ಬೆಳಿಗ್ಗೆ ಬೇಗ ಏಳಬೇಕು ಎಂಬುದು ಎಲ್ಲರಿಗೂ ಆಸೆ ಇರುತ್ತದೆ. ಬೇಗ ಎದ್ದು ವ್ಯಾಯಾಮ ಮಾಡಬೇಕು, ಜಿಮ್ಮಿಗೆ ಹೋಗಿ ಬಾಡಿ ಬೆಳೆಸಬೇಕು,ಯೋಗಾಸನ ಮಾಡಬೇಕು, ಓದಬೇಕು ಹೀಗೆ ಬೆಳಿಗ್ಗೆ ಬೇಗ ಎದ್ದು ಕೆಲಸ ಮಾಡಬೇಕು ಎಂಬ ಆಸೆ ಇರುತ್ತೆ.ಆದರೆ ಅವರಿಗೆ ರಾತ್ರಿ ಇದ್ದ ಆಸೆ ಬೆಳಿಗ್ಗೆ ಇರುವುದಿಲ್ಲ. ಏಳುವುದಕ್ಕೆ ಮನಸ್ಸಾಗುವುದಿಲ್ಲ. ಎಚ್ಚರಿಕೆ ಆದರೂ ಒಂದು ರೀತಿಯ ನಿದ್ದೆಯ ಗುಂಗು ಏಳುವುದಕ್ಕೆ ಬಿಡುವುದಿಲ್ಲ.
ಹಾಗಾದರೆ ಬೇಗ ಬೆಳಿಗ್ಗೆ ಏಳಲು ಏನು ಮಾಡಬೇಕು. ಬೇಗ ಎದ್ದರೆ ನಮಗೆ ಹೆಚ್ಚು ಸಮಯ ಸಿಗುತ್ತದೆ. ಇದರಿಂದ ನಮಗೆ ಹೆಚ್ಚು ಓದಬಹುದು, ಕೆಲಸ ಮಾಡಬಹುದು , ಅಥವಾ ನಮ್ಮ ದೈನಂದಿನ ಕೆಲಸ ಬೇಗ ಮುಗಿಸಿ ಪಾರ್ಟ್ ಟೈಂ ಜಾಬ್ ಮಾಡಬಹುದು .ಇದರಿಂದ ಮನಸ್ಸು ಉಲ್ಲಾಸ ಆಗಿರುತ್ತದೆ.
ಬೆಳಿಗ್ಗೆ ನಮ್ಮ ಮೈಂಡ್ ರಿಪ್ರೆಶ್ ಇರುತ್ತದೆ .ಯಾವುದೇ ಒತ್ತಡ ಇರುವುದಿಲ್ಲ. ನಮ್ಮ ಮೆದುಳಿನಲ್ಲಿ ಆಲೋಚನೆ ಕಡಿಮೆ ಇರುತ್ತದೆ. ಬೆಳಿಗ್ಗೆ ನಮ್ಮ ವಿಲ್ ಪವರ್ ಜಾಸ್ತಿ ಇರುತ್ತದೆ. ಅಂದರೆ ನಮ್ಮ ಮಾನಸಿಕ ಸಾಮರ್ಥ್ಯ ಹೆಚ್ಚು ಇರುತ್ತದೆ. ಹಾಗೂ ಏಕಾಗ್ರತೆ ಜಾಸ್ತಿ ಇರುತ್ತದೆ. ಇದರಿಂದ ನಾವು ಆಲೋಚನೆ ಮಾಡುವ ಸಾಮರ್ಥ್ಯ ಹೆಚ್ಚು ಇರುತ್ತದೆ. ನಾವು ನಮ್ಮ ಭವಿಷ್ಯದ ಆಲೋಚನೆಯನ್ನು ಸರಿ ರೀತಿಯಲ್ಲಿ ರೂಪಿಸುವ ಯೋಚನೆ ಮಾಡಬಹುದು.
ಬೆಳಿಗ್ಗೆ ಸಮಯದಲ್ಲಿ ನಮ್ಮ ಏಕಾಗ್ರತೆ ಹೆಚ್ಚು ಇರುವುದರಿಂದ ಕೆಲಸ ಬೇಗ ಮಾಡಬಹುದು. ದಿನದ ಬೇರೆ ಸಮಯದಲ್ಲಿ ಮೂರು ಗಂಟೆಗಳ ಕೆಲಸವನ್ನು ನಾವು ಬೆಳಿಗ್ಗೆ ಒಂದೇ ಗಂಟೆಯಲ್ಲಿ ಮಾಡಬಹುದು. ಬೆಳಿಗ್ಗೆ ನಾವು ಮುಖ್ಯವಾದ ಕೆಲಸ ಮಾಡುವುದರಿಂದ ದಿನದಲ್ಲಿ ನಾವು ಆರಾಮಾಗಿ ಇರಬಹುದು.
ಬೆಳಿಗ್ಗೆ ಬೇಗ ಏಳಬೇಕೆಂದರೆ ಈಗ ನಾವು ಹೇಳಿದಂತೆ ಮಾಡಿ, ಬೆಳಿಗ್ಗೆ ಬೇಗ ಏಳದಿರುವುದಕ್ಕೆ ಬಹು ಮುಖ್ಯ ಕಾರಣ ನಿದ್ದೆಯ ಗುಂಗು. ನಾವು ತಡರಾತ್ರಿಯವರೆಗೂ ಸ್ಮಾರ್ಟ್ ಫೋನ್ ಬಳಸುವುದು. ಇದರಿಂದ ನಾವು ರಾತ್ರಿ ನಿದ್ದೆ ಲೆಟಾಗಿ ಹೋಗುತ್ತೇವೆ.ಆದುದರಿಂದ ಸ್ಮಾರ್ಟ್ ಫೋನ್ ರಾತ್ರಿ ಮಲಗುವಾಗ ಬಳಸಬೇಡಿ. ರಾತ್ರಿ ಬೇಗ ಮಲಗಿ.
ಅಲರಾಂ ಇಟ್ಟುಕೊಂಡವರು ಅದು ಬಡಿದಾಗ ಆಫ್ ಮಾಡಿ ಮಲಗುತ್ತಾರೆ. ಆಗ ಅಲರಾಂ ನ್ನು ಸ್ವಲ್ಪ ದೂರ ಇಡಬೇಕು. ಎದ್ದು ಹೋಗಿ ಆಫ್ ಮಾಡಿದಾಗ ಮತ್ತೆ ಮಲಗಬಾರದು.ರಾತ್ರಿ ನೀವು ಬೇಗ ಮಲಗುವ ಅಭ್ಯಾಸ ಮಾಡಿಕೊಳ್ಳಿ. ಆಗ ಬೇಗ ಎಚ್ಚರ ಆಗುತ್ತದೆ.