಡಿದ್ದು ಅದು 100% ಯಶಸ್ವಿಯನ್ನು ಕಂಡಿದ್ದು ಇದೇ 2019 ನೇ ಇಸವಿಯಲ್ಲಿ ಮಾನವರ ಮೇಲೆ ಪ್ರಯೋಗ ಮಾಡಲಿದ್ದಾರೆ.
ಇನ್ನು ಇವರು ಕಂಡು ಹಿಡಿದಿರುವ ಔಷಧಿಯಿಂದ ಮಾನವರಿಗೆ ಯಾವುದೇ ದುಷ್ಪರಿಣಾಮಗಳು ಸಂಭವಿಸುವುದಿಲ್ಲ ಹಾಗೂ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಇತರ ಔಷಧಿ ಗಳಿಗಿಂತಲೂ ಬೆಲೆ ಕಡಿಮೆ ಇರಲಿದ್ದು ಪ್ರತಿ ಜನಸಾಮಾನ್ಯರಿಗೂ ಔಷಧಿ ಅಗ್ಗದಲ್ಲಿ ದೊರೆಯಲಿದೆಯಂತೆ, ಔಷಧಿಯು ನೇರವಾಗಿ ಕ್ಯಾನ್ಸರ್ ಸಂಬಂಧಿತ ಕೋಶಗಳನ್ನು ನಾಶಮಾಡುತ್ತದೆ ಬರೆದು ದೇಹದಲ್ಲಿನ ಇತರ ಆರೋಗ್ಯಕರ ಜೀವಕೋಶಗಳಿಗೆ ಯಾವುದೇ ಹಾನಿಯನ್ನು ಉಂಟು ಮಾಡುವುದಿಲ್ಲ ಎಂಬ ಸ್ಪಷ್ಟನೆಯನ್ನು ಸಹ ನೀಡಿದ್ದಾರೆ.